ಪತ್ರಕರ್ತ ಟಿ ಎಂ ಜಗದೀಶ್ ರವರಿಗೆ ನಾಳೆ ಪ್ರಶಸ್ತಿ ಪ್ರಧಾನ
ಅರಸೀಕೆರೆ: ಹಾಸನ ನಗರದಲ್ಲಿ ನಾಳೆ ಆ.2ರಂದು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಅಂಗ ಸಂಸ್ಥೆಯಾದ ಹಾಸನ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ವತಿಯಿಂದ ನಡೆಯುವ ಮಾಧ್ಯಮ ದಿನಾಚರಣೆ ಕಾರ್ಯಕ್ರಮದಲ್ಲಿ “ನಾಡ ಸಹ್ಯಾದ್ರಿ “ಪ್ರಾದೇಶಿಕ ಪತ್ರಿಕೆ ವರದಿಗಾರರಾದ ಟಿ ಎಂ ಜಗದೀಶ್ ರವರು 2025- 26 ನೇ ಸಾಲಿನ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ನಾಡ ಸಹ್ಯಾದ್ರಿ ಪತ್ರಿಕೆಯ ಮೂಲಕ ಪತ್ರಿಕಾ ಕ್ಷೇತ್ರಕ್ಕೆ ಪಾದಾರ್ಪಣೆ ಮಾಡಿದ ನಂತರ ಸಂಜೆವಾಣಿ ದಿನಪತ್ರಿಕೆಯಲ್ಲಿ ಕಾರ್ಯನಿರ್ವಹಿಸಿದ್ದು, ಪ್ರಸ್ತುತ ನಾಡ ಸಹ್ಯಾದ್ರಿ ಪತ್ರಿಕೆಯಲ್ಲಿ ಇವರು10 ವರ್ಷಗಳಿಂದ ಸೇವೆ ಸಲ್ಲಿಸಿ ಈ ಪ್ರಶಸ್ತಿಗೆ ಪಾತ್ರರಾಗಿದ್ದಾರೆ.
ಹಾಸನ ನಗರದ ಪವನ ಪುತ್ರ ರೆಸಾರ್ಟ್ ನಲ್ಲಿ ನಡೆಯುವ ಭವ್ಯ ಕಾರ್ಯಕ್ರಮದಲ್ಲಿ ಹಲವಾರು ಗಣ್ಯರು ಭಾಗವಹಿಸಿ ಈ ಸಂದರ್ಭದಲ್ಲಿ ಸಾಕ್ಷಿಕರಿಸಲಿದ್ದಾರೆ.
ಅರಸೀಕೆರೆ ತಾಲ್ಲೂಕು ಘಟಕದ ಅಧ್ಯಕ್ಷ ಎಲ್ ಮಂಜುನಾಥ್, ಪ್ರಧಾನ ಕಾರ್ಯದರ್ಶಿ ಹೇಮಂತ್ ಕುಮಾರ್ ಸೇರಿದಂತೆ ಪದಾಧಿಕಾರಿಗಳು, ಸದಸ್ಯರು, ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಅಭಿನಂದಿಸಿದ್ದಾರೆ.