ಅರಸೀಕೆರೆ:ಅಮರಗಿರಿ ಮಾಲೇಕಲ್ ತಿರುಪತಿ ಶ್ರೀ ಲಕ್ಷ್ಮಿ ವೆಂಕಟರಮಣ ಸ್ವಾಮಿಯವರ ಕ್ಷೇತ್ರವು ರಾಜ್ಯದಲ್ಲೇ ಚಿಕ್ಕ ತಿರುಪತಿ ಎಂದು ಪ್ರಸಿದ್ಧಿಯನ್ನು ಪಡೆದಿದೆ. ಈ ಕ್ಷೇತ್ರದಲ್ಲಿ ನಿತ್ಯ ಅನ್ನದಾಸೋಹ ಭವನಕ್ಕೆ ಶಾಸಕ ಹಾಗೂ ರಾಜ್ಯ ಗೃಹ ಮಂಡಳಿ ಅಧ್ಯಕ್ಷರಾದ ಕೆಎಂ ಶಿವಲಿಂಗೇಗೌಡ ಸೋಮವಾರ ಭೂಮಿ ಪೂಜೆ ನೇರವೇರಿಸಿದರು.
ನಂತರ ಮಾತನಾಡಿ ಅಮರಗಿರಿ ಮಾಲೆಕಲ್ ತಿರುಪತಿ ಕ್ಷೇತ್ರವು ಪ್ರತಿಷ್ಠಿತ ಧಾರ್ಮಿಕ ಕ್ಷೇತ್ರವಾಗಿದ್ದು ,ಈ ಕ್ಷೇತ್ರದಲ್ಲಿ ಶ್ರೀ ಗೋವಿಂದರಾಜ ಸ್ವಾಮಿ, ಶ್ರೀ ಲಕ್ಷ್ಮಿ ವೆಂಕಟರಮಣ ಸ್ವಾಮಿ ಮತ್ತು ಶ್ರೀ ಪದ್ಮಾವತಿ ಅಮ್ಮನವರು, ಶ್ರೀ ಆಂಜನೇಯ ಸ್ವಾಮಿ ಹಾಗೂ ಬೆಟ್ಟದ ಮೇಲೆ ಶ್ರೀ ವೆಂಕಟರಮಣ ಸ್ವಾಮಿ ಮತ್ತು ಪದ್ಮಾವತಿ ಅಮ್ಮನವರು ನೆಲೆಸಿದ್ದಾರೆ.
ಇದನ್ನು ಪ್ರಸಿದ್ಧ ಯಾತ್ರಾ ಕ್ಷೇತ್ರವನ್ನಾಗಿ ಮಾಡಲಾಗುವುದು ಎಂದು ಹೇಳಿದರು.
ಈ ಕ್ಷೇತ್ರಕ್ಕೆ ಆಗಮಿಸುವ ಭಕ್ತಾದಿಗಳಿಗೆ ದಾಸೋಹ ಭವನ ಅವಶ್ಯಕತೆ ಇದ್ದು, ಆ ನಿಟ್ಟಿನಲ್ಲಿ ಮುಜರಾಯಿ ಇಲಾಖೆಯಿಂದ 18.50 ಲಕ್ಷ ರೂ ವೆಚ್ಚದಲ್ಲಿ ಭವ್ಯವಾದ ಭವನಕ್ಕೆ ಭೂಮಿ ಪೂಜೆ ನೆರವೇರಿದೆ. ಇನ್ನು ಹೆಚ್ಚುವರಿ ಅನುದಾನ ಹಣದಿಂದ ಭವನ ನಿರ್ಮಾಣದೊಂದಿಗೆ ಸುಸಜ್ಜಿತ ಅಡುಗೆ ತಯಾರಿಕೆ ಕೊಠಡಿ, ಸಾಮಗ್ರಿಗಳು, ಸಿಬ್ಬಂದಿ, ಪಾಕ ತಜ್ಞರು ಹಾಗೂ ಸೇವಾ ಕಾರ್ಯಕರ್ತರು ಕ್ಷೇತ್ರಕ್ಕೆ ಬರುವ ಭಕ್ತರ ಸೇವೆಗೆ ಸದಾ ಸಿದ್ದರಿರುವಂತೆ ಮಾಡಲಾಗುವುದು ಎಂದರು. ಆಗಮಿಕರಾದ ರಾಮಪ್ರಸಾದ್, ಅರ್ಚಕರಾದ ವರದರಾಜು, ಶ್ರೀನಿವಾಸ್ ಭೂಮಿ ಪೂಜ ಕಾರ್ಯವನ್ನು ನೆರವೇರಿಸಿದರು. ಈ ಸಂದರ್ಭದಲ್ಲಿ ಅಗ್ಗುಂದ ಗ್ರಾಮ ಪಂಚಾಯಿತಿ ಅಧ್ಯಕ್ಷ ರಾದ ಕವಿತಾ ಎ ಎಂ, ನಗರಸಭೆ ಉಪಾಧ್ಯಕ್ಷ ಮನೋಹರ ಮೇಸ್ತ್ರಿ, ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಅಧ್ಯಕ್ಷ ಗೀಜಿಹಳ್ಳಿ ಧರ್ಮಶೇಖರ್, ಜಾತ್ರಾ ಉಸ್ತುವಾರಿ ಸಮಿತಿ ಅಧ್ಯಕ್ಷ ಟಿ ಆರ್ ನಾಗರಾಜ್, ಲೋಕೋಪಯೋಗಿ ಇಲಾಖೆ ಸಹಾಯಕ ಕಾರ್ಯ ಪಾಲಕ ಅಭಿಯಂತರ ಬಾಲಾಜಿ, ಅಗ್ಗುಂದ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಗಿರೀಶ್, ಪಿಡಿಓ ಶಿವಕುಮಾರ್, ಪಾರುಪತ್ತೆ ದಾರ ಲೋಕೇಶಯ್ಯ, ಗ್ರಾಮ ಲೆಕ್ಕಾಧಿಕಾರಿ ಅಶ್ವಿನಿ, ಗ್ರಾಮ ಪಂಚಾಯತಿ ಸದಸ್ಯ ಈಶ್ವರ ನಾಯ್ಕ, ರೇಣುಕಪ್ಪ, ಇನ್ನಿತರರು ಉಪಸಿದ್ಧರಿದ್ದರು.