*ಕ್ರೀಡಾ ಕೂಟಕ್ಕೆ ಆಹ್ವಾನ*
ಆತ್ಮೀಯ ಪತ್ರಿಕಾ ಮಿತ್ರರೇ.
ಈ ಸಾಲಿನ ಪತ್ರಿಕಾ ದಿನಾಚಾರಣೆ ಅಂಗವಾಗಿ ಇದೇ ಶನಿವಾರ ಜುಲೈ 19ರಂದು ಹಾಸನ ನಗರದ ಸರ್ಕಾರಿ ಕಲಾ ಕಾಲೇಜಿನ ಕ್ರೀಡಾಂಗಣದಲ್ಲಿ ಕ್ರೀಡಾ ಕೂಟವನ್ನು ಆಯೋಜಿಸಲಾಗಿದೆ.
ಓಟದ ಸ್ಪರ್ಧೆ, ಗುಂಡು ಎಸೆತ, ಕ್ರಿಕೆಟ್ ಪಂದ್ಯಾವಳಿ ಸೇರಿದಂತೆ ಇನ್ನಿತರ ಕ್ರೀಡಾ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ.
ಆದ್ದರಿಂದ ಜಿಲ್ಲೆಯ ಎಲ್ಲಾ ಪತ್ರಕರ್ತರು ಅಂದು ಬೆಳಗ್ಗೆ 8.30ರೊಳಗೆ ಸರ್ಕಾರಿ ಕಲಾ ಕಾಲೇಜಿನ ಕ್ರೀಡಾಂಗಣದಲ್ಲಿ ಹಾಜರಾಗಲು ಕೋರಲಾಗಿದೆ.
ಬೆಳಗ್ಗೆ ತಿಂಡಿ ಮತ್ತು ಮಧ್ಯಾಹ್ನ ಊಟದ ವ್ಯವಸ್ಥೆ ಇರುತ್ತದೆ.
ಎಲ್ಲರಿಗೂ ಪ್ರೀತಿಯ ಸ್ವಾಗತ
ಅಧ್ಯಕ್ಷರು, ಮತ್ತು ಪದಾಧಿಕಾರಿಗಳು ,
ಕಾರ್ಯನಿರತ ಪತ್ರಕರ್ತರ ಸಂಘ, ಹಾಸನ