ಶ್ರೀ ಬಸವರಾಜೇಂದ್ರ ಪ್ರೌಢಶಾಲೆಯಲ್ಲಿ ವಿಶ್ವ ಯೋಗ ದಿನಾ ಆಚರಣೆ
ವೈಚಾರಿಕ ವಾರ್ತೆ,ಅರಸೀಕೆರೆ:ವಿಶ್ವ ಯೋಗ ದಿನದ ಅಂಗವಾಗಿ ಇಂದು ನಗರದ ಶ್ರೀ ಬಸವರಾಜೇಂದ್ರ ಪ್ರೌಢಶಾಲೆ ಶಾಲಾ ಮಕ್ಕಳಿಗೆ ಯೋಗಾಸನ ಮಾಡಿಸುವ ಮೂಲಕ ವಿಶ್ವ ಯೋಗ ದಿನವನ್ನು ಆಚರಿಸಲಾಯಿತು.
ದೈಹಿಕ ಶಿಕ್ಷಕ ರೇವಣ್ಣ ಮಕ್ಕಳಿಗೆ ಯೋಗಾಸನದ ಉಪಯೋಗ ಮತ್ತು ಮಹತ್ವದ ಬಗ್ಗೆ ಮಾಹಿತಿ ನೀಡಿ ಯೋಗಭ್ಯಾಸ ಮಾಡಿಸಿದರು. ಸುಮಾರು 210 ವಿದ್ಯಾರ್ಥಿಗಳು ಯೋಗಾಸನ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಈ ಕಾರ್ಯಕ್ರಮದಲ್ಲಿ ಮುಖ್ಯ ಶಿಕ್ಷಕ ಕೆ ಆರ್ ದಯಾನಂದ, ಶಿಕ್ಷಕರಾದ ಜಗದೀಶ್, ಪ್ರವೀಣ್, ಶೇರ್ ಹಾಲಿ, ಬಸವೇಗೌಡ, ಮನು, ಶೋಭಾವತಿ, ನಿರ್ಮಲ, ಶ್ವೇತ, ವನಿತ, ಪ್ರೇಮಕುಮಾರಿ ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.