ಅರಸೀಕೆರೆ:ವಿಶ್ವ ಯೋಗ ದಿನದ ಅಂಗವಾಗಿ ಇಂದು ನಗರದ ಬಾಲಕಿಯರ ಸರ್ಕಾರಿ ಪ್ರೌಢಶಾಲೆ ವಿದ್ಯಾರ್ಥಿನಿಯರಿಗೆ ಯೋಗಭ್ಯಾಸ ಮಾಡಿಸುವ ಮೂಲಕ ವಿಶ್ವ ಯೋಗ ದಿನವನ್ನು ಆಚರಿಸಲಾಯಿತು.
ಆನೇಕಲ್ ತಾಲೂಕು ಜಿಗಣಿ ಎಸ್ ಎಸ್ ವೈ ಎನ್ ಕಾಲೇಜಿನ ಬಿ ಎನ್ ವೈ ಎಸ್ ಕೋರ್ಸನ ವಿದ್ಯಾರ್ಥಿನಿಯರಾದ ಶಿವಾನಿ, ಸ್ಪೂರ್ತಿ, ಪಲ್ಲವಿ ಇವರು ಮಕ್ಕಳಿಗೆ ಯೋಗಾಸನದ ಉಪಯೋಗ ಮತ್ತು ಮಹತ್ವದ ಬಗ್ಗೆ ಮಾಹಿತಿ ನೀಡಿ ಯೋಗಭ್ಯಾಸ ಮಾಡಿಸಿದರು. ಸುಮಾರು 160 ವಿದ್ಯಾರ್ಥಿನಿಯರು ಯೋಗಾಸನ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಈ ಕಾರ್ಯಕ್ರಮದಲ್ಲಿ ಮುಖ್ಯ ಶಿಕ್ಷಕ ಜಗದೀಶ್ ಹಿರೇಮಠ್, ದೈಹಿಕ ಶಿಕ್ಷಕ ಕೆ ಎಂ ಶಶಿಧರ್, ಶಿಕ್ಷಕಿಯರಾದ ಉಮಾದೇವಿ, ರೇಣುಕ.ಪಾಲಾಕ್ಷಿ ಮೂರ್ತಿ, ಶಶಿಕಲಾ, ನವೀನ್ ಕುಮಾರ್ ,ವಾಣಿಶ್ರೀ, ಗಂಗಾಧರ್ ತವರಿಮಠ್, ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರ