“ಮನೆ ಮನೆಗೆ ಪೊಲೀಸ್”ಎಂಬ ವಿನೂತನ ಕಾರ್ಯಕ್ರಮ ಇಂದಿನಿಂದ ಆರಂಭ.
ಅರಸೀಕೆರೆ:ಜನಸ್ನೇಹಿ ಪೊಲೀಸ್ ವ್ಯವಸ್ಥೆಯ ಭಾಗವಾಗಿ “ಮನೆ ಮನೆಗೆ ಪೊಲೀಸ್”ಎಂಬ ವಿನೂತನ ಕಾರ್ಯಕ್ರಮ ಇಂದಿನಿಂದ ಆರಂಭಗೋಳಿಸಲಾಯಿತು.
ಹಾಸನ ಜಿಲ್ಲಾ ಪೋಲಿಸ್, ಅರಸೀಕೆರೆ ಉಪವಿಭಾಗ, ಅರಸೀಕೆರೆ ನಗರ ಪೋಲಿಸ್ ಠಾಣೆಯ ವತಿಯಿಂದ ಮನೆ ಮನೆಗೆ ಪೋಲಿಸ್ ಎಂಬಾ ಕಾರ್ಯಕ್ರಮವನ್ನು ಅರಸೀಕೆರೆ ನಗರದ ಕರಿಯಮ್ಮ ದೇವಾಲಯದ ಆವರಣದಲ್ಲಿ ಚಾಲನೆ ನೀಡಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ನಗರದ ವೃತ್ತ ನಿರೀಕ್ಷಕರು “ಮನೆ ಮನೆಗೆ ಪೊಲೀಸ್ ” ಕಾರ್ಯಕ್ರಮವು
ಸಾರ್ವಜನಿಕರ ಸಮಸ್ಯೆಗಳನ್ನು ಆಲಿಸಲು ಪೊಲೀಸ್ ಸಿಬ್ಬಂದಿಯೇ ಮನೆ ಬಾಗಿಲಿಗೆ ಬರಲಿದ್ದಾರೆ.
ಮಹಿಳಾ ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿ ಮುಕ್ತವಾಗಿ ಮಹಿಳೆಯರ ಸಮಸ್ಯೆಯನ್ನು ಬೀಟ್‌ಗಳಲ್ಲಿಯೇ ಆಲಿಸಲಿದ್ದಾರೆ. ಮಹಿಳೆ ಮತ್ತು ಮಕ್ಕಳ ಸುರಕ್ಷತೆಯನ್ನು ಖಾತ್ರಿಪಡಿಸಿ ಸುರಕ್ಷಿತ ವಾತಾವರಣ ಕಲ್ಪಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಣೆ ಮಾಡಲಿದ್ದು, ಕೌಟುಂಬಿಕ ದೌರ್ಜನ್ಯ ವಿರುದ್ಧ ಜಾಗೃತಿ ಮತ್ತು ಕಾನೂನಿನ ಅರಿವು ಮೂಡಿಸಲಿದ್ದಾರೆ.
ಈ ಕಾರ್ಯಕ್ರಮವು ರಾಜ್ಯ ಸರಕಾರದ ವಿನೂತನ ಪರಿಕಲ್ಪನೆಯ ಕಾರ್ಯಕ್ರಮವಾಗಿದೆ. ಪೊಲೀಸರಿಂದ ಹೆಚ್ಚಿನ ಸೇವೆ ಈ ಮೂಲಕ ಜನರೆಡೆಗೆ ತಲುಪಲಿದೆ ಎಂದು ಹೇಳಿದರು. ನಂತರ ಕಾರ್ಯಕ್ರಮದ ಭಾಗವಾಗಿ ನಗರದ ಬಸ್ ನಿಲ್ದಾಣದಲ್ಲಿ ಅಭಿಯಾನ ಕೈಗೊಂಡರು.
ಈ ಸಂದರ್ಭದಲ್ಲಿ ಅರಸೀಕೆರೆ ನಗರ ಠಾಣೆಯ ಎಲ್ಲಾ ಪೋಲಿಸ್ ಸಿಬ್ಬಂದಿಗಳು ಹಾಜರಿದ್ದರು.