ಶ್ರೀ ಬಲಮುರಿ ಶಕ್ತಿ ಗಣಪತಿಗೆ ಅಂಗಾರಕ ಸಂಕಷ್ಟ ಚತುರ್ಥಿ ವಿಶೇಷ ಪೂಜೆ

ವೈಚಾರಿಕ ವಾರ್ತೆ,ಅರಸೀಕೆರೆ:
ನಗರದ ಬಿ.ಹೆಚ್ ರಸ್ತೆ ಪ್ರವಾಸಿ ಮಂದಿರ ಬಳಿ ಇರುವ ಶ್ರೀ ಬಲಮುರಿ ಶಕ್ತಿ ಗಣಪತಿಗೆ ಅಂಗಾರಕ ಸಂಕಷ್ಟ ಚತುರ್ಥಿ ಪ್ರಯುಕ್ತ ಲೋಕಕಲ್ಯಾಣಾರ್ಥವಾಗಿ ಇಂದು ವಿಶೇಷ ಪೂಜಾ ಕೈಂಕರ್ಯಗಳು ನೆರವೇರಿದವು.
ಪ್ರಾತಃ ಕಾಲದಿಂದಲೇ ಶ್ರೀಯವರಿಗೆ ಮಹಾಗಣಪತಿ, ನವಗ್ರಹ, ವಾಸ್ತು, ಮೃತ್ಯುಂಜಯ, ಧನ್ವಂತರಿ ಮತ್ತು ಕಳ ಹೋಮ ಹವನಾದಿಗಳು ನೆರವೇರಿದವು.ಖ್ಯಾತ ವಕೀಲ ವಿವೇಕ್ ದಂಪತಿ ಹೋಮದ ನೇತೃತ್ವ ವಹಿಸಿದ್ದರು.

ವೇ.ಬ್ರ ಆಧಿತ್ಯ ಕಣಕಟ್ಟೆ , ವೇ.ಬ್ರ ಗುರುರಾಜ ವಟಿ ಮತ್ತು ತಂಡದವರಿಂದ ಪೂಜಾ ಕೈಂಕರ್ಯಗಳು ನೆರವೇರಿದವು. ಈ ಸಂದರ್ಭದಲ್ಲಿ ನಗರಸಭೆ ಅಧ್ಯಕ್ಷ ಎಂ.ಸಮೀವುಲ್ಲಾ, ಡಿವೈಎಸ್ಪಿ ಗೋಪಿ, ಪೌರಾಯುಕ್ತ ಕೃಷ್ಣಮೂರ್ತಿ, ದೇವಾಲಯ ಸಮಿತಿ ಅಧ್ಯಕ್ಷ ಸುರೇಂದ್ರ ನಾಥ್, ಕಾರ್ಯದರ್ಶಿ ಕೆ.ಪಿ ವೆಂಕಟೇಶಮೂರ್ತಿ, ಪದಾಧಿಕಾರಿಗಳಾದ ಕೆ.ಪಿ ವಿಶ್ವನಾಥ್, ಶಿವಮೂರ್ತಿ, ಗೋವಿಂದರಾಜು, ಚಂದ್ರಶೇಖರ್, ಆನಂದ್, ಕಾಳಿಪ್ರಸಾದ್, ನಾರಾಯಣಸ್ವಾಮಿ ಸೇರಿದಂತೆ ನೂರಾರು ಭಕ್ತರು ಭಾಗವಹಿಸಿದ್ದರು.
ಆಗಮಿಸಿದ್ದ ಭಕ್ತಾಧಿಗಳಿಗೆ ಪ್ರಸಾದ ವಿನಿಯೋಗ ಏರ್ಪಡಿಸಲಾಗಿತ್ತು.

Leave a Reply

Your email address will not be published. Required fields are marked *

error: Content is protected !!