17 ದಿನಗಳ ಜಾತ್ರಾ ಮಹೋತ್ಸವಕ್ಕೆ ಅಂಕುರಾರ್ಪಣೆ
ಅರಸೀಕೆರೆ:ಮಾಲೆಕಲ್ ತಿರುಪತಿ ಶ್ರೀ ಲಕ್ಷ್ಮಿ ವೆಂಕಟರಮಣ ಸ್ವಾಮಿ ಜಾತ್ರಾ ಮಹೋತ್ಸವ 17 ದಿನಗಳು ನಡೆಯಲಿದ್ದು, ಇದೇ 7ರಂದು ಸಾವಿರಾರು ಭಕ್ತ ಸಮೂಹದಲ್ಲಿ ಮಹಾರಥೋತ್ಸವ ನಡೆಯಲಿದೆ.
ಜಾತ್ರಾ ಮಹೋತ್ಸವದ ಅಂಗವಾಗಿ ಪ್ರಥಮ ದಿನವಾದ ಸೋಮವಾರ ಅಂಕುರಾರ್ಪಣೆ ಕಾರ್ಯಕ್ರಮ ನೆರವೇರಿತು. ದೇವಾಲಯ ತಾತ್ಕಾಲಿಕ ಸಮಿತಿ ಅಧ್ಯಕ್ಷ ಟಿ ಆರ್ ನಾಗರಾಜ್ ಜ್ಯೋತಿ ಬೆಳಗುವ ಮೂಲಕ ಚಾಲನೆ ನೀಡಿದರು. ನಗರಸಭಾ ಉಪಾಧ್ಯಕ್ಷ ಮನೋಹರ್, ದೇವಾಲಯ ಅಭಿವೃದ್ಧಿ ಸಮಿತಿ ಸದಸ್ಯರುಗಳಾದ ಪರಮೇಶ್ವರಪ್ಪ ,ಚಂದ್ರು, ಸತೀಶ್, ಆಗಮಿಕರಾದ ರಾಮಪ್ರಸಾದ್, ಅರ್ಚಕರುಗಳಾದ ಟಿ ಎಸ್ ವರದರಾಜು, ಆರ್ ಗಿರಿ ಕೇಸರಿ ಟಿ ಎಸ್ ಶ್ರೀನಿವಾಸ್, ಪಾರುಪತೇದಾರ ಲೋಕೇಶಯ್ಯ, ಅರುಣ್ ಕುಮಾರ್ ಮೊದಲಾದವರು ಉಪಸ್ಥಿತರಿದ್ದರು.