ಅರಸಿಕೆರೆಯಲ್ಲಿ ಅಲಂಕೃತ ಮೇಳ ಯಶಸ್ವಿ- ರಂಜಿತ
ಅರಸೀಕೆರೆ : ಇನ್ನರ್ ವೀಲ್ ಕ್ಲಬ್ ವತಿಯಿಂದ ಅಲಂಕೃತ ಮೇಳವನ್ನು ಎಲ್ಲರ ಸಹಕಾರದ ಯಶಸ್ವಿಯಾಗಿ ನಡೆಸಲಾಯಿತು ಎಂದು ಅರಸೀಕೆರೆ ಇನ್ನರ್ ವೀಲ್ ಕ್ಲಬ್ ನ ಅಧ್ಯಕ್ಷೆ ರಂಜಿತ ಹೇಳಿದರು.
ನಗರದ ಹಾರನಹಳ್ಳಿ ರಾಮಸ್ವಾಮಿ ಸಮುದಾಯ ಭವನದಲ್ಲಿ ಆಯೋಜನೆಗೊಳಿಸಿದ್ದ ಒಂದು ದಿನದ ಅಲಂಕೃತ ಮೇಳ ಕುರಿತು ಪ್ರಾಸ್ತಾವಿಕ ನುಡಿಯಲ್ಲಿ ಮೈಸೂರ್ ಇನ್ನರ್ವೇಲ್ ಕ್ಲಬ್ ಸಹಯೋಗದಲ್ಲಿ ಹಮ್ಮಿಕೊಂಡಿದ್ದ, ಮೈಸೂರು ಶಿವಮೊಗ್ಗ ಮತ್ತು ಹಾಸನಗಳಿಂದಲೂ ಪಾಲ್ಗೊಂಡಿದ್ದಾರೆ. ಸ್ಟಾಲ್ ಗಳನ್ನು ಹಾಕಿದ್ದು ಎಲ್ಲರಿಂದಲೂ ಒಳ್ಳೆಯ ಸ್ಪಂದನೆ ಸಿಕ್ಕಿದೆ ಎಂದರು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಪೋದಾರ್ ಇಂಟರ್ನ್ಯಾಷನಲ್ ಶಾಲೆಯ ಪ್ರಾಂಶುಪಾಲ ಸರೋಜಿನಿ ಇಂತಹ ಮೇಳಗಳು ಮಹಿಳೆಯರ ಆತ್ಮ ಬಲವನ್ನು ಹೆಚ್ಚಿಸುತ್ತದೆ. ಕೇವಲ ಆರ್ಥಿಕ ದೃಷ್ಟಿಯೊಂದಿಗೆ ಅಲ್ಲ ಇದರ ಮೂಲಕ ಸಾಮಾಜಿಕ ಸೇವೆ ಜೊತೆಗೆ ನೀವು ತೊಡಗಿ ಕೊಳ್ಳುತ್ತಿದ್ದೀರಿ, ನಿಮ್ಮ ಪರಿಕಲ್ಪನೆ ನಿಜಕ್ಕೂ ಅತ್ಯುತ್ತಮ ಸಾಧನೆ ಎಂದರು.
ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ಹಿರಿಯ ಪತ್ರಕರ್ತ ಹೆಚ್ ಡಿ ಸೀತಾರಾಂ ಮಾತನಾಡಿ ಮಹಿಳೆಯರು ಸ್ವಾವಲಂಬಿಗಳಾಗಿ ಸಮಾಜದಲ್ಲಿ ಸಾಮಾಜಿಕ ಸೇವೆಗಳಲ್ಲಿ ನೀವು ತೊಡಗಿಕೊಳ್ಳಲು ಇಂತಹ ಮೇಳಗಳು ಸ್ಪೂರ್ತಿ ನೀಡುತ್