ಶ್ರೀಯೋಗಿರಾಜ ವಿಜಯ ಶಾಂತಿ ಸೂರಿ ಮಂದಿರ ಲೋಕಾರ್ಪಣೆ
ಅರಸೀಕೆರೆ : ತಾಲೂಕಿನ ಜಾಜೂರು ಗ್ರಾಮದ ಸಮೀಪದಲ್ಲಿನ ಶ್ರೀದಕ್ಷಿಣ ನಾಕೋಡ ಶ್ರೀಭೈರವ ಧಾಮ ಸುಕ್ಷೇತ್ರದಲ್ಲಿ ಯೋಗಿರಾಜ್ ಶ್ರೀವಿಜಯಶಾಂತಿ ಸೂರಿ ಗುರೂಜೀ ಹಾಗೂ ಪದ್ಮಾವತಿ ದೇವಿ, ಸರಸ್ವತಿ ದೇವಿ ಮಂದಿರಗಳ ಪ್ರತಿಷ್ಠಾಪನಾ ಮಹೋತ್ಸವ ಹಾಗೂ ಧಾರ್ಮಿಕ ಪೂಜಾ ಸಮಾರಂಭವು ಅತ್ಯಂತ ವಿಜೃಂಭಣೆಯಿಂದ ಶಾಸ್ತ್ರೋಕ್ತವಾಗಿ ಲೋಕಾರ್ಪಣೆಗೊಂಡಿತು.
ತಾಲೂಕಿನ ಜಾಜೂರು ಗ್ರಾಮದ ಸಮೀಪದಲ್ಲಿನ ನಾಕೋಡ ಶ್ರೀಭೈರವಧಾಮ ಸುಕ್ಷೇತ್ರದಲ್ಲಿನ ನೂತನ ದೇವಾಲಯ ಪ್ರತಿಷ್ಠಾಪನಾ ಮಹೋತ್ಸವದ ಅಂಗವಾಗಿ ವಿಶೇಷವಾಗಿ ದೇವಾಲಯ ಗೋಪುರಕ್ಕೆ ಪೂಜೆಯನ್ನು ಧಾರ್ಮಿಕ ವಿದಿ ವಿಧಾನಗಳೊಂದಿಗೆ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ನೆರವೇರಿಸಿದ ನಂತರ ದೇವಾಲಯದ ಮೇಲ್ಬಾಗದಲ್ಲಿರುವ ಗೋಪುರಕ್ಕೆ ಹೆಲಿಕ್ಯಾಪ್ಟರ್ ಮುಖಾಂತರ ಮೂರು ಬಾರಿ ಪುಷ್ಪಾರ್ಚನೆ ಮಾಡಿದ ಸುಂದರ ದೃಶ್ಯವನ್ನು ಕಣ್ಣಾರೆ ಕಂಡು
ಧನ್ಯತಾ ಭಾವನೆಯನ್ನು ಸಮರ್ಪಿಸಿದರು.
ಈ ನಾಲ್ಕು ದಿನಗಳ ಧಾರ್ಮಿಕ ಪೂಜಾ ವಿದಿ ವಿಧಾನಗಳನ್ನು ಜೈನಧರ್ಮದ ಆಚಾರ್ಯ ರಾದ ಶ್ರೀದೇವೇಂದ್ರ ಸಾಗರ್ ಗುರೂಜಿ ತಂಡ ದವರು ಶ್ರದ್ದಾಭಕ್ತಿಯಿಂದ ನೆರವೇರಿಸಿದರು.
ರಾಜ್ಯದ ವಿವಿಧ ಭಾಗಗಳಿಂದ ಜೈನ ಸಮಾಜ ದ ಮುಖಂಡರು, ಯುವಕರು,ಯುವತಿಯರು ಹಾಗೂ ವಿವಿಧ ಸಮಾಜದ ಮುಖಂಡರುಗಳು ರಾಜಕೀಯ ಪಕ್ಷಗಳ ನಾಯಕರು ಆಗಮಿಸಿ
ಧಾರ್ಮಿಕ ಸಮಾರಂಭದಲ್ಲಿ ಭಾಗವಹಿಸಿದ್ದರು.
