ಬ್ರಾಹ್ಮಣರು ಎಂದೂ ರಾಜ್ಯಭಾರ ಮಾಡಿಲ್ಲ ಮಾಡಿಸಿದ್ದಾರೆ- ಎಸ್. ಎನ್. ಸೇತುರಾಮ್

ಅರಸೀಕೆರೆ: ಬ್ರಾಹ್ಮಣರು ಬುದ್ಧಿವಂತರು ಆದರೆ ಎಂದೂ ರಾಜ್ಯಭಾರ ಮಾಡಿಲ್ಲ ರಾಜ್ಯಭಾರ ಮಾಡಲು ಮಾರ್ಗದರ್ಶಕರಾಗಿದ್ದರು ಎಂದು ಕಿರು ತೆರೆ ಕಲಾವಿದ ಹಾಗೂ ನಿರ್ದೇಶಕ ಎಸ್ ಎನ್ ಸೇತುರಾಮ್ ಅಭಿಪ್ರಾಯ ಪಟ್ಟರು.
ಅವರು ನಗರದ ಹಾರನಹಳ್ಳಿ ರಾಮಸ್ವಾಮಿ ಸಮುದಾಯ ಭವನದಲ್ಲಿ ವಿಪ್ರ ನೌಕರ ಸಂಘವು ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ ಮತ್ತು ಗಣ್ಯರಿಗೆ ಅಭಿನಂದನಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಬ್ರಾಹ್ಮಣರ ನಿರ್ಲಕ್ಷಕ್ಕೆ ಬ್ರಾಹ್ಮಣರೇ ಕಾರಣ ಎಂದು ಹೇಳಿದರು.
ಶ್ರೀಮಂತ ಅಂಬಾನಿ ಬಗ್ಗೆ ಸಂತೋಷ ಪಡುವ ನಾವು ನಮ್ಮ ಕುಟುಂಬದವರು, ಬಂಧುಗಳು ಆರ್ಥಿಕವಾಗಿ ಮುನ್ನಡೆದರೆ ಸಹಿಸುವುದಿಲ್ಲ ಏಕೆ ಎಂದು ಪ್ರಶ್ನಿಸಿ ನಮ್ಮಲ್ಲಿ ನಾವು ಕೆಲವು ಸಂಕುಚಿತ ಭಾವನೆಗಳನ್ನು ದೂರ ಮಾಡಬೇಕು. ಒಂದು ಊರಲ್ಲಿ ಒಬ್ಬ ಬಡ ಬ್ರಾಹ್ಮಣ ನಿದ್ದ ಎಂಬುದು ಈಗ ಇತಿಹಾಸ ಅಂದು ನಾವು ಬಡವರೇ ಇಂದು ಬಡವರೇ, ಆದರೆ ಬದುಕುವ ಮಾರ್ಗವನ್ನು ಕಂಡುಕೊಂಡಿದ್ದೇವೆ, ತಟ್ಟೆ ಕಾಸು ಹಾಕುವವರು ಯಾರು ಎಂದು ಮಾರ್ಮಿಕವಾಗಿ ಪ್ರಶ್ನಿಸಿದರು, ಇಂದಿನ ಉಡುಗೆಗಳು ಬ್ರಿಟಿಷರ ಕೊಡುಗೆ, ನಾಗರಿಕತೆಯ ಭರದಲ್ಲಿ ನಮ್ಮ ಸಂಸ್ಕೃತಿಯಿಂದ ದೂರವಾಗುತ್ತಿದ್ದೇವೆ ಎಂಬ ಆತಂಕವನ್ನು ಅವರು ವ್ಯಕ್ತಪಡಿಸಿದರು. ಮಕ್ಕಳು ಓದುತ್ತಾರೆ ಬೆಂಗಳೂರು ಸೇರುತ್ತಾರೆ ಮನೆಯಲ್ಲಿ ವೃದ್ಧರು ಮಾತ್ರ ಇದು ಎಲ್ಲಡೆ ಕಾಣುವ ದೃಶ್ಯ, ಹಿಂದೆ ದೊಡ್ಡ ಕುಟುಂಬ ಇರುತ್ತಿತ್ತು ಸಂತೋಷವಾಗಿರುತ್ತಿದ್ದರು ಆರ್ಥಿಕ ಸಮಸ್ಯೆ ಇತ್ತು ಈಗ ಆರ್ಥಿಕ ಸಮಸ್ಯೆ ಇಲ್ಲ ಸಂತೋಷವೂ ಇಲ್ಲ ಎಂದರು.
ನಾನು ಅರಸೀಕೆರೆಯಲ್ಲಿ ಪ್ರೌಢಶಾಲೆ ಓದಿದವನು, ನಾನು ಓದಿದ ಶಾಲೆಯನ್ನು ನೋಡಿ ಬಂದೆ ಖುಷಿಯಾಯಿತು, ವಿಪ್ರ ನೌಕರರ ಬಳಗದವರು ನನ್ನನ್ನು ಆಹ್ವಾನಿಸಿದ್ದಾರೆ ನಾನು ಅಷ್ಟು ದೊಡ್ಡವನೆ ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಅಭಿನಂದಿಸಿದ್ದೀರಿ, ವಿವಿಧ ಕ್ಷೇತ್ರಗಳಲ್ಲಿನ ಗಣ್ಯರನ್ನು ಗುರುತಿಸಿದ್ದೀರಿ ಇಂತಹ ಕಾರ್ಯಗಳು ಆಗಬೇಕೆಂದರು.
ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಮಾಜಿ ಅಡ್ವಕೇಟ್ ಜನರಲ್ ಅಶೋಕ್ ಹಾರನಹಳ್ಳಿ ಬ್ರಾಹ್ಮಣ ಜಾತಿಯವರಿಗೆ ಜಾತಿ ಸರ್ಟಿಫಿಕೇಟು ಕೊಡಲ್ಲ, ಯಾವ ಮೀಸಲಾತಿ ಇತರೆ ಸೌಲಭ್ಯ ಇಲ್ಲ, ಸೆಕ್ಯುಲರ್ ಪದ ಎಲ್ಲೂ ಕಂಡಿಲ್ಲ, ಸರ್ವಧರ್ಮ ಸರ್ವಭಾವ ಆಗಬೇಕು, ಜಾತಿ ಜಾತಿಗಳನ್ನು ವಿಂಗಡಿಸುತ್ತಾ ಬಂದಲ್ಲಿ ಜಾತ್ಯತೀತ ರಾಷ್ಟ್ರ ಸಾಧ್ಯವೇ? ಎಲ್ಲವನ್ನು ಒಪ್ಪಿಕೊಂಡು ಬರುತ್ತಿದ್ದೇವೆ ಸಮಾನತೆಯಲ್ಲಿ ನೋಡಬೇಕು, ಬ್ರಾಹ್ಮಣರು ತ್ರಿಶಂಕು ಸ್ಥಿತಿಯಲ್ಲಿ ಇದ್ದೇವೆ, ಬಿಜೆಪಿಯವರು ನಮ್ಮನ್ನು ಸ್ವೀಕರಿಸುವುದಿಲ್ಲ, ಇತರ ಪಕ್ಷಗಳು ಬ್ರಾಹ್ಮಣರು ಬಿಜೆಪಿ ಎನ್ನುತ್ತಾರೆ, ಎಂದು ವಾಸ್ತವತೆ ಸಮಸ್ಯೆಯನ್ನು ಗಂಭೀರತೆಯನ್ನು ತೆರೆದಿಟ್ಟ ಅವರು ಎಲ್ಲಾ ಜನರನ್ನು ಸಮಾನತೆಯಲ್ಲಿ ನೋಡಬೇಕು ಒಗ್ಗೂಡಿಸಿಕೊಂಡು ಹೋಗಬೇಕು, ವಿಪ್ರ ನೌಕರರ ಸಂಘ ಬಹಳ ಉತ್ತಮ ಕಾರ್ಯಗಳನ್ನು ಮಾಡುತ್ತಾ ಬರುತ್ತಿದೆ, ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗುರುತಿಸುವುದು ಹಾಗೂ ವಿವಿಧ ಕ್ಷೇತ್ರದಲ್ಲಿ ನಮ್ಮ ಸಮಾಜದವರು ಸೇವೆ ಸಲ್ಲಿಸುತ್ತಿರುವ ಗಣ್ಯರನ್ನು ಗುರುತಿಸುವಂತ ಕಾರ್ಯ ಮಾದರಿಯಾಗಿದೆ ಎಂದರು.
