ಪ.ಜಾತಿ, ಪ.ಪಂಗಡದ ವಿದ್ಯಾರ್ಥಿಗಳಿಗೆ ನಗರಸಭೆ ವತಿಯಿಂದ ವಿದ್ಯಾರ್ಥಿ ವೇತನ ವಿತರಣೆ

ಅರಸೀಕೆರೆ:
2025- 26 ನೇ ಸಾಲಿನ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಕಲ್ಯಾಣ ಕಾರ್ಯಕ್ರಮದ ಅಡಿಯಲ್ಲಿ ಎಸ್ ಎಫ್ ಸಿ ಯೋಜನೆ ಅನುದಾನದ ಅಡಿಯಲ್ಲಿ ಪರಿಶಿಷ್ಟ ಜಾತಿ 74 ವಿದ್ಯಾರ್ಥಿಗಳಿಗೆ 4,36,500 ರೂಗಳು ಮತ್ತು ಪರಿಶಿಷ್ಟ ಪಂಗಡದ 11 ವಿದ್ಯಾರ್ಥಿಗಳಿಗೆ 48,000 ರೂಗಳ ಸಹಾಯಧನ ಒಟ್ಟು 85 ವಿದ್ಯಾರ್ಥಿಗಳಿಗೆ ಒಟ್ಟು 4,84,500 ರೂಪಾಯಿಗಳು ಪ್ರೋತ್ಸಾಹ ಧನದ ದಾಖಲೆ ಪ್ರಮಾಣ ಪತ್ರವನ್ನು ನಗರಸಭೆ ಅಧ್ಯಕ್ಷ ಎಂ ಸಮಿವುಲ್ಲಾ ವಿತರಣೆ ಮಾಡಿದರು.
ಅವರು ನಗರ ಸಭೆ ಕಚೇರಿ ಆವರಣದಲ್ಲಿ ಆಯೋಜಿಸಿದ್ದ ಸಭೆಯಲ್ಲಿ ಅತಿ ಹೆಚ್ಚು ಅಂಕಗಳನ್ನು ಗಳಿಸಿ ಉತ್ತೀರ್ಣರಾಗಿದ್ದ ಮಕ್ಕಳಿಗೆ ಅರಸೀಕೆರೆ ನಗರಸಭೆ ವತಿಯಿಂದ ದಾಖಲೆ ಪ್ರಮಾಣದ ಹಣವನ್ನು ವಿದ್ಯಾರ್ಥಿ ವೇತನವನ್ನಾಗಿ ನಗರದ ಮಕ್ಕಳು ಇನ್ನೂ ಹೆಚ್ಚಿನ ರೀತಿಯಲ್ಲಿ ಅಂಕಗಳನ್ನು ಪಡೆದು ಉತ್ತೀರ್ಣರಾಗಲು ನಗರಸಭೆ ವತಿಯಿಂದ ಸ್ಫೂರ್ತಿ ತುಂಬಲಾಗಿದೆ ಎಂದು ಹೇಳಿದರು.
ಎಸ್ ಎಸ್ ಎಲ್ ಸಿ, ಪಿಯುಸಿ, ಸ್ನಾತಕೋತ್ತರ ಪದವಿ, ಪಿ ಎಚ್ ಡಿ ಸೇರಿದಂತೆ ವಿವಿಧ ಹಂತಗಳಲ್ಲಿ ಬಡತನ ರೇಖೆಯಿಂದ ಕಷ್ಟಪಟ್ಟು ವಿದ್ಯಾಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ ಪ್ರಮಾಣ ಪತ್ರ ವಿತರಿಸಿ ಮಾತನಾಡಿ ತಮ್ಮ ಮುಂದಿನ ಹಂತದ ವಿದ್ಯಾಭ್ಯಾಸಕ್ಕೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ ಪ್ರೋತ್ಸಾಹ ಧನ ನೀಡಲಾಗಿದೆ ಹಾಗೂ ಅರಸೀಕೆರೆ ನಗರದ ಕೀರ್ತಿಯನ್ನು ಹೆಚ್ಚಿಸಲು ಮಕ್ಕಳು ಮುಂದಾಗಬೇಕೆಂದು ನಗರಸಭೆ ಅಧ್ಯಕ್ಷ ಎಂ ಸಮೀವುಲ್ಲಾ ಮಕ್ಕಳು ಮತ್ತು ಪೋಷಕರಿಗೆ ಕಿವಿ ಮಾತು ಹೇಳಿದರು.
