ತಾಲೂಕು ವೈದ್ಯಾಧಿಕಾರಿಯಾಗಿದ್ದ ಡಾ:ತಿಮ್ಮರಾಜು ಅವರಿಗೆ ಸನ್ಮಾನ
ಅರಸೀಕೆರೆ:ಸುಧೀರ್ಘ ಮೂರು ವರ್ಷಗಳ ಕಾಲ ಅರಸೀಕೆರೆ ತಾಲ್ಲೂಕು ವೈದ್ಯಾಧಿಕಾರಿಯಾಗಿ ಸೇವೆ ಸಲ್ಲಿಸಿ ತುಮಕೂರು ಜಿಲ್ಲೆ ತಿಪಟೂರು ಆಸ್ಪತ್ರೆಗೆ ವರ್ಗಾವಣೆಯಾದ ಡಾ: ತಿಮ್ಮರಾಜು.
ಬಹಳ ಅಚ್ಚುಮೆಚ್ಚಿನ ಅಧಿಕಾರಿಯಾಗಿ ಆಸ್ಪತ್ರೆಯ ಸಿಬ್ಬಂದಿಗಳ ಜೊತೆ, ಸಾರ್ವಜನಿಕರ ಜೊತೆ ಉತ್ತಮ ಒಡನಾಟ ಇಟ್ಟುಕೊಂಡು “ಕಡಿಮೆ ಮಾತು- ಹೆಚ್ಚು ಕೆಲಸ” ಎಂಬ ಮಾತಿನಂತೆ ವರ್ತಿಸುತ್ತಿದ್ದ ಡಾ:ತಿಮ್ಮರಾಜು ಅವರು ಇಂದು ಅರಸೀಕೆರೆ ತಾಲ್ಲೂಕು ಜೆ ಸಿ ಆಸ್ಪತ್ರೆಗೆ ನೂತನ ಬಂದಿರುವ ತಾಲೂಕು ವೈದ್ಯಾಧಿಕಾರಿ ಡಾ: ರಂಗನಾಥ್ ಅವರಿಗೆ ಇಂದು ಅಧಿಕಾರ ಹಸ್ತಾಂತರಿಸಿದರು.
ಅರಸೀಕೆರೆ ತಾಲ್ಲೂಕು ವೈದ್ಯಾಧಿಕಾರಿಗಳ ಕಚೇರಿ ಸಿಬ್ಬಂದಿಗಳು ಡಾ: ತಿಮ್ಮರಾಜು ಅವರಿಗೆ ಸನ್ಮಾನಿಸಿದರು. ನೂತನವಾಗಿ ಆಗಮಿಸಿರುವ ಡಾ:ರಂಗನಾಥ್ ಅವರಿಗೆ ಸಿಬ್ಬಂದಿಗಳು ಸ್ವಾಗತಿಸಿದರು.
ಈ ಸಂದರ್ಭದಲ್ಲಿ ತಾಲೂಕು ವೈದ್ಯಾಧಿಕಾರಿಗಳ ಕಚೇರಿ ಸಿಬ್ಬಂದಿಗಳು, ನೌಕರರು ಉಪಸ್ಥಿತರಿದ್ದರು.