ಶ್ರೀ ಗುರು ರಾಘವೇಂದ್ರ ಸ್ವಾಮಿ ಉತ್ತರಾಧನೆ ಭವ್ಯ ಮೆರವಣಿಗೆ

ಅರಸೀಕೆರೆ:
ನಗರದ ಶ್ರೀ ರಾಘವೇಂದ್ರ ಸ್ವಾಮಿ ಮಠದಲ್ಲಿ ನಡೆಯುತ್ತಿರುವ ಮೂರು ದಿನಗಳ ಆರಾಧನ ಮಹೋತ್ಸವ ಕೊನೆ ದಿನವಾದ ಇಂದು ಉತ್ತರಾಧನೆ ನಿಮಿತ್ತ ನಗರದ ವಿವಿಧ ರಾಜಬೀದಿಗಳಲ್ಲಿ ನೂರಾರು ಭಕ್ತರ ನೇತೃತ್ವದಲ್ಲಿ ಭವ್ಯ ಮೆರವಣಿಗೆ ನೆರವೇರಿತು.

ಪ್ರಾತಃ ಕಾಲದಿಂದಲೇ ನಿರ್ಮಾಲ್ಯ ಉಷಃಕಾಲ ಪೂಜೆ, 108 ಕಳಸ ಕ್ಷೀರಾಭೀಷೇಕ, ಫಲ ಪಂಚಾಮೃತಾಭಿಷೇಕ, ತುಳಸಿ ಪೂಜೆ , ಶ್ರೀರಾಯರ ಪಾದಪೂಜೆ, ಕನಕಾಭಿಷೇಕ, ಅಲಂಕಾರ ಸೇವೆ, ನೈವೇದ್ಯ, ಮಹಾಮಂಗಳಾರತಿ, ತೀರ್ಥಪ್ರಸಾದ ವಿನಿಯೋಗದೊಂದಿಗೆ ಶ್ರೀಮಠದಿಂದ ಪ್ರಾರಂಭವಾದ ಮೆರವಣಿಗೆಯು ಪೇಟೇಬೀದಿ, ಬಿ.ಹೆಚ್.ರಸ್ತೆ ಮತ್ತು ವಾಚನಾಲಯ ರಸ್ತೆ ಮೂಲಕ ಶ್ರೀಮಠದಲ್ಲಿ ಅಂತ್ಯಗೊಂಡಿತು.

ವಿವಿಧ ಹೂವುಗಳಿಂದ ಅಲಂಕೃತವಾದ ಭವ್ಯ ರಥದ ರಜತ ಮಂಟಪದಲ್ಲಿ ಅಸೀನರಾಗಿದ್ದ ಶ್ರೀ ಗುರು ರಾಘವೇಂದ್ರ ಸ್ವಾಮಿಯವರ ದರ್ಶನ ಮಾಡಿದ ನಾಗರೀಕರು ಪ್ರಾರ್ಥನೆ ಸಲ್ಲಿಸಿದರು.
ಕುಂದಾಪುರ ತಾಲ್ಲೂಕಿನ ಕೋಟೇಶ್ವರ ಶ್ರೀ ನೀರೆಶಾಲ್ಯ ಮಹಾಲಿಂಗೇಶ್ವರ ದೇವಸ್ಥಾನ ತಂಡದ ಚಂಡೆ ಮೇಳ ಮತ್ತು ಕೇಶವ ತಂಡದ ಮಂಗಳವಾದ್ಯ ಭಕ್ತಾಧಿಗಳ ಗಮನ ಸೆಳೆಯಿತು.

ಅರ್ಚಕರಾದ ನರಸಿಂಹಚಾರ್ಯ ನಾಗರಹಳ್ಳಿ, ಪ್ರದೀಪಚಾರ್ ತಂಡದಿಂದ ಪೂಜಾ ಕೈಂಕರ್ಯಗಳು ನೇರವೇರಲ್ಪಟ್ಟವು.
ಶ್ರೀ ಮಠದ ವ್ಯವಸ್ಥಾಪಕ ಸತ್ಯನಾರಾಯಣ ದೇಸಾಯಿ,
ಗೋವಿಂದ ರಾವ್, ಮಂಜುನಾಥ ರಾವ್, ಮುರಳಿ, ರವಿ ಭಟ್ ಹೆಗ್ಗಡೆ ಮತ್ತು ಸ್ವಯಂ ಸೇವಕರು ಹಾಗೂ ಭಕ್ತಾದಿಗಳು ಭಾಗವಹಿಸಿದ್ದರು.

Leave a Reply

Your email address will not be published. Required fields are marked *

error: Content is protected !!