ವೇ ಬಿಡ್ಜ್ ವಿರುದ್ಧ ಕ್ರಮಕ್ಕೆ ಒತ್ತಾಯ

ಶಿವಮೊಗ್ಗ :ನಗರದ ಸೂಳೆಬೈಲು ಸರ್ಕಲ್‌ನಲ್ಲಿರುವ ಗಣೇಶ್ ವೇ ಬಿಡ್ಜ್‌ನಲ್ಲಿ (ನೂರು ಟನ್) ಸರ್ಕಾರದ ವತಿಯಿಂದ ನಡೆಯುವ ಕಾಮಗಾರಿಗಳಿಗೆ ಬರುವ ಕಬ್ಬಿಣ ಸಾಮಾಗ್ರಿಗಳು ಈ ವೇ ಬಿಡ್ಜ್‌ನಲ್ಲಿ ತೂಕ ಮಾಡಲಾಗುವುದು. ಆದರೇ ಇಲ್ಲಿ ತೂಕ ಮಾಡುವಾಗ ಅಂದಾಜು ೪೦ ಟನ್‌ಗಳ ಸಾಮಾಗ್ರಿಗಳು ಇರಬೇಕಾದ ಜಾಗದಲ್ಲಿ ೩೫ ಟನ್ ಇದ್ದರೇ ಈತನ ವೇಬಿಡ್ಜ್‌ನಲ್ಲಿ ೪೦ ಟನ್ ಇದೇ ಎಂದು ಬಿಲ್ ಕೊಟ್ಟು ಕಳಿಹಿಸುತ್ತಾನೆ, ಇದರಲ್ಲಿ ಲಾರಿ ಮಾಲೀಕರು ಅಥವಾ ಚಾಲಕರು ಈತನನೊಂದಿಗೆ ಒಂದೇ ಟನ್‌ಗೆ ಇಷ್ಟು ಕಮಿಷನ್ ಎಂದು ಮಾತನಾಡಿಕೊಂಡಿರುತ್ತಾನೆ. ಇದರಿಂದ ಗುತ್ತಿಗೆದಾರಕ್ಕೆ ಬಹಳ ನಷ್ಟವಾಗಲಿದೆ, ಇದನ್ನು ಯಾರಾದರೂ ಕೇಳಲು ಹೋದರೇ ಕೆಲವು ಪುಡಿ ರೌಡಿಗಳನ್ನು ತನ್ನ ಬಳಿ ಸೇರಿಸಿಕೊಂಡು ಬಂದವರಿಗೆ ಹೆದರಿಸಿ-ಬೆದರಿಸುತ್ತಾನೆ. ಇವರಿಗೆ ಗಾಂಜಾ ಹೊಡೆಯಲು ಈತನು ಹಣ ಕೊಟ್ಟು ಸಹಕರಿಸುತ್ತಾನೆ. ಇದ್ದರಿಂದ ಯುವಕರ ಗಾಂಜಾ ಹೊಡೆದ ಹುಡುಗರು ಇವನು ಕೊಡುವ ಹಣದಾಸೆಗೆ ಇಲ್ಲಿ ಕೇಳಲು ಬರುವವರಿಗೆ ಧಮ್ಕಿ ಹಾಕುವುದು ಮಾಮೂಲಿ ಆಗಿದೆ.
ಈ ಜಾಗದ ಮಾಲೀಕರಿಗೂ ಈ ರೀತಿ ಅಕ್ರಮ ನಡೆಯುವುದು ಗೊತ್ತಿಲ್ಲ ಈ ಅಕ್ರಮದಲ್ಲಿ ತಂದೆ ವಿಶ್ವನಾಥ್ ಮಗ ಸಂತೋಷ್ ಯಾವುದೇ ಭಯವಿಲ್ಲದೆ ನಡೆಸುತ್ತಿದ್ದಾರೆ.
