ಗ್ರಾಮೀಣ ಹಾಗೂ ನಗರ ಪ್ರದೇಶ ವ್ಯಾಪ್ತಿಯಲ್ಲಿ ಮನೆ ಕಟ್ಟುವ ಸಾರ್ವಜನಿಕರಿಗೆ ಯಾವುದೇ ಸೌಲಭ್ಯವಿಲ್ಲ
ಅರಸೀಕೆರೆ:ಸುಪ್ರೀಂ ಕೋರ್ಟ್ ನೀಡಿರುವ ಆದೇಶವು ಇನ್ನು ಮುಂದೆ ಗ್ರಾಮೀಣ ಪ್ರದೇಶದಲ್ಲಿ ಹಾಗೂ ನಗರ ಪ್ರದೇಶದಲ್ಲಿ ವಾಸ ಮಾಡಲು ಮನೆ ಕಟ್ಟುವ ಸಾರ್ವಜನಿಕರಿಗೆ ಹಾಗೂ ಬಡವರಿಗೆ ಇನ್ನು ಮುಂದೆ ಅವರಿಗೆ ಯಾವುದೇ ರೀತಿಯ ಸವಲತ್ತು ನೀಡಲು ಆದೇಶ ಕೊಡುವುದಿಲ್ಲ. ಅವರಿಗೆ ವಿದ್ಯುತ್, ಕುಡಿಯುವ ನೀರು ಹಾಗೂ ಅವರ ಜಾನುವಾರುಗಳಿಗೆ ಕುಡಿಯುವ ನೀರು, ರಸ್ತೆ ಹಾಗೂ ಯಾವುದೇ ಸೌಕರ್ಯ ನೀಡುವುದಿಲ್ಲ ಎಂದು ಆದೇಶ ನೀಡಿರುವುದನ್ನು ಘನವೆತ್ತ ಸುಪ್ರೀಂಕೋರ್ಟ್ ಕೂಡಲೇ ವಾಪಸ್ ಪಡೆಯಬೇಕು. ಈ ಆದೇಶವನ್ನು ಮಾಡುವಾಗ ಘನವೆತ್ತ ಸುಪ್ರೀಂಕೋರ್ಟ್, ಭಾರತ ಸರ್ಕಾರದ ಘನವೆತ್ತ ರಾಷ್ಟ್ರಪತಿಯವರ ಅನುಮೋದನೆ ಮೂಲಕ ಜಾರಿ ಮಾಡಬೇಕು. ಅದು ಭಾರತ ರಾಷ್ಟ್ರದ ಘನವೆತ್ತ ರಾಷ್ಟ್ರಪತಿ ಯವರ ಅನುಮೋದನೆಯ ಮೂಲಕ ಕಾರ್ಯಗತಕ್ಕೆ ಮುಂದಾಗಬೇಕಾದ ಆದೇಶ ಆಗಿರುತ್ತದೆ. ಆದರೆ ಘನವೆತ್ತ ಸುಪ್ರೀಂ ಕೋರ್ಟ್ ಏಕಾಏಕಿ ನಿರ್ಧಾರ ತೆಗೆದುಕೊಂಡು ಆದೇಶ ಮಾಡಿರುವುದು ಇದು ಭಾರತ ದೇಶದ ನ್ಯಾಯಕ್ಕೆ ಸರಿಯಾದ ಮಾರ್ಗವಲ್ಲ ಎಂದು ವಿಶ್ವ ರೈತನಾಯಕ ಪ್ರೊ: ಎಂ ಡಿ ನಂಜುಂಡಸ್ವಾಮಿ ಸ್ಥಾಪಿತ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯ ಸಂಚಾಲಕ ಹಾಗೂ ರಾಜ್ಯ ಉಸ್ತುವಾರಿ ಕನಕಂಚೇನಹಳ್ಳಿ ಪಟೇಲ್ ಪ್ರಸನ್ನ ಕುಮಾರ್ ಹೇಳಿದರು.
