ಹಿರಿಯ ಪತ್ರಕರ್ತ ಪಿ.ಶಾಂತಕುಮಾರ್ ನಿಧನ

ಅರಸೀಕೆರೆ :ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಮಾಜಿ ಅಧ್ಯಕ್ಷ ಹಾಗೂ ಕನ್ನಡಪ್ರಭ ವರದಿಗಾರರಾದ ಪಿ.ಶಾಂತಕುಮಾರ್ ತೀವ್ರ ಹೃದಯಾಘಾತ ದಿಂದ ಹಾಸನದ ಖಾಸಗಿ ಆಸ್ಪತ್ರೆಯಲ್ಲಿ ಬುಧವಾರ ರಾತ್ರಿ ನಿಧನ ಹೊಂದಿದರು.

ಸದಾ ಹಸನ್ಮುಖಿಯಾಗಿ ಸಾರ್ವಜನಿಕ ವಲಯದಲ್ಲಿ ಪೇಪರ್ ಶಾಂತಣ್ಣ ಎಂದು ಖ್ಯಾತರಾಗಿದ್ದ ಇವರು ಪತ್ರಕರ್ತರ ಸಂಘದ ಶ್ರೇಯೋಭಿವೃದ್ಧಿಗೆ ಶ್ರಮಿಸುವ ಮೂಲಕ ಮಾರ್ಗದರ್ಶಿಗಳಾಗಿ ಸ್ನೇಹ ಜೀವಿಯಾಗಿದ್ದರು. ಮೃತರು ಪತ್ನಿ, ಒರ್ವ ಪುತ್ರ, ಇಬ್ಬರು ಪುತ್ರಿ ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.

ಕೋಡಿಮಠ ಮಹಾಸಂಸ್ಥಾನ ಪೀಠಾಧ್ಯಕ್ಷರಾದ ಡಾ.ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮಿಜಿ‌,ಮಾರುತಿ ಸಚ್ಚಿದಾನಂದ ಆಶ್ರಮದ ಅವಧೂತ್ ಸತೀಶ್ ಶರ್ಮಾಜಿ, ರಾಜ್ಯ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ತಗಡೂರು ಕಂಬನಿ ಮಿಡಿದಿದ್ದಾರೆ.

ಈ ನಗರದ ಕುಂಬಾರಬೀದಿ ಬಡಾವಣೆಯಲ್ಲಿ ಇರಿಸಲಾಗಿದ್ದ ಪಾರ್ಥಿವ ಶರೀರವನ್ನು ಶಾಸಕ ಹಾಗು ರಾಜ್ಯ ಗೃಹಮಂಡಳಿ ಅಧ್ಯಕ್ಷ ಕೆ.ಎಂ.ಶಿವಲಿಂಗೇಗೌಡ, ನಗರಸಭೆ ಅಧ್ಯಕ್ಷ ಎಂ.ಸಮೀವುಲ್ಲ, ಉಪಾಧ್ಯಕ್ಷ ಮನೋಹರ್, ಜಿ.ಪಂ ಮಾಜಿ ಸದಸ್ಯ ಗೊಲ್ಲರಹಳ್ಳಿ ಶಿವಪ್ಪ, ತಹಸೀಲ್ದಾರ್ ಎಂ.ಜಿ ಸಂತೋಷ್ ಕುಮಾರ್, ಮಾಜಿ ಶಾಸಕ ಜಿ.ಎಸ್ ಪರಮೇಶ್ವರಪ್ಪ, ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ವೇಣುಕುಮಾರ್, ಪ್ರಧಾನ ಕಾರ್ಯದರ್ಶಿ ಶಶಿಧರ, ಮಾಜಿ ಅಧ್ಯಕ್ಷರಾದ ಕೆಂಚೇಗೌಡ, ಮಂಜುನಾಥ್, ರವಿ ನಾಕಲಗೂಡು, ಉದಯರವಿ, ಬಾಳ್ಳು ಗೋಪಾಲ್, ಉದಯಕುಮಾರ್, ಪ್ರಸನ್ನ ಕುಮಾರ್, ತಾ. ಅಧ್ಯಕ್ಷ ಎಲ್. ಮಂಜುನಾಥ್, ಪ್ರಧಾನ ಕಾರ್ಯದರ್ಶಿ ಹೇಮಂತ್ ಕುಮಾರ್, ಮಾಜಿ ಅಧ್ಯಕ್ಷ ರಾಮಚಂದ್ರು, ಬಿ.ಎಸ್ ಸೇತುರಾಮ್, ಮಾಡಾಳು ಶಿವಲಿಂಗಪ್ಪ, ಟಿ.ಆನಂದ್, ಕಣಕಟ್ಟೆ ಕುಮಾರ್, ಪತ್ರಕರ್ತರ ಸಂಘದ ತಾ.ಅಧ್ಯಕ್ಷ ಮಂಜುನಾಥ್ , ಉದ್ಯಮಿ ಕೆ.ಪಿ ವಿಶ್ವನಾಥ್, ಡಾ. ಶಿಬಿರಹೆಗ್ಗಡೆ, ರೈತ ಮುಖಂಡ ಕನಕೆಂಚೇನಹಳ್ಳಿ ಪ್ರಸನ್ನಕುಮಾರ್, ಜಿವಿಟಿ ಬಸವರಾಜು, ಮುರುಗೇಂದ್ರಪ್ಪ, ಬಿಜೆಪಿ ಅಧ್ಯಕ್ಷ ಯತೀಶ್ ಕುಮಾರ್, ಮನೋಜ್ ಕುಮಾರ್, ಕರವೇ ಅಧ್ಯಕ್ಷ ಕಿರಣ್ ಕುಮಾರ್, ನಗರಾಧ್ಯಕ್ಷ ಸಂತೋಷ್, ಸೇರಿದಂತೆ ಜಿಲ್ಲಾ ಮತ್ತು ತಾಲ್ಲೂಕು ಪತ್ರಕರ್ತರು, ಮುಖಂಡರು, ಜನಪ್ರತಿನಿಧಿಗಳು, ವೀರಶೈವ ಸಮಾಜದ, ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಮುಖಂಡರು ಶ್ರದ್ಧಾಂಜಲಿ ಸಲ್ಲಿಸಿದರು.

ಹಾರನಹಳ್ಳಿ ಬಳಿ ಇರುವ ರಂಗಾಪುರ ಕಾವಲು ಜೇನುಕಲ್ಲು ಸಿದ್ದಾಪುರ ನಾಗೇನಹಳ್ಳಿ ದೊಡ್ಡಹಟ್ಟಿಯಲ್ಲಿರುವ ಸ್ವಂತ ಜಮೀನಿನಲ್ಲಿ ಮದ್ಯಾಹ್ನ ಮೃತರ ಅಂತ್ಯಕ್ರಿಯೆ ನೆರವೇರಿತು.

Leave a Reply

Your email address will not be published. Required fields are marked *

error: Content is protected !!