ಇವರ ವಿರುದ್ದ ಸೂಕ್ತ ರೀತಿಯ ಕಾನೂನು ತನಿಖೆ ನಡೆಸಿದರೆ, ಇಲ್ಲಿ ನಡೆಯುತ್ತಿರುವ ಅಕ್ರಮ ಬಯಲಿಗೆ ಬರಲಿದೆ. ಈತನ ಅಕ್ರಮ ದಂಧೆಯ ಬೆಳಕಿಗೆ ಬರುತ್ತಿದ್ದಂತೆ, ಕೆಲವು ರೌಡಿಗಳು ಇವನ ಹತ್ತಿರ ಆಪ್ತ ವಸೂಲಿಗೆ ಮುಂದಾಗುತ್ತಿದ್ದಾರೆ. ಇದ್ದರಿಂದ ಇಲ್ಲಿ ಮುಂದಿನ ದಿನಗಳಲ್ಲಿ ಗಲಾಟೆ, ಕೊಲೆಯಾಗುವ ಮುನ್ಸೂಚನೆ ಇದ್ದು, ಇದರ ವಿರುದ್ದ ಸರಿಯಾದ ರೀತಿಯಲ್ಲಿ ಶೀಘ್ರದಲ್ಲಿ ಕ್ರಮ ಕೈಗೊಂಡರೇ ಮುಂದೆ ನಡೆಯುವ ಅಹಿತಕರ ಘಟನೆ ಕಡಿವಾಣ ಹಾಕಬಹುದು. ಈ ಸುದ್ದಿ ಹಲವಾರು ಬಾರಿ ಪತ್ರಿಕೆಗಳಲ್ಲಿ ಈ ಅಕ್ರಮದ ಬಗ್ಗೆ ಸುದ್ದಿ ಮಾಡಿದರೂ ಯಾವುದೇ ರೀತಿಯಲ್ಲಿ ಎಚ್ಚೆತ್ತುಕೊಳ್ಳದೆ ತನ್ನದೆ ಅಕ್ರಮವನ್ನು ಮುಂದುವರೆಸಿದ್ದಾನೆ. ಈ ಕೂಡಲೇ ತಂದೆ-ಮಗನ ವಿರುದ್ದ ತನಿಖೆ ಕೈಗೊಂಡು, ಇಂತಹ ಅಕ್ರಮಗಳಿಗೆ ಕಡಿವಾಣ ಹಾಕಬೇಕಾಗಿದೆ ಮನವಿ.
ಗುತ್ತಿಗೆದಾರರ ಸುಲಿಗೆ ಮಾಡುತ್ತಿರುವ ಗಣೇಶ್ ವೇ ಬಿಡ್ಜ್ ವಿರುದ್ದ ಸೂಕ್ತ ಕ್ರಮ ಕೈಗೊಂಡರೇ ಮಾತ್ರ ತೂಕದಲ್ಲಿ ನಡೆಯುತ್ತಿರುವ ಅಕ್ರಮಗಳನ್ನು ತಡೆಯಬಹುದು ಇಂತಹ ಅಕ್ರಮ ಅಳತೆ ಮಾಡುವವರನ್ನು ಬಿಟ್ಟರೇ ಅನೇಕ ಗುತ್ತಿಗೆದಾರರು ನೇಣು ಹಾಕಿಕೊಳ್ಳುವ ಸಂದರ್ಭ ಉಂಟಾಗಲಿದೆ. ಈತನಿಂದ ಮಾಡುವ ತೂಕದಿಂದ ಕನಿಷ್ಠ ಏನಿಲ್ಲವೆಂದರೂ ಅಂದಾಜು ಒಬ್ಬ ಗುತ್ತಿಗೆದಾರರನಿಗೆ ಒಂದು ಲಾರಿಯಿಂದ ಸುಮಾರು ೩ ರಿಂದ ೪ ಲಕ್ಷ ನಷ್ಟವಾಗುವುದು. ಅಂದರೆ ನೀವೇ ಅರ್ಥ ಮಾಡಿಕೊಳ್ಳಿ ಈತನ ಅಕ್ರಮ ಯಾವ ಮಟ್ಟದಲ್ಲಿ ನಡೆಯುತ್ತಿದೆ ಎಂದು. ಈತನ ಮಾಡುವ ಅಕ್ರಮದಿಂದ ಗುತ್ತಿಗೆದಾರರು ಬೀದಿ ಬರುತ್ತಾರೆ. ಈತನ ಮತ್ತು ಈತನೊಂದಿಗೆ ಕೈಜೋಡಿಸಿದವರು ಲಕ್ಷಾಂತರ ರೂಪಾಯಿ ಮಾಡಿಕೊಂಡು ಅರಾಮಗಿ ಬಿಡುತ್ತಾರೆ. ಇಂತಹ ಅಕ್ರಮಗಳು ಜನರ ಗಮನಕ್ಕೆ ಬರುವುದಿಲ್ಲ ಏಕೆಂದರೇ ಇದರ ಬಗ್ಗೆ ಯಾವುದೇ ಮಾಹಿತಿಗಳು ಜನರಲ್ಲಿ ಇರುವುದಿಲ್ಲ. ಅದಕ್ಕಾಗಿ ಈ ಸುದ್ದಿ ಸ್ವವಿವರವಾಗಿ ಇಲ್ಲಿ ಮಾಡಲಾಗಿದೆ.
ಎಚ್ಚೆತ್ತುಕೊಳ್ಳಿ ಗುತ್ತಿಗೆದಾರರೇ…?
ಹೌದು ಗುತ್ತಿಗೆದಾರರೇ ನಿಮಗೊಂದು ಸಲಹೆ ಏನೆಂದರೇ ನಗರದ ಸೂಳೆಬೈಲು ಸರ್ಕಲ್‌ನಲ್ಲಿರುವ ಗಣೇಶ್ ವೇ ಬಿಡ್ಜ್‌ನಲ್ಲಿ (ನೂರು ಟನ್) ನಲ್ಲಿ ತೂಕ ಮಾಡಿಸಿಕೊಂಡು ಬರುವ ಯಾವುದೇ ಲಾರಿಗಳನ್ನು ಪುನರ್ ಪರಿಶೀಲಿಸಿ, ಇಲ್ಲವೆಂದರೇ ನಿಮ್ಮ ಲಕ್ಷಾಂತರ ರೂಪಾಯಿ ಯಾರೋದ ಪಾಲಾಗುವುದು. ಅಂತಹ ದುಷ್ಟರ ಬುದ್ದಿ ಇರುವ ಅಪ್ಪ-ಮಗನ ಮಾಲೀಕತ್ವದಲ್ಲಿ ಈ ವೇ ಬಿಡ್ಜ್ ನಡೆಯುತ್ತಿದೆ. ಜಿಲ್ಲಾಡಳಿತ ಈ ವೇ ಬಿಡ್ಜ್ ವಿರುದ್ದ ಕ್ರಮ ತೆಗೆದುಕೊಂಡು ಗುತ್ತಿಗೆದಾರರನ್ನು ಬದುಕು ಅವಕಾಶ ಮಾಡಕೊಡಬೇಕು. ಈ ಬೆಲೆ ಏರಿಕೆ ಸಮಯದಲ್ಲಿ ಗುತ್ತಿಗೆದಾರರ ಕಾಮಗಾರಿಗಳನ್ನು ನಡೆಸುವುದೇ ಕಷ್ಟವಿದೆ. ಅದರಲ್ಲೂ ಲಾಭ ತೆಗೆಯುವುದು ಕನಸಿನ ಮಾತು, ಅದು ಈಗ ಬಿಲ್ ಆಗುವಾಗ ಈತನ ಬಡ್ಡಿ ಕಟ್ಟಿ ಆತ್ಮೆಹತ್ಯೆ ಹಂತ ಬಂದಿರುವ ಸ್ಥಿತಿ ನಿರ್ಮಾಣವಾಗಿದೆ. ಇಂತಹ ಪರಿಸ್ಥಿತಿ ಇಂತಹ ಲಂಪಂಗ ಚೋರರು ಇದ್ದರೇ ಅವರು ಆತ್ಮಹತ್ಯೆ ದಾರಿಯೊಂದೇ ಕಾಣುವುದು. ಆದ್ದರಿಂದ ಜಿಲ್ಲಾಡಳಿತ ಇದರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎನ್ನುವುದು ಸಾರ್ವಜನಿಕರ ಅಭಿಪ್ರಾಯ.

Leave a Reply

Your email address will not be published. Required fields are marked *

error: Content is protected !!