ವಿಶ್ವ ಪರಿಸರ ಮತ್ತು ವಿಶ್ವ ಯೋಗ ದಿನದ ಅಂಗವಾಗಿ ಬೋಗ ರೋಗ ಯೋಗ ಕಾರ್ಯಕ್ರಮ

ಅರಸೀಕೆರೆ: ಸರ್ಕಾರಿ ಪದವಿ ಪೂರ್ವ ಕಾಲೇಜು ದೊಡ್ಡಮೇಟಿ ಕುರ್ಕೆ ಯಲ್ಲಿ ವಿಶ್ವಪರಿಸರದಿನ ಮತ್ತು ವಿಶ್ವ ಯೋಗದಿನದ ಅಂಗವಾಗಿ ಭೋಗ, ರೋಗ, ಯೋಗ. ವಿಷಯ ಕುರಿತು ವಿನೂತನ ಕಾರ್ಯಕ್ರಮವನ್ನು ರೂಪಿಸಲಾಗಿತ್ತು. ಕಾರ್ಯ ಕ್ರಮದಲ್ಲಿ ನಡೆದ ಭೋಗ ವಿಚಾರವನ್ನು ಕುರಿತು ಕಾಲೇಜಿನ ಇತಿಹಾಸ ಉಪನ್ಯಾಸಕ ರಾದ ಶಿವಮೂರ್ತಿ ರವರು ಮಕ್ಕಳು ಜಂಕ್ ಫುಡ್ ದಾಸರಾಗಿ ಅದರ ರುಚಿಗೆ ಜೋತು ಬಿದ್ದು ತಮ್ಮ ಆರೋಗ್ಯ ಕೆಡಿಸಿಕೊಳ್ಳುತ್ತಿದ್ದಾರೆ, ಅವರಲ್ಲಿ ಅಪೌಷ್ಟಿಕತೆ ಹೆಚ್ಚಾಗಿ ಕಂಡು ಬರುತ್ತಿದ್ದು ತರಗತಿಗಳಲ್ಲಿ ಮಂಕಾಗಿ ಕುಳಿತಿರುವುದರಿಂದ ಅವರಲ್ಲಿ ಲವಲವಿಕೆ ಕಂಡುಬರುತ್ತಿಲ್ಲ ಎಂದು ಅಭಿಪ್ರಾಯಪಟ್ಟರು.
ಆರೋಗ್ಯ ಇಲಾಖೆಯ ಯೋಗೀಶ್ ಮಕ್ಕಳಲ್ಲಿನ ಸಾಂಕ್ರಾಮಿಕ ರೋಗಗಳನ್ನು ಕುರಿತು ಮಾತನಾಡುತ್ತ ಹದಿಹರೆಯವನ್ನು ಕುರಿತು ಹಾಸ್ಯ ಮಯವಾಗಿ ರಂಜಿಸುವುದರೊಂದಿಗೆ ಪ್ರಸ್ತುತ ಸಮಸ್ಯೆ ಗಳನ್ನು ಕುರಿತು ಸಂವಾದ ನಡೆಸಿದರು.
ಕೆನರಾ ಬ್ಯಾಂಕ್ ನ ವ್ಯವಸ್ಥಾಪಕರಾದ ರಾಜೇಂದ್ರ ಮತ್ತು ಕೋಮಲ ರಾಜೇಂದ್ರ ರವರು ಮೊಬೈಲ್ ನ ಅಧ್ವಾನದಿಂದ ಮಕ್ಕಳ ಮಾನಸಿಕ ಆರೋಗ್ಯ ಕೆಡುತ್ತಿದೆ ಎಂದು ತಿಳಿಸುತ್ತಾ ಮೊಬೈಲ್ ಬಿಸಾಕಿ ಪುಸ್ತಕ ಹಿಡಿಯಿರಿ ಎಂದು ಕರೆಕೊಟ್ಟರು.
ರಾಜೇಂದ್ರರವರು ಧ್ಯಾನದ ಮಹತ್ವ ಕುರಿತು ಮಾತನಾಡುತ್ತಾ ವಿದ್ಯಾರ್ಥಿಗಳ ಯಶಸ್ಸಿನಲ್ಲಿ ಧ್ಯಾನದ ಮಹತ್ವ ಕುರಿತು ತಿಳಿಸಿದರು ಮತ್ತು ಧ್ಯಾನ ದ ವಿವಿಧ ಹಂತಗಳನ್ನು ವಿದ್ಯಾರ್ಥಿಗಳಿಂದ ಮಾಡಿಸುವುದರ ಮೂಲಕ ಮಕ್ಕಳಲ್ಲಿ ಒಂದು ಮಿಂಚಿನ ಸಂಚಲನ ಉಂಟಾಗುವಂತೆ ಮಾಡಿದರು.
ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದ ಯೋಗ ಪಟು ಮತ್ತು ರಾಂಪುರ ಗ್ರಾಮಪಂಚಾಯಿತಿ ಅಭಿವೃದ್ಧಿ ಅಧಿಕಾರಿ ವೇದಾವತಿ ವಿದ್ಯಾರ್ಥಿಗಳಿಗೆ ಯೋಗದ ಪ್ರಾತ್ಯಕ್ಷಿಕೆ ನೀಡಿ ರೋಗದಿಂದ ಮುಕ್ತರಾಗಲು ಇರುವ ಏಕೈಕ ಮಾರ್ಗ ವೆಂದರೆ ಯೋಗ ಎಂದು ದೃಷ್ಟಾಂತಗಳನ್ನು ನೀಡಿ ಬದುಕಿನಲ್ಲಿ ಅಳವಡಿಸಿಕೊಳ್ಳುವಂತೆ ತಿಳಿಸಿದರು. ಪ್ರತಿದಿನ ನಡೆಯುತ್ತಿದ್ದ ಮಧ್ಯಾಹ್ನದ ಗೋಷ್ಠಿ ಗಳು ಮಕ್ಕಳಲ್ಲಿ ವ್ಯಾಸಂಗ ಮಾಡಲು ಆತ್ಮವಿಶ್ವಾಸ ಹೆಚ್ಚಿಸುವಲ್ಲಿ ಸಂಪೂರ್ಣ ಸಹಕಾರಿ ಯಾಗಿವೆ ಎಂದು ವಿದ್ಯಾರ್ಥಿಗಳಾದ ಸಿಚನಾ,ಪ್ರೇಮ,ಮತ್ತು ತೇಜಸ್ ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಾಂಶುಪಾಲ ರಾದ ಪ್ರೇಮಕುಮಾರಿ ವಹಿಸಿದ್ದರು.
ಸಮಾರಂಭದಲ್ಲಿ ಪತ್ರಕರ್ತ ಪುಟ್ಟಪ್ಪ,ಚನ್ನಬಸಪ್ಪ,ಸುರೇಶ್,ನಂಜುಂಡ ಶೆಟ್ಟರು ಮತ್ತು ಗ್ರಾಮಪಂಚಾಯಿತಿ ಸದಸ್ಯರು ಭಾಗವಹಿಸಿದ್ದರು.
ವಲಯ ಅರಣ್ಯ ಅಧಿಕಾರಿ ಕೃಷ್ಣೇಗೌಡ ಸಸಿನೆಡುವುದರಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು . ವಿದ್ಯಾರ್ಥಿಗಳು ನಲವತ್ತು ಸಸಿಗಳನ್ನು ಕಾಲೇಜಿನ ಆವರಣದಲ್ಲಿ ನೆಡುವುದರ ಮೂಲಕ ಶ್ರಮದಾನ ಮಾಡಿದರು ಮತ್ತು ಸಸಿಗಳನ್ನು ದತ್ತು ಪಡೆದುಕೊಂಡು ಪೋಷಿಸುವುದಾಗಿ ಪ್ರತಿಜ್ಞೆ ಮಾಡಿದರು.ಕಾರ್ಯಕ್ರಮದ ನಿರೂಪಣೆಯನ್ನು ಡಾ.ಕೆ.ಎಸ್.ಹರಶಿವಮೂರ್ತಿ ನಡೆಸಿಕೊಟ್ಟರು.

Leave a Reply

Your email address will not be published. Required fields are marked *

error: Content is protected !!