ಕಲ್ಲನಾಯಕನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಅಂತರಾಷ್ಟ್ರೀಯ ಯೋಗ ದಿನ ಆಚರಣೆ
ಅರಸೀಕೆರೆ:ಕಲ್ಲನಾಯಕನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಇಂದು ಅಂತರಾಷ್ಟ್ರೀಯ ಯೋಗ ದಿನ ಕಾರ್ಯಕ್ರಮ ಅರ್ಥಪೂರ್ಣವಾಗಿ ಜರಗಿತು. ಮುಖ್ಯ ಶಿಕ್ಷಕಿ ಉಷಾ ಎಂ ಮಾತನಾಡಿ ಯೋಗ ದಿಂದ ಆರೋಗ್ಯ ಮತ್ತು ಉತ್ತಮ ಮನಸ್ಥಿತಿಯನ್ನು ಹೊಂದಬಹುದು, ದಿನನಿತ್ಯ ಎಲ್ಲರೂ ಯೋಗಭ್ಯಾಸ ಚಟುವಟಿಕೆ ಮಾಡಬೇಕು ಎಂದು ತಿಳಿಸಿದರು.
ಸಹ ಶಿಕ್ಷಕಿ ಪವಿತ್ರ ಸಿಎಸ್ ಇವರು ಮಕ್ಕಳಿಗೆ ಯೋಗಭ್ಯಾಸ ಮಾಡಿಸಿ ಮಾತನಾಡಿ ಯೋಗ ಮಾಡುವುದರಿಂದ ಒತ್ತಡ ನಿಯಂತ್ರಣ, ಏಕಾಗ್ರತೆ, ಆತ್ಮವಿಶ್ವಾಸ ಮತ್ತು ಸಕಾರಾತ್ಮಕ ಚಿಂತನೆಗಳನ್ನು ಹೆಚ್ಚಿಸುವಲ್ಲಿ ಸಹಕಾರಿಯಾಗಿದೆ ಎಂದು ತಿಳಿಸಿದರು. ಈ ಯೋಗ ಕಾರ್ಯಕ್ರಮದಲ್ಲಿ 12 ಮಕ್ಕಳು ಭಾಗವಹಿಸಿದ್ದರು.