ಕಡೂರು ಮಾಜಿ ಶಾಸಕ ವೈ ಎಸ್ ವಿ ದತ್ತ ಅರಸೀಕೆರೆಯಲ್ಲಿ ಕಾರ್ಯಕ್ರಮಗಳಿಗೆ ಅಶೋಕ್ ಹಾರನಹಳ್ಳಿ ಅವರು ಆಗಮಿಸುತ್ತಿರುತ್ತಾರೆ ನಾನು ಸಹ ಆಗಾಗ ಬರುತ್ತಿದ್ದೇನೆ ಆದರೆ ಇಂದು ವೇದಿಕೆಯಲ್ಲಿ ಕಿರುತೆರೆ ನಿರ್ದೇಶಕರು ಕಲಾವಿದರು ವಾಗ್ಮಿಗಳು ಆದ ಎಸ್ ಎನ್ ಸೇತುರಾಮ್ ಅವರ ಭೇಟಿ ಸಂತೋಷ ತಂದಿದೆ ಅವರ ಧಾರವಾಹಿಯಲ್ಲಿ ನಾನು ನಟನೆ ಮತ್ತು ಮಾತುಗಳು ಅವರ ಧ್ವನಿ ಮಾತಿನ ಮಾರ್ಮಿಕತೆ ಕಲೆ, ಸಾಹಿತ್ಯ ,ಶ್ಲಾಘಗನೀಯ.
ಅಶೋಕ್ ಹಾರನಹಳ್ಳಿ ಅವರು ಅಖಿಲ ಕರ್ನಾಟಕ ಬ್ರಾಹ್ಮಣ. ಮಹಾ ಸಭಾ ಅಧ್ಯಕ್ಷರಾಗಿದ್ದ ಅವಧಿಯಲ್ಲಿ ರಾಜ್ಯಾದ್ಯಂತ ಪ್ರವಾಸ ಮಾಡಿ ಸಮಾಜ ಸಂಘಟನೆಗೆ ವಿಶೇಷ ಕಾಳಜಿ ವಹಿಸಿದ್ದರು, 50 ನೇ ವರ್ಷದ ಅಂಗವಾಗಿ ನಡೆದ ಅಖಿಲ ಬ್ರಾಹ್ಮಣ ಮಹಾಸಭಾ ಸಮ್ಮೇಳನ ರಾಷ್ಟ್ರ ಮಟ್ಟದಲ್ಲಿ ನಡೆಯಿತು, ಈ ರಾಷ್ಟ್ರದ ಸಮಾಜದ ಪ್ರಮುಖರನ್ನು ಒಂದು ಸೂರಿನಡಿ ತರುವಂತ ಕಾರ್ಯವನ್ನು ಅವರು ಮಾಡಿದರು, ನಮ್ಮ ಸಮಾಜ ಅಲ್ಪ ಮತದಾರರನ್ನು ಹೊಂದಿದ್ದರು ಸಹ ಜಾತ್ಯಾತೀತವಾಗಿ ಅಲ್ಲಿ ನನ್ನನ್ನು ಆಶೀರ್ವದಿಸಿದರು ಎಂದು ಕ್ಷೇತ್ರದ ಜನತೆಯನ್ನು ನೆನೆದರು. ವಿಪ್ರ ನೌಕರರ ಬಳಗ ಉತ್ತಮ ಕಾರ್ಯಗಳನ್ನು ಮಾಡುವ ಮೂಲಕ ಮಾದರಿಯಾಗಿದೆ ಎಂದು ಶ್ಲಾಘಿಸಿದರು.