ಅವರು ತಾಲೂಕು ಪಂಚಾಯಿತಿ ಸಹಾಯಕ ನಿರ್ದೇಶಕ ಆರ್ ವಿನಯ್ ಕುಮಾರ್ ಹಾಗೂ ನಗರಸಭೆ ಕಂದಾಯ ಅಧಿಕಾರಿ ಮಂಜುನಾಥ್ ಮತ್ತು ವ್ಯವಸ್ಥಾಪಕರಾದ ಕಲಾವತಿ ಇವರಿಗೆ ಮನವಿ ಪತ್ರ ಸಲ್ಲಿಸಿ ಮಾತನಾಡಿ ಘನವೆತ್ತ ಸುಪ್ರೀಂ ಕೋರ್ಟ್ ತಕ್ಷಣವೇ ಈ ನಿರ್ಧಾರವನ್ನು ನಿಲ್ಲಿಸಬೇಕು, ಇದನ್ನು ಕೂಡಲೇ ವಾಪಸ್ ಪಡೆದುಕೊಳ್ಳಬೇಕು ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ರಾಷ್ಟ್ರ ಮತ್ತು ರಾಜ್ಯಾದ್ಯಂತ ಹೋರಾಟ ನಡೆಯುವುದು ಖಚಿತ, ಆದ್ದರಿಂದ ಘನವೆತ್ತ ಸುಪ್ರೀಂಕೋರ್ಟಗೆ ಮನವಿ ಮಾಡಿಕೊಳ್ಳುತ್ತಿದ್ದೇವೆ. ಕೂಡಲೇ ಎಲ್ಲರಿಗೂ ಒಳ್ಳೆಯ ಅನುಕೂಲ ವಾಗುವಂತಹ ನಿರ್ಧಾರವನ್ನು ಘನವೆತ್ತ ಸುಪ್ರೀಂ ಕೋರ್ಟ್ ತೆಗೆದುಕೊಳ್ಳಬೇಕೆಂದು ಮನವಿ ಮಾಡಿಕೊಳ್ಳುತ್ತಿದ್ದೇವೆ ಹಾಗೂ ಕೂಡಲೇ ಎಲ್ಲರಿಗೂ ಅನುಕೂಲ ವಾಗುವಂತಹ ಆದೇಶವನ್ನು ಪುನಃ ನೀಡಬೇಕಾಗಿ ತಮ್ಮಲ್ಲಿ ಕಳಕಳಿಯ ಮನವಿ ಪತ್ರವನ್ನು ಘನವೆತ್ತ ಸುಪ್ರೀಂಕೋರ್ಟಿಗೆ ತಮ್ಮ ಮೂಲಕ ಮನವಿ ಸಲ್ಲಿಸುತ್ತಿದ್ದೇವೆ ಎಂದು ಮನವಿ ಪತ್ರ ಸಲ್ಲಿಸಿದರು.
ಈ ಸಂದರ್ಭದಲ್ಲಿ ರೈತ ಮುಖಂಡರುಗಳಾದ ಏಜಾಜ್ ಪಾಷ, ಮಹಮ್ಮದ್ ದಸ್ತಿಗಿರ್ ,ನಂಜಮ್ಮ, ಅಬ್ದುಲ್ ಕುಂಜಿ, ಅಮ್ಜದ್ ಖಾನ್, ತಮ್ಮಯ್ಯ, ಮಂಜುನಾಥ್, ರಾಮಣ್ಣ ,ಶಶಿಕುಮಾರ್, ನಿಂಗಣ್ಣ, ಗಂಗಣ್ಣ ,ಎಲ್ಲಾ ರೈತ ಮುಖಂಡರು, ರೈತರು, ರೈತ ಮಹಿಳಾ ಮುಖಂಡರು, ರೈತ ಸಂಘದ ಕಾರ್ಯಕರ್ತರು ಉಪಸ್ಥಿತರಿದ್ದರು.