ಪಾಕ ತಜ್ಞರ ಪಾತ್ರ ಬಹಳ ಮಹತ್ವವನ್ನು ಹೊಂದಿರುತ್ತದೆ-ಎಸ್ ರಘುನಾಥ್
ಅರಸೀಕೆರೆ :ಯಾವುದೇ ಕಾರ್ಯಕ್ರಮಗಳು ಪ್ರಾರಂಭ ಮತ್ತು ಯಶಸ್ವಿಯಾಗಬೇಕಾದರೆ ಪಾಕತಜ್ಞರ ಪಾತ್ರ ಬಹಳ ಮಹತ್ವವನ್ನು ಹೊಂದಿರುತ್ತದೆ ಎಂದು ಅಖಿಲ ಕರ್ನಾಟಕ ಬ್ರಾಹ್ಮಣ ಮಹಾ ಸಭಾ ಅಧ್ಯಕ್ಷ ಎಸ್ ರಘುನಾಥ್ ಅಭಿಪ್ರಾಯ ಪಟ್ಟರು.
ಅವರು ನಗರದ ಹಾರನಹಳ್ಳಿ ರಾಮಸ್ವಾಮಿ ಸಮುದಾಯ ಭವನದಲ್ಲಿ ಜಿಲ್ಲಾ ವಿಪ್ರಪಾಕ ತಜ್ಞರ 21 ನೇ ವಾರ್ಷಿಕೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಯಾವುದೇ ವೃತ್ತಿಯಾಗಲಿ ನಾವು ಮಾಡುವ ವೃತ್ತಿಯನ್ನು ಗೌರವಿಸಬೇಕು, ಸಮಾರಂಭಗಳಲ್ಲಿ ರುಚಿಕರವಾಗಿ ಅಡಿಗೆ ಸಿದ್ದಗೊಳಿಸಿದಾಗ ಮಾತ್ರ ಕಾರ್ಯಕ್ರಮ ಯಶಸ್ವಿಯಾಗುತ್ತದೆ. ಕಾರ್ಯಕ್ರಮದಲ್ಲಿ ಬಂದವರೆಲ್ಲರೂ ಊಟ ಚೆನ್ನಾಗಿತ್ತು ಎಂದು ಹೇಳುತ್ತಾರಷ್ಟೇ ಬೇರೇನು ಹೇಳುವುದಿಲ್ಲ ಎಂದ ಅವರು ಪಾಕತಜ್ಞರ ಸಂಘಟನೆ ಬಹಳ ಅಗತ್ಯ ಇದೆ. ತಮಗೆ ಎಷ್ಟೇ ಆಯಾಸವಾಗಿದ್ದರೂ ಸಹ ನಗುಮುಗದಲ್ಲಿ ಅಡಿಗೆ ಮಾಡಿ ಬಡಿಸುತ್ತೀರಿ, ನಿಮ್ಮ ಸೇವೆ ಶ್ಲಾಘನೀಯ ನಿಮ್ಮ ಪ್ರತಿಭಾ ವಿದ್ಯಾರ್ಥಿಗಳನ್ನು ಗುರುತಿಸಿದ್ದೀರಿ ಅವರನ್ನು ಪ್ರೋತ್ಸಾಹಿಸುವ ಕೆಲಸ ನಿಮ್ಮಿಂದ ಆಗಿದೆ. ಇಲ್ಲಿನ ಕಾರ್ಯಕ್ರಮ ಉತ್ತಮವಾಗಿ ಆಯೋಜನೆಗೊಂಡಿದೆ ಎಂದ ಅವರು ರಾಜ್ಯ ಸಂಘಕ್ಕೆ ಸದಸ್ಯರಾಗಿರಿ ಎಂದು ಮನವಿ ಮಾಡಿದರು.
ಹಾಸನ ಜಿಲ್ಲಾ ಬ್ರಾಹ್ಮಣ ಮಹಾಸಭಾ ಅಧ್ಯಕ್ಷ ಎಚ್ ಎಸ್ ಮಂಜುನಾಥ್ ಮೂರ್ತಿ ಪಾಕ ತಜ್ಞರುಗಳ ಪರಿಶ್ರಮ ಮತ್ತು ಅವರುಗಳ ಸಮಸ್ಯೆಗಳ ನಡುವೆಯೂ ಅವರು ನೀಡುವ ಸೇವೆ ನಿಜಕ್ಕೂ ಸಂತೋಷವಾಗುತ್ತದೆ. ಸಂಘವನ್ನು ನೋಂದಣಿ ಮಾಡಿಕೊಳ್ಳುವ ಮೂಲಕ ಇನ್ನೂ ಹೆಚ್ಚಿನ ಪ್ರಗತಿಯನ್ನು ಸಾಧಿಸಬೇಕೆಂದು ಅವರು ಆಶಿಸಿದರು.