ಬೆಂಗಳೂರು ಕನ್ಸಲ್ಟೆಂಟ್ ಕೋ ಬ್ಯಾಂಕಿಂಗ್ ಪ್ರಿನ್ಸಿಪಾಲ್ ಕಾರ್ತಿಕ್ ಎಸ್ ಬಾಪಟ್ ಮಾತನಾಡಿ ಮುಂದಿನ ದಿನಗಳಲ್ಲಿ ಕಂಪ್ಯೂಟರ್ ಶಿಕ್ಷಣಕ್ಕೆ ಭವಿಷ್ಯವಿಲ್ಲ ಬೇಕಾದಷ್ಟು ಆಯ್ಕೆಗಳು ಇವೆ, ಭವಿಷ್ಯ ರೂಪಿಸಿಕೊಳ್ಳಲು ಉತ್ತಮ ಆಯ್ಕೆಗಳನ್ನು ಆಯ್ಕೆ ಮಾಡಿಕೊಳ್ಳಿ, ನಾನು ರಾಜ್ಯ ಮಹಾಸಭಾ ಕಾರ್ಯದರ್ಶಿಯಾಗಿದ್ದ ಸಮಯದಲ್ಲಿ ರಾಜ್ಯದ ಎಲ್ಲೆಡೆ ಪ್ರವಾಸ ಮಾಡಿದ್ದೇನೆ ಸಮಾಜದ ಇತರ ಸಂಘಗಳು ಇವೆ ಆದರೆ ವಿಪ್ರ ನೌಕರರ ಬಳಗ ತುಮಕೂರು ಮತ್ತು ಹಾಸನದಲ್ಲಿ ಕ್ರಿಯಾಶೀಲ ಆಗಿರುವುದನ್ನು ಗಮನಿಸಬಹುದು ಎಂದರು.
ತಾಲೂಕು ಬ್ರಾಹ್ಮಣ ಸಂಘದ ಅಧ್ಯಕ್ಷ ರವಿಕುಮಾರ್ ಸನ್ಮಾನಿತರಾಗಿ ವಿಪ್ರ ನೌಕರರ ಬಳಗವು ಸಮಾಜ ಹಮ್ಮಿಕೊಳ್ಳುವ ಎಲ್ಲಾ ಕಾರ್ಯಕ್ರಮಗಳಲ್ಲಿ ಸಹಕಾರ ಹಸ್ತವನ್ನು ನೀಡುತ್ತಾ ಬಂದಿದ್ದಾರೆ, ಕಾರ್ಯಕ್ರಮವನ್ನು ರೂಪಿಸುವಾಗ ಒಳ್ಳೆಯ ಪರಿಕಲ್ಪನೆಯನ್ನು ಕಾರ್ಯಗತ ಗೊಳಿಸುತ್ತಿರುವುದು ಶ್ಲಾಘನೀಯ ಎಂದರು.
ವಿಪ್ರ ನೌಕರ ಬಳಗದ ಅಧ್ಯಕ್ಷ ಕರ್ನಾಟಕ ಬ್ಯಾಂಕ್ ಮೋಹನ್ ಗಣ್ಯರ ಆಗಮನ ಹಾಗೂ ಸ್ಪಂದನೆಗೆ ಕೃತಜ್ಞತೆ ಹೇಳಿದರು, ಕಾರ್ಯಕ್ರಮವನ್ನು ಸಂಘದ ಖಜಾಂಚಿ ಅಶೋಕ್ ನಾಡಿಗ್ ಮತ್ತು ಸಂಘದ ನಿರ್ದೇಶಕ ಡಿ,ಎಸ್ ರಾಮಸ್ವಾಮಿ ನಿರ್ವಹಿಸಿದರು. ಕಾರ್ಯದರ್ಶಿ ನಾಗೇಶ್, ಸತೀಶ್ ಅವರುಗಳು ಉಪಸ್ಥಿತರಿದ್ದರು.
ಕಾರ್ಯಕ್ರಮಕ್ಕೆ ಮುನ್ನ ಬೆಂಗಳೂರಿನ ಶ್ರೀ ಅನಿರುದ್ಧರಾಮ್ ರವರಿಂದ ಸಂಗೀತ ಕಾರ್ಯಕ್ರಮ ಏರ್ಪಡಿಸಲಾಗಿತ್ತು.

Leave a Reply

Your email address will not be published. Required fields are marked *

error: Content is protected !!