ನಾಲ್ಕು ದಿನಗಳ ಧಾರ್ಮಿಕ ಸಮಾರಂಭದಲ್ಲಿ ಕರ್ನಾಟಕ ಗೃಹ ಮಂಡಲಿ ಅಧ್ಯಕ್ಷರು ಹಾಗೂ ಶಾಸಕ ಕೆ.ಎಂ.ಶಿವಲಿಂಗೇಗೌಡ, ತಿಪಟೂರು ಕ್ಷೇತ್ರದ ಶಾಸಕ ಷಡಕ್ಷರಿ, ಮಾಜಿ ಶಾಸಕರಾದ ಕೆ.ಪಿ.ಪ್ರಭುಕುಮಾರ್,ಜಿ.ಎಸ್.ಪರಮೇಶ್ವರಪ್ಪ, ಹುಡಾ ಅಧ್ಯಕ್ಷರಾದ ಪಟೇಲ್ ಶಿವಪ್ಪ, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಅರುಣ್ ಕುಮಾರ್,ಮಾಜಿ ಅಧ್ಯಕ್ಷ ಎನ್. ಡಿ. ಪ್ರಸಾದ್, ನಗರಸಭೆ ಮಾಜಿ ಅಧ್ಯಕ್ಷರಾದ ವಿದ್ಯಾಧರ್, ಗಿರೀಶ್, ಗ್ಯಾರಂಟಿ ಸಮಿತಿ ತಾಲೂಕು ಅಧ್ಯಕ್ಷ ಧರ್ಮಶೇಖರ್, ಇನ್ನಿತರರು ಭಾಗವಹಿಸಿದ್ದರು. ಶ್ರೀಬೈರವ ಧಾಮ ಟ್ರಸ್ಟ್ ಸಂಸ್ಥಾಪಕ ಅಧ್ಯಕ್ಷ ಅಶೋಕ್ ಸುರಾನಾ, ವಿಜಯ ಸುರಾನಾ ಶ್ರೀವಿಜಯಶಾಂತಿ ಸೂರಿ ಗುರೂಜೀ ಟ್ರಸ್ಟ್
ಅಧ್ಯಕ್ಷ ಸುರೇಶ್ ಮೆಹ್ತಾ,ಮಂಗಿಲಾಲ್ ಮೆಹ್ತಾ, ರಮೇಶ್ ಪರಮಾರ್, ಧೀರಜ್ ಜೈನ್ ದುಬೈ, ಭೈರವ ಟ್ರಸ್ಟ್ ಸದಸ್ಯರಾದ ಪಾರಸ್ ಮಲ್ ಮೆಹ್ತಾ, ಮನೋಹರ್, ಜ್ಞಾನೇಶ್ ಮೆಹತ, ಕಮಲೇಶ್ ಸುರಾನಾ,ಜೈನ ಸಮಾಜದ ಅಧ್ಯಕ್ಷ ಮಹಾವೀರ ಬೋಹರ, ಶಾಂತರಾಜು ಜೈನ್, ಜೈನ ಸಂಘಟನೆ ಅಧ್ಯಕ್ಷರಾದ ಚೇತನ್ ಜೈನ್
ಹಾಗೂ ಇನ್ನಿತರರು ಉಪಸ್ಥಿತರಿದ್ದರು.

algolist: 0;
multi-frame: 0;
brp_mask:0;
brp_del_th:null;
brp_del_sen:null;
motionR: null;
delta:null;
bokeh:0;
module: photo;hw-remosaic: false;touch: (-1.0, -1.0);sceneMode: 9961472;cct_value: 0;AI_Scene: (-1, -1);aec_lux: 191.0;aec_lux_index: 0;albedo: ;confidence: ;motionLevel: 0;weatherinfo: weather?null, icon:null, weatherInfo:100;temperature: 45;
