*ಶಕ್ತಿ ಯೋಜನೆ ಸಂಭ್ರಮ* 500 ಕೋಟಿ ಫಲಾನುಭವಿಗಳು
ಅರಸೀಕೆರೆ:ಕರ್ನಾಟಕ ಸರ್ಕಾರದ ಶಕ್ತಿ ಯೋಜನೆ ಅಡಿ 500 ಕೋಟಿಗೂ ಹೆಚ್ಚು ಮಹಿಳೆಯರು ಉಚಿತ ಪ್ರಯಾಣದ ಲಾಭ ಪಡೆದಿರುವುದು ಐತಿಹಾಸಿಕ ಸಾಧನೆ ಎಂದು ಶಾಸಕ ಕೆ ಎಂ ಶಿವಲಿಂಗೇಗೌಡ ಘೋಷಿಸಿದರು.
ನಂತರ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಘಟಕದಲ್ಲಿ ಮಹಿಳಾ ಹಾಗೂ ಇತರ ಕಾರ್ಮಿಕರಿಗೆ ಸಿಹಿ ಹಂಚಿ ಅಭಿನಂದನೆ ಸಲ್ಲಿಸಿ ಶಕ್ತಿ ಯೋಜನೆಯ ಸಂಭ್ರಮಾಚರಣೆ ಆಚರಿಸಿದರು.
ಈ ಸಂದರ್ಭದಲ್ಲಿ ಡಿಪೋ ಮ್ಯಾನೇಜರ್ ಕೃಷ್ಣಪ್ಪ , ಸಹಾಯಕ ಕಾರ್ಯ ಅಧಿಕ್ಷಕ ರವಿ ನಾಯಕ್, ಕಿರಿಯ ಸಹಾಯಕ ಅಧಿಕಾರಿ ರಾಘವೇಂದ್ರ, ಸಹಾಯಕ ಕಾರ್ಮಿಕ ಕಲ್ಯಾಣ ಅಧಿಕಾರಿ ಭಾಗ್ಯ, ಬಸ್ ನಿಲ್ದಾಣ ಮೇಲ್ವಿಚಾರಕ ವಿರೂಪಾಕ್ಷಯ್ಯ, ವಾಹನ ಚಾಲಕರಾದ ಗಿರೀಶ್, ದೇವರಾಜ್, ಇನ್ನಿತರ ಕಾರ್ಮಿಕರು ಉಪಸ್ಥಿತರಿದ್ದರು.