ಹಾಸನ ಜಿಲ್ಲಾ ಬ್ರಾಹ್ಮಣ ಮಹಾಸಭಾ ಸದಸ್ಯತ್ವವನ್ನು ಜಿಲ್ಲಾ ಸಮಾಜ ಬಾಂಧವರು ಪಡೆಯಬೇಕೆಂದು ಅವರು ಮನವಿ ಮಾಡಿದರು. ಅರಸೀಕೆರೆ ತಾಲೂಕು ಬ್ರಾಹ್ಮಣ ಸಂಘದ ಉಪಾಧ್ಯಕ್ಷ ಹಿರಿಯಣ್ಣ ಮಾತನಾಡಿ ಮುಂದಿನ ದಿನಗಳಲ್ಲಿ ಅಡಿಗೆಯವರು ಸಿಗುವುದು ಕಷ್ಟವಾಗುತ್ತದೆ ಮಕ್ಕಳು ಓದಿ ನೌಕರಿಯತ್ತ ಹೋಗುತ್ತಿದ್ದಾರೆ. ಇದು ಒಂದು ಸಮಾಜ ಸೇವೆ ಮತ್ತು ಇದರಲ್ಲೂ ಉತ್ತಮವಾಗಿ ಬದುಕನ್ನು ಕಟ್ಟಿಕೊಳ್ಳಬಹುದು ಎಂಬುದಕ್ಕೆ ನಮ್ಮೆದುರಿಗೆ ನಿದರ್ಶನಗಳು ಇವೆ. ಈ ವೃತ್ತಿಯಲ್ಲಿಯೇ ಯಶಸ್ಸನ್ನು ಕಂಡಿದ್ದಾರೆ. ಪ್ರತಿಯೊಬ್ಬರು ವೃತ್ತಿಯನ್ನು ಗೌರವಿಸಬೇಕು ಎಂದರು.
ಅರಸೀಕೆರೆ ತಾಲ್ಲೂಕು ಬ್ರಾಹ್ಮಣ ಸಂಘದ ಗೌರವ ಅಧ್ಯಕ್ಷ ಕೆ ರಮೇಶ್ ಅರಸೀಕೆರೆಯಲ್ಲಿ ಇಂತಹ ಒಂದು ಕಾರ್ಯಕ್ರಮ ನಡೆಯುತ್ತಿರುವುದು ಸಂತೋಷವನ್ನು ತಂದಿದೆ. ರಾಜ್ಯಾಧ್ಯಕ್ಷರು ಕಾರ್ಯಕ್ರಮಕ್ಕೆ ದಯಮಾಡಿಸಿ ಮೆರಗು ನೀಡಿದ್ದಾರೆ. ಇಲ್ಲಿನ ವಿಪ್ರಪಾಕ ತಜ್ಞರು ಸಮಾಜದೊಂದಿಗೆ ಉತ್ತಮ ಬಾಂಧವ್ಯವನ್ನು ಹೊಂದಿದ್ದು ಒಳ್ಳೆಯ ಸೇವೆಯನ್ನು ನೀಡುತ್ತಿದ್ದಾರೆ, ಈ ಕಾರ್ಯಕ್ರಮ ಆಯೋಜಕರಿಗೆ ಅಭಿನಂದನೆ ಹೇಳಿದರು.
ತಾಲೂಕು ಬ್ರಾಹ್ಮಣ ಸಂಘದ ಉಪಾಧ್ಯಕ್ಷ ಹಾಗೂ ವಕೀಲ ಕೆ ವಿ ಹಿರಣ್ಣಯ್ಯ ಪಾಕ ತಜ್ಞರ ಅಗತ್ಯ ಮತ್ತು ಮಹತ್ವ ಅವರು ನೀಡುವ ಸೇವೆಯನ್ನು ಅಭಿನಂದಿಸಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಪಾಕ ತಜ್ಞರ ಸಂಘದ ಅಧ್ಯಕ್ಷ ಎಸ್ ವೆಂಕಟೇಶ್ ಕಿಂಕೋ ನಾಗರಾಜ್, ಅರಸೀಕೆರೆ ತಾಲ್ಲೂಕ್ ಬ್ರಾಹ್ಮಣ ಸಂಘದ ಕಾರ್ಯದರ್ಶಿ ಸುಬ್ರಹ್ಮಣ್ಯ, ವಿಪ್ರ ನೌಕರರ ಸಂಘದ ಅಧ್ಯಕ್ಷ ಮೋಹನ್ ಕುಮಾರ್, ಗಾಯತ್ರಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಹರೀಶ್ ಕೆ, ಸೀತಾ ಮಹಿಳಾ ಸಂಘದ ಅಧ್ಯಕ್ಷೇ ಪ್ರೇಮ, ಯುವಕ ಸಂಘದ ಅಧ್ಯಕ್ಷ ಚೈತನ್ಯ ಕಶ್ಯಪ್, ಅರಸೀಕೆರೆ ತಾಲ್ಲೂಕು ಪಾಕ ತಜ್ಞರ ಸಂಘದ ಅಧ್ಯಕ್ಷ ರಾಘವೇಂದ್ರ (ರಾಘು) ಮತ್ತು ಪದಾಧಿಕಾರಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಕಾರ್ಯಕ್ರಮಕ್ಕೆ ಮುನ್ನ ಜಿಲ್ಲಾ ಪಾಕ ತಜ್ಞರ ಕ್ಷೇಮಾಭಿವೃದ್ಧಿ ಸಂಘದ ಸರ್ವ ಸದಸ್ಯರ ಸಭೆ ಸಂಘದ ಅಧ್ಯಕ್ಷ ಪಿ ಎಸ್ ವೆಂಕಟೇಶ್ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ನೂರಾರು ವಿಪ್ರಪಾಕ ತಜ್ಞರು ಹಾಗೂ ಸಮಾಜ ಬಾಂಧವರು, ಮುಖಂಡರು ಭಾಗವಹಿಸಿದ್ದರು.