ಹೊರಗುತ್ತಿಗೆ ನೌಕರರ ಸಂಘದ ಗೌರವ ಜಿಲ್ಲಾಧ್ಯಕ್ಷರಾಗಿ ರಂಗನಾಥನ್ ವಿ (ಅರುಣ್) ನೇಮಕ
ಅರಸೀಕೆರೆ:ಜಿಲ್ಲೆಯ ಹೊರ ಗುತ್ತಿಗೆದಾರರ ನೌಕರರ ಸಂಘದ ಹಾಸನ ಗೌರವ ಜಿಲ್ಲಾಧ್ಯಕ್ಷರಾಗಿ ರಂಗನಾಥನ್ ವಿ (ಅರುಣ್) ಅವರನ್ನು ಜುಲೈ 12 ರಂದು ಬೆಂಗಳೂರಿನ ಪಲಾಡಿಯಮ್ ಸ್ಪೋರ್ಟ್ಸ್ ಹೋಟಲಿನಲ್ಲಿ ಸರ್ಕಾರಿ ಹೊರಗುತ್ತಿಗೆ ನೌಕರರ ಸಂಘದ ರಾಜ್ಯಾಧ್ಯಕ್ಷ ಸುಧಾಕರ ಯಾದವ ಅವರು ನೇಮಕ ಮಾಡಿದ್ದು,
ಇಂದು ನೂತನವಾಗಿ ಹಾಸನ ಜಿಲ್ಲಾ ಗೌರವಾಧ್ಯಕ್ಷರಾಗಿರುವ ರಂಗನಾಥನ್ ವಿ (ಅರುಣ್)
ಮಾತನಾಡಿ ರಾಜ್ಯದ ಎಲ್ಲ ಜಿಲ್ಲೆಯ ಸರಕಾರಿ ಹೊರಗುತ್ತಿಗೆ ನೌಕರರ ಮೂಲಭೂತ ಸಮಸ್ಯೆ ಪರಿಹಾರ ಹಾಗೂ ಅವರ ಕ್ಷೇಮಾಭಿವೃದ್ಧಿ ಉದ್ದೇಶದಿಂದ ಜಾಗೃತಿ ಸಭೆ ಕರೆಯಲಾಗಿತ್ತು.
ఎల్ల ಹೊರಗುತ್ತಿಗೆ ನೌಕರರ ವಿವಿಧ ಬೇಡಿಕೆ ಈಡೇರಿಸಿಕೊಳ್ಳಲು ಸಂಘ ರಚಿಸಲಾಗಿದೆ,
ರಚನಾತ್ಮಕವಾಗಿ ನೌಕರರ ಹಿತ ಕಾಪಾಡುವ ಉದ್ದೇಶದಿಂದ ಸಂಘ ಅಸ್ಥಿತ್ವಕ್ಕೆ ತರಲಾಗಿದೆ.
ಎಲ್ಲಾ ಜಿಲ್ಲೆಗಳ ಅಧ್ಯಕ್ಷರು, ಗೌರವಾಧ್ಯಕ್ಷರು, ಸದಸ್ಯರುಗಳನ್ನು ನೇಮಕ ಮಾಡಲಾಗಿದೆ ಎಂದು ತಿಳಿಸಿ, ಅದೇ ರೀತಿ
ನೂತನವಾಗಿ ಆಯ್ಕೆಯಾದ ಬೇರೆ ಬೇರೆ ಜಿಲ್ಲಾಧ್ಯಕ್ಷರಿಗೆ ಸನ್ಮಾನಿಸಿ
ನೆನಪಿನ ಕಾಣಿಕೆ ನೀಡಲಾಯಿತು ಎಂದರು.
ಈ ಸಂದರ್ಭದಲ್ಲಿ ಮಾನವ ಸಂಪನ್ಮೂಲ ಸಂಘದ ರಾಜ್ಯಧ್ಯಕ್ಷ ಮಹಾಲಿಂಗೇಗೌಡ, ಹೈಕೋರ್ಟ್ ವಕೀಲ ಮುನಿರಾಜು, ರಾಘವೇಂದ್ರ ರೆಡ್ಡಿ, ನಾಗಪ್ಪ ಅಳವಂಡಿ, ಸುನೀಲ, ಗಂಗಾಧರ ಹಾಗೂ ಕರ್ನಾಟಕ ರಾಜ್ಯದ ಎಲ್ಲಾ ಜಿಲ್ಲಾಧ್ಯಕ್ಷರು ಉಪಸ್ಥಿತಿ ಇದ್ದರು. ವರದಿ: ಮೊಹಿದೀನ್ ಪಾಷಾ