ಗ್ರಾಮೀಣ ಯುವಕ ಯುವತಿಯರು ಯಶಸ್ವಿ ಉದ್ದಿಮೆದಾರರಾಗಬೇಕು- ಮಧು ಎಂ ಎನ್
ಹಾಸನ:ಸೂಕ್ಷ್ಮ, ಸಣ್ಣ, ಮಧ್ಯಮ, ಬೃಹತ್ ಕೈಗಾರಿಕೆಗಳು ಇದ್ದು ಗ್ರಾಮೀಣ ಭಾಗದ ನಿರುದ್ಯೋಗ ಯುವಕ ಮತ್ತು ಯುವತಿಯರು ಇದರ ಸದುಪಯೋಗ ಪಡಿಸಿಕೊಂಡು, ಸರ್ಕಾರದ ಸಹಾಯಧನ ಪಡೆದುಕೊಂಡು ಉದ್ಯಮಶೀಲರಾಗಿ ತಾವು ಆರ್ಥಿಕವಾಗಿ ಸದೃಢರಾಗಬೇಕು ಎಂದು ಹಾಸನ ಸೀಡಾಕ್ ಜಂಟಿ ನಿರ್ದೇಶಕ ಮಧು ಎಂ ಎನ್ ಕರೆ ನೀಡಿದರು.
ಅವರು
ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ಬೆಂಗಳೂರು, ಕರ್ನಾಟಕ ಉದ್ಯಮಶೀಲತಾಭಿವೃದ್ಧಿ ಕೇಂದ್ರ(ಸಿಡಾಕ್) ಧಾರವಾಡ, ಜಿಲ್ಲಾ ಕೈಗಾರಿಕಾ ಕೇಂದ್ರ ಹಾಸನ ಇವರ ಸಂಯುಕ್ತಾಶ್ರಯದಲ್ಲಿ ನಡೆದ ಒಂದು ದಿನದ ಉದ್ಯಮಶೀಲತಾ ಅರಿವು ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಎಲ್ಲಾ ಬಾವಿ ಉದ್ದಿಮೆದಾರರು ಕೌಶಲ್ಯ ಅಭಿವೃದ್ಧಿ ತರಬೇತಿಯನ್ನು ಪಡೆದುಕೊಂಡು ಯಶಸ್ವಿ ಉದ್ದಿಮೆದಾರರ ಆಗಬೇಕು ಹಾಗೂ ಆರ್ಥಿಕ ಅಭಿವೃದ್ಧಿಯನ್ನು ಹೊಂದಬೇಕು ಎಂದರು.
ಹಾಸನ ಜಿಲ್ಲೆಯ ಬಾವಿ ಉದ್ದಿಮೆದಾರರಿಗೆ ಉದ್ಯಮಶೀಲತೆ ಹಾಗೂ ಸರ್ಕಾರದ ಯೋಜನೆ ಬಗ್ಗೆ, ಬ್ಯಾಂಕಿಂಗ್ ಬಗ್ಗೆ ತಿಳಿಸಿಕೊಡಲಾಯಿತು.
ಹೊಸ ಉದ್ಯಮ ಪ್ರಾರಂಭ ಮಾಡಲು ಇಚ್ಛಿಸುವ ಅಭ್ಯರ್ಥಿಗಳಿಗೆ ಮಾರ್ಗದರ್ಶನ ನೀಡಲಾಯಿತು.
ಹಾಸನ ಸಣ್ಣ ಕೈಗಾರಿಕೆ ಸಂಘದ ಅಧ್ಯಕ್ಷ ಶಿವರಾಂ, ಯಶಸ್ವಿ ಉದ್ಯಮಿ ಪ್ರಕಾಶ್ ಯಾಜಿ ,ಹಾಸನ ಲೀಡ್ ಬ್ಯಾಂಕ್ ವ್ಯವಸ್ಥಾಪಕರು ಲತಾ ಸರಸ್ವತಿ, ಕೈಗಾರಿಕಾ ವಿಸ್ತರಣೆ ಅಧಿಕಾರಿ ಆನಂದ್, ಜಿಲ್ಲಾ ಸಾಂಖ್ಯಿಕ ಇಲಾಖೆ ಪೂರ್ಣೇಶ್,ಕೌಶಲ್ಯ ಅಭಿವೃದ್ಧಿ ಸಂಪನ್ಮೂಲ ವ್ಯಕ್ತಿ ಕಾಳೇಗೌಡ,ಹಾಸನ ಸಿಡಾಕ್ ತರಬೇತುದಾರ ಎಚ್ ಪಿ ಮೋಹನ್ ಉಪಸ್ಥಿತರಿದ್ದರು. ಶಿಬಿರಾರ್ಥಿಗಳು ತರಬೇತಿಯಲ್ಲಿ ಭಾಗವಹಿಸಿ ಹೆಚ್ಚಿನ ಮಾಹಿತಿಯನ್ನು ಪಡೆದುಕೊಂಡರು.