ಡಾ: ಬಾಬಾ ಸಾಹೇಬ್ ಅಂಬೇಡ್ಕರ್ ರವರ ಕನಸು ನನಸು ಮಾಡಲು ಸಮಾಜದ ಅತ್ಯಂತ ಕೆಳಮಟ್ಟದ ಮಕ್ಕಳು ಕಷ್ಟಪಟ್ಟು ವಿದ್ಯಾಭ್ಯಾಸ ಮಾಡಿ ಮುಂದೆ ಬರಲು ಸಹಕಾರಿಯಾಗಬೇಕು ಹೀಗಾಗಿ ನಗರಸಭೆ ಅಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡಿ ಅವರೊಂದಿಗೂ ಚರ್ಚಿಸಿ ಅರಸೀಕೆರೆ ನಗರದ ಮಕ್ಕಳಿಗೆ ಸಹಾಯವಾಗುವಂತೆ ಈ ಹೆಚ್ಚಿನ ಹಣವನ್ನು ನೀಡುತ್ತಿರುವುದಾಗಿ, ಮುಂದೆ ಬರುವ ನಗರಸಭೆ ಅಧಿಕಾರಿಗಳಾಗಲಿ ಅಥವಾ ನಗರ ಸಭೆಯ ಅಧಿಕಾರ ನಡೆಸುವ ಸಂಬಂಧಪಟ್ಟವರಾಗಲಿ ಈ ಸರ್ಕಾರದ ಮಹತ್ವಕಾಂಕ್ಷಿ ಯೋಜನೆಯನ್ನು ಮುಂದೆ ಮುಂದುವರಿಸಿಕೊಂಡು ಡಾ: ಬಾಬಾ ಸಾಹೇಬ್ ಅಂಬೇಡ್ಕರ್ ರವರ ಕನಸು ನನಸು ಮಾಡಬೇಕೆಂದು ಎಂ ಸಮೀವುಲ್ಲಾ ತಿಳಿಸಿದರು. ನಗರ ಸಭೆ ಉಪಾಧ್ಯಕ್ಷರಾದ ಮನೋಹರ್. ಸದಸ್ಯರುಗಳಾದ ಅನ್ನಪೂರ್ಣ, ಅವಿನಾಶ್, ಸುಬ್ರಹ್ಮಣ್ಯ, ರೋಷನ್. ನಗರಸಭೆ ನಾಮನಿರ್ದೇಶತ ಸದಸ್ಯರಾದ ಮತ್ತು ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷರಾದ ಕಿರಣ್ ಕುಮಾರ್ ಮತ್ತು ನಗರಸಭೆಯ ಪ್ರಭಾರಿ ಲೆಕ್ಕಾಧಿಕಾರಿ ಜಮೀಲ್, ಸಮುದಾಯ ಸಂಘಟನಾಧಿಕಾರಿ ಎಂ ಹೆಚ್ ರಾಜಶೇಖರ್ ಸೇರಿದಂತೆ ಹಲವಾರು ನಗರಸಭಾ ಸದಸ್ಯರುಗಳು, ಸಿಬ್ಬಂದಿಗಳು, ವಿದ್ಯಾರ್ಥಿ ವೇತನ ಪಡೆಯಲು ಬಂದಿದ್ದ ವಿದ್ಯಾರ್ಥಿಗಳು ಹಾಗೂ ಪೋಷಕರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!