ಶ್ರೀ ಲಕ್ಷ್ಮಿ ವೆಂಕಟರಮಣ ಸ್ವಾಮಿ ದರ್ಶನ ಪಡೆದ ಜಿಲ್ಲಾಧಿಕಾರಿ ಕೆ ಎಸ್ ಲತಾಕುಮಾರಿ
ಅರಸೀಕೆರೆ : ನಗರ ಸಮೀಪವಿರುವ ರಾಜ್ಯದಲ್ಲೇ ಚಿಕ್ಕ ತಿರುಪತಿ ಎಂದು ಹೆಸರು ಪಡೆದಿರುವ ಶ್ರೀ ಅಮರಗಿರಿ ಮಾಲೆಕಲ್ ತಿರುಪತಿ ಶ್ರೀ ಲಕ್ಷ್ಮಿ ವೆಂಕಟರಮಣ ಸ್ವಾಮಿ ದೇವಾಲಯಕ್ಕೆ ಪ್ರಥಮ ಬಾರಿಗೆ ಜಾತ್ರಾ ಮಹೋತ್ಸವದ ಕೊನೆಯ ದಿನವಾದ ಇಂದು ಭೇಟಿ ನೀಡಿದ ಹಾಸನ ಜಿಲ್ಲಾಧಿಕಾರಿ ಕೆ ಎಸ್ ಲತಾಕುಮಾರಿ ಇವರು ಶ್ರೀ ಲಕ್ಷ್ಮಿ ವೆಂಕಟರಮಣ ಸ್ವಾಮಿಯ ದರ್ಶನ ಪಡೆದು ನಂತರ ಭೇಟಿ ನೀಡಿದ ನೆನಪಿಗೋಸ್ಕರ ದೇವಾಲಯದ ಆವರಣದಲ್ಲಿ ಗುಲಾಬಿ ಹೂವಿನ ಗಿಡ ನೆಟ್ಟು ಸ್ವಾಮಿಯ ಆಶೀರ್ವಾದ ಪಡೆದರು.
ಈ ಸಂದರ್ಭದಲ್ಲಿ ಉಪ ವಿಭಾಗಾಧಿಕಾರಿ ಮಾರುತಿ, ತಹಶೀಲ್ದಾರ್ ಎಂ ಜಿ ಸಂತೋಷ್ ಕುಮಾರ್, ತಾಲೂಕ್ ಪಂಚಾಯತ್
ಕಾರ್ಯನಿರ್ವಾಹಕ ಅಧಿಕಾರಿ ಎಚ್ ಕೆ ಸತೀಶ್ , ಟಿಎಚ್ಒ ರಂಗನಾಥ್, ನಗರಸಭೆ ಪೌರಾಯುಕ್ತ ಕೃಷ್ಣಮೂರ್ತಿ, ಅಗ್ಗುಂದ ಗ್ರಾಮ ಪಂಚಾಯಿತಿ ಅಧ್ಯಕ್ಷೇ ಕವಿತಾ, ಪಿಡಿಒ ಶಿವಕುಮಾರ್ ,ಜಾತ್ರಾ ಮಹೋತ್ಸವ ಸಮಿತಿ ಅಧ್ಯಕ್ಷರಾದ ಟಿ ಆರ್ ನಾಗರಾಜ್, ಸಮಿತಿ ನಿರ್ದೇಶಕರಾದ ಚಂದ್ರು, ಅರುಣ್ ಕುಮಾರ್, ಮುಜರಾಯಿ ಇಲಾಖೆಯ ಅಧಿಕಾರಿ ನಾಗರತ್ನ, ಪಾರು ಪತ್ತೆದಾರ್ ಲೋಕೇಶಯ್ಯ, ಆಗಮಿಕರಾದ ರಾಮಪ್ರಸಾದ್,ಅರ್ಚಕರಾದ ವರದರಾಜು, ಕಂದಾಯ ನಿರೀಕ್ಷಕ ಓಬಳೇಶ್ ಹಾಗೂ ಗ್ರಾಮ ಆಡಳಿತ ಅಧಿಕಾರಿಗ ಳಾದ ಶಿವಾನಂದನಾಯ್ಕ, ಅಶ್ವಿನಿ,ಪೊಲೀಸ್ ಪೇದೆ ಹರೀಶ್, ಸಮಾಜ ಸೇವಕ ಎಸ್ಎಲ್ಎನ್ ಯೋಗೇಶ್, ಕಂದಾಯ ಇಲಾಖೆ ಶಿವಕುಮಾರ್, ಆರೋಗ್ಯ ಇಲಾಖೆ ಸಿಬ್ಬಂದಿಗಳು, ತಿರುಪತಿ ಗ್ರಾಮಸ್ಥರು,ಭಕ್ತಾದಿಗಳು ಉಪಸ್ಥಿತರಿದ್ದರು.