ಫೆಬ್ರವರಿ 28ರಂದು ಶ್ರೀ ಕೆಂಚರಾಯಸ್ವಾಮಿಯವರ ಅದ್ದೂರಿ ಹರಿಸೇವೆ

ಅರಸೀಕೆರೆ: ತಾಲೂಕಿನ ಕಸಬಾ ಹೋಬಳಿ ಹುಲ್ಲೇನಹಳ್ಳಿ ಗ್ರಾಮದ ಶ್ರೀ ಕೆಂಚರಾಯ ಸ್ವಾಮಿಯವರ ಅದ್ದೂರಿ ಹರಿಸೇವೆ ಕಾರ್ಯಕ್ರಮವನ್ನು ನಡೆಸಲಾಗುವುದು.
ಬೆಳಿಗ್ಗೆ 10.30 ಕ್ಕೆ ಶ್ರೀ ಕೆಂಚರಾಯಸ್ವಾಮಿ ಶ್ರೀ ಚಿಕ್ಕಮ್ಮ ದೇವಿ ಶ್ರೀ ದೂತರಾಯ ಸ್ವಾಮಿಯವರಿಗೆ ಭಕ್ತಾದಿಗಳಿಂದ ಹರಿಕೆ ಸಲ್ಲಿಸುವ ಮತ್ತು ನೈವೇದ್ಯ ಸೇವೆಯನ್ನು ಏರ್ಪಡಿಸಲಾಗಿದೆ.
ಸಂಜೆ 7:30ಕ್ಕೆ ಶ್ರೀ ಕೆಂಚಮ್ಮ ದೇವಿ, ಶ್ರೀ ದೂತರಾಯ ಸ್ವಾಮಿ, ಶ್ರೀ ಚೆಲುವರಾಯಸ್ವಾಮಿಯವರ ಅದ್ದೂರಿ ಉತ್ಸಾಹ ಏರ್ಪಡಿಸಲಾಗಿದೆ. ರಾತ್ರಿ 9ಕ್ಕೆ ಮಹಾಮಂಗಳಾರತಿ ಪ್ರಸಾದ ವಿನಿಯೋಗ ಏರ್ಪಡಿಸಲಾಗಿದೆ.
ಈ ಹರಿಸೇವೆಯಲ್ಲಿ ಕರ್ನಾಟಕ ಗೃಹ ಮಂಡಳಿಯ ಅಧ್ಯಕ್ಷರು ಹಾಗೂ ಶಾಸಕರಾದ ಕೆ ಎಂ ಶಿವಲಿಂಗೇಗೌಡ, ಲೋಕಸಭಾ ಸದಸ್ಯ ಶ್ರೇಯಸ್ ಪಟೇಲ್, ಮಾಜಿ ಜಿಲ್ಲಾ ಪಂಚಾಯತ್ ಉಪಾಧ್ಯಕ್ಷ ಬಿಳಿ ಚೌಡಯ್ಯ, ಹಾಸನ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪಟೇಲ್ ಶಿವಪ್ಪ, ಮಾಜಿ ಜಿಲ್ಲಾ ಪಂಚಾಯತ್ ಅಧ್ಯಕ್ಷ ಹುಚ್ಚೇಗೌಡ ಇವರು ವಿಶೇಷ ಆಹ್ವಾನಿತರಾಗಿದ್ದಾರೆ.
ಭಕ್ತಾದಿಗಳು ತಮ್ಮ ತನುಮನ ಹಾಗೂ ಧನ ಸಹಾಯದೊಂದಿಗೆ ಹರಿಸೇವೆಗೆ ಭಾಗವಹಿಸಿ ಕೃಪೆಗೆ ಪಾತ್ರರಾಗಬೇಕಾಗಿ ಆಡಳಿತ ಮಂಡಳಿಯ ಶಿವರಾಜು, ಎಚ್ ಸಿ ನಾಗರಾಜ್, ಗಂಗಾಧರ್, ಶ್ರೀ ಕನಕ ಯುವಪಡೆ ಹಾಗೂ ಉಲ್ಲೇನಹಳ್ಳಿ ಗ್ರಾಮಸ್ಥರು ಮನವಿ ಮಾಡಿದ್ದಾರೆ.

Leave a Reply

Your email address will not be published. Required fields are marked *

error: Content is protected !!