ಯುವ ಜನತೆ ದುಶ್ಚಟಗಳಿಗೆ ದಾಸರಾಗಿ ಕುಟುಂಬಕ್ಕೆ ಮತ್ತು ಸಮಾಜಕ್ಕೆ ಮಾರಕವಾಗಿದ್ದಾರೆ- ಡಿವೈ ಎಸ್ ಪಿ ಬಿ ಆರ್ ಗೋಪಿ
ಅರಸೀಕೆರೆ :- ಮನುಜ ಕುಟುಂಬಕ್ಕೆ ಆಧಾರವಾಗಿ, ಸಮಾಜಕ್ಕೆ ಆಸ್ತಿಯಾಗಬೇಕಾದ ಯುವಜನತೆ ದುಶ್ಚಟಗಳಿಗೆ ದಾಸರಾಗಿ ತಮ್ಮ ಕುಟುಂಬಕ್ಕೆ ಮಾತ್ರವಲ್ಲ ಸಮಾಜಕ್ಕೂ ಮಾರಕವಾಗುತ್ತಿರುವುದು ಕಳವಳದ ಸಂಗತಿ ಎಂದು ಡಿ ವೈ ಎಸ್ ಪಿ ಬಿ ಆರ್ ಗೋಪಿ ಎಂದು ಅಭಿಪ್ರಾಯಪಟ್ಟರು.
ಪೊಲೀಸ್ ಇಲಾಖೆ, ಜ್ಞಾನಶ್ರೀ ಎಕ್ಸ್ ಫರ್ಟ್ ಕಾಲೇಜು ಇವರ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ್ದ ಅಂತರಾಷ್ಟ್ರೀಯ ಮಾದಕ ದ್ರವ್ಯಗಳ ವಿರೋಧಿ ದಿನಾಚರಣೆ ಮತ್ತು ರಸ್ತೆ ಸುರಕ್ಷತಾ ಸಪ್ತಾಹ , ಮತ್ತು ಹೆಣ್ಣು ಮಕ್ಕಳ ಜಾಗೃತಿ ಅರಿವು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು ಮಕ್ಕಳ ವಿದ್ಯಾಭ್ಯಾಸಕ್ಕೆ ತೋರುವ ಆಸಕ್ತಿಯನ್ನು ಅವರ ಚಲನವಲನಗಳ ಮೇಲು ಪೋಷಕರು ಗಮನಿಸುವ ಮನಸ್ಥಿತಿ ಬಳಸಿಕೊಂಡರೆ ತಮ್ಮ ಮಕ್ಕಳು ತಪ್ಪು ದಾರಿಯಲ್ಲಿ ಹೋಗುವುದನ್ನು ತಡೆಗಟ್ಟಬಹುದು, ಈ ನಿಟ್ಟಿನಲ್ಲಿ ಪೋಷಕರು ಹಾಗೂ ಶಾಲಾ ಕಾಲೇಜುಗಳ ಆಡಳಿತ ಮಂಡಳಿಯ ಪಾತ್ರ ಅತ್ಯಂತ ಮಹತ್ವ ದಾಗಿದೆ ಎಂದು ಕಿವಿಮಾತು ಹೇಳಿದರು.
ನಗರ ಪೊಲೀಸ್ ಠಾಣೆಯ ಸರ್ಕಲ್ ಇನ್ಸ್ಪೆಕ್ಟರ್ ರಾಘವೇಂದ್ರ ಮಾತನಾಡಿ ಹದಿ ಹರಿಯದ ವಯಸ್ಸಿನಲ್ಲೇ ದುಶ್ಚಟಗಳಿಗೆ ಬಲಿಯಾಗಿ ತಮ್ಮ ಜೀವಕ್ಕೆ ಸಂಚಕಾರವನ್ನು ತಂದುಕೊಳ್ಳುತ್ತಿರುವ ವ್ಯಸನಿಗಳು ತಮ್ಮನ್ನು ಎತ್ತುಒತ್ತುಸಾಕಿ ಬೆಳೆಸಿದ ಪೋಷಕರ ನೋವಿಗೆ ಕಾರಣವಾಗುತ್ತಿರುವುದು ನೋವಿನ ಸಂಗತಿಯಾಗಿದೆ.
ದುಶ್ಚಟಗಳಿಂದಲೇ ಸಮಾಜದಲ್ಲಿ ಅಪರಾಧ ಕೃತಿಗಳು ಹೆಚ್ಚಾಗುತ್ತಿವೆ. ಇದರಿಂದ ಸಮಾಜದ ಸ್ವಾಸ್ಥ್ಯ ಹಾಳಾಗುವ ಜತೆಗೆ ರಾಜ್ಯ ಹಾಗೂ ದೇಶದ ಬೆಳವಣಿಗೆಗೆ ಕಂಟಕವಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದವರು. ಮಾದಕ ದ್ರವ್ಯಗಳ ತಡೆಗಟ್ಟುವ ನಿಟ್ಟಿನಲ್ಲಿ ಪೊಲೀಸ ಇಲಾಖೆಗೆ ಸಾರ್ವಜನಿಕರ ಸಹಕಾರ ಕೂಡ ಅಗತ್ಯವಾಗಿದ್ದು ದಿನದಿಂದ ದಿನಕ್ಕೆ ಸಮಾಜಕ್ಕೆ ಮಾರಕವಾಗುತ್ತಿರುವ ಗಾಂಜಾ ಡ್ರಗ್ಸ್ ಇತ್ಯಾದಿ ಮಾದಕ ದ್ರವ್ಯಗಳು ವ್ಯವಸ್ಥಿತವಾಗಿ ಹದಿ ಹರಿಯದ ಮಕ್ಕಳ ಕೈ ಸೇರುತ್ತದೆ ಈ ಬಗೆ ಸಾರ್ವಜನಿಕರ ಗಮನಕ್ಕೆ ಬಂದರೆ ತಮ್ಮ ವ್ಯಾಪ್ತಿಯ ಪೊಲೀಸ್ ಠಾಣೆಗೆ ವಿಷಯ ತಿಳಿಸುವಂತೆ ನಗೆ ಚಟಾಕಿ ಮೂಲಕ ವಿಧ್ಯಾರ್ಥಿ ಗಳು ಜೊತೆ ಸಂವಾದ ನೆಡೆಸಿಕೊಟ್ಟರು.
ಕಾರ್ಯಕ್ರಮದಲ್ಲಿ ತಾಲೂಕು ಕಾರ್ಯದರ್ಶಿ ಪತ್ರಕರ್ತರ ಸಂಘದ ನಿಕಟ ಪೂರ್ವ ಅಧ್ಯಕ್ಷ ಕಣಕಟ್ಟೆ ಕುಮಾರ್, ನಗರ ಪೊಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ದಿಲೀಪ್,ಕಾಲೇಜಿನ ಪ್ರಾಂಶುಪಾಲ ತೀರ್ಥ ಪ್ರಸಾದ್,ಕಾಲೇಜಿನ ಗೌರವ ಕಾರ್ಯದರ್ಶಿ ಅರುಣ್ ಕುಮಾರ್, ಎ ಎಸ್ ಐ ಪ್ರಕಾಶ್,ಕಿರಣ್, ಸೇರಿದಂತೆ ಇತರರು ಉಪಸ್ಥಿತರಿದ್ದರು.