ವೀರಶೈವ ಲಿಂಗಾಯತ ಟ್ರಸ್ಟ್ ವತಿಯಿಂದ ರುದ್ರ ಭೂಮಿ ಅಭಿವೃದ್ಧಿ
ಅರಸೀಕೆರೆ:ವೀರಶೈವ ಲಿಂಗಾಯಿತ ಸಮಾಜ ಬಾಂಧವರು ಲಿಂಗೈಕ್ಯರಾದಲ್ಲಿ ಮುಕ್ತಿ ಕೊಡಲು ಒಂದು ಅವಕಾಶವಿರಲಿಲ್ಲ, ಈಗ ಸಮಾಜದ ಮುಖಂಡರು ಎಲ್ಲರೂ ಒಗ್ಗಟ್ಟಾಗಿ ಮುಂದೆ ಬಂದಿದ್ದಾರೆ. ಹಿಂದೆ ಇದ್ದ ನಗರದ ಹೊರವಲಯದ ಗೀಜಿಹಳ್ಳಿ ಸಮೀಪ ಇರುವ ವಿಶಾಲ ಸ್ಥಳದಲ್ಲಿ ವೀರಶೈವ ಲಿಂಗಾಯಿತ ಸಮಾಜದ ಟ್ರಸ್ಟ್ ವತಿಯಿಂದ ರುದ್ರ ಭೂಮಿ ಅಭಿವೃದ್ಧಿಪಡಿಸಲಾಗುವುದು ಎಂದು ಟ್ರಸ್ಟ್ ನ ಅಧ್ಯಕ್ಷ ಜೆ ಎಸ್ ಮುರುಗೇಂದ್ರಪ್ಪ ತಿಳಿಸಿದರು.
ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ತಾಲೂಕಿನಲ್ಲಿ ವೀರಶೈವ ಲಿಂಗಾಯತ ಸಮಾಜ ಹೆಚ್ಚಿನ ಸಂಖ್ಯೆಯಲ್ಲಿದ್ದು, ರುದ್ರಭೂಮಿ ಅಭಿವೃದ್ಧಿಪಡಿಸಲು ಒಗ್ಗಟ್ಟಾಗಿ ಮುಂದೆ ಬರುತ್ತಿರಲಿಲ್ಲ, ಈಗ ಎಲ್ಲರೂ ಒಗ್ಗಟ್ಟಾಗಿ ಮುಂದೆ ಬಂದಿದ್ದು, ಶಾಸಕರ ಸಹಕಾರ ಹಾಗೂ ಸಮಾಜ ಬಾಂಧವರ ಸಹಕಾರದಿಂದ ರುದ್ರ ಭೂಮಿಯನ್ನು ಅಭಿವೃದ್ಧಿಪಡಿಸಲು ಸಂಕಲ್ಪ ಮಾಡಿದ್ದೇವೆ ಎಂದರು.
ಟ್ರಸ್ಟಿನ ಕಾರ್ಯದರ್ಶಿ ಕಾಟೀಕೆರೆ ಉಮೇಶ್ ಮಾತನಾಡಿ ವೀರಶೈವ ಲಿಂಗಾಯತ ಸಮಾಜದ ರುದ್ರಭೂಮಿ ಅಭಿವೃದ್ಧಿಗೆ ಟ್ರಸ್ಟ್ ನೋಂದಣಿ ಮಾಡಿದ್ದು, ಇದರ ಮೊದಲ ಸಭೆ ಇಂದು ನಡೆದಿದೆ. ಮಾಜಿ ಶಾಸಕ ಜಿ ವಿ ಸಿದ್ದಪ್ಪ ಅವರ ಅವಧಿಯಲ್ಲಿ 2004ರಲ್ಲಿ ಗೀಜಿಹಳ್ಳಿ ಸಮೀಪ 5 ಎಕರೆ ಜಮೀನು ಮಂಜೂರು ಮಾಡಲಾಗಿತ್ತು, ಇದೀಗ ಶಾಸಕ ಕೆ ಎಂ ಶಿವಲಿಂಗೇಗೌಡರ ಸಹಕಾರ ಹಾಗೂ ಸಮಾಜ ಬಾಂಧವರ ಸಹಕಾರದಿಂದ ರುದ್ರಭೂಮಿ ಅಭಿವೃದ್ಧಿ ಮಾಡಲು ಮುಂದಾಗಿದ್ದೇವೆ.
5 ಎಕರೆ ಜಾಗದಲ್ಲಿ ರಸ್ತೆ ನಿರ್ಮಾಣ, ಕಾಂಪೌಂಡ್ ನಿರ್ಮಾಣ, ಆರ್ಚ್ ನಿರ್ಮಾಣ,ನೀರು, ಆಸನಗಳು, ಶವಗಳ ಉಳಲು ಬ್ಲಾಕ್ ಗಳ ನಿರ್ಮಾಣ,ಶವಗಳ ದಹನ ವ್ಯವಸ್ಥೆ, ಕಾಂಪೌಂಡ್ ಸುತ್ತಲೂ ಗಿಡ ಮರಗಳ ನೆಡುವುದು,ವಾಹನ ವ್ಯವಸ್ಥೆ ಸೇರಿದಂತೆ ಇನ್ನಿತರ ಮೂಲಸೌಕರ್ಯಗಳ ವ್ಯವಸ್ಥೆ ಮಾಡಲಾಗುವುದು ಎಂದರು. ಭಾನುವಾರ ಶಾಸಕ ಕೆ ಎಂ ಶಿವಲಿಂಗೇಗೌಡರು ಖುದ್ದು ರುದ್ರಭೂಮಿ ಸ್ಥಳಕ್ಕೆ ಭೇಟಿ ನೀಡಿ ಸರ್ಕಾರದಿಂದ ಅನುದಾನ ಕೊಡಿಸುವ ಮೂಲಕ ಹೆಚ್ಚಿನ ಸಹಕಾರ ನೀಡುವುದಾಗಿ ತಿಳಿಸಿದ್ದಾರೆ. ಶಾಸಕರು ಹಾಗೂ ಸಮಾಜ ಬಾಂಧವರ ಸಹಕಾರದಿಂದ ಇನ್ನಿತರ ಅಭಿವೃದ್ಧಿ ಕಾರ್ಯಕ್ರಮಗಳ ಮೂಲಕ ಹೆಚ್ಚು ಸೌಲಭ್ಯಗಳನ್ನು ಕಲ್ಪಿಸಲಾಗುವುದು ಎಂದರು. ಜೆ ಎಸ್ ಮುರುಗೇಂದ್ರಪ್ಪ 1 ಲಕ್ಷ, ಎಲ್ಎಸ್ ಜ್ಞಾನೇಶ್ 50001 ದೇಣಿಗೆ ನೀಡುವುದಾಗಿ ಘೋಷಿಸಿದರು. ಈ ಸಂದರ್ಭದಲ್ಲಿ ಉಪಾಧ್ಯಕ್ಷ ಧರ್ಮ ಶೇಖರ್, ಸಹ ಕಾರ್ಯದರ್ಶಿ ವಿಜಯಕುಮಾರ್ ಎ ಆರ್, ಖಜಾಂಚಿ ಶಿವಲಿಂಗಪ್ಪ ಎಂ ಪಿ, ಟ್ರಸ್ಟಿಗಳಾದ ರಾಜು ಸಿ ಜೆ, ಚಂದ್ರಶೇಖರಪ್ಪ ಜಿ ಎಸ್, ಮಂಜುನಾಥ್ ಎನ್ಎಸ್, ಆರ್ ಆರ್ ದಿವಾಕರ ಬಾಬು, ಸಂತೋಷ್ ಕುಮಾರ್ ಎ ಎಸ್, ಎಚ್ ಎನ್ ಜಯಪ್ಪ, ಎಚ್ ಆರ್ ವಿಶ್ವನಾಥ್,ಎಲ್ ಎಸ್ ಜ್ಞಾನೇಶ್ ಉಪಸ್ಥಿತರಿದ್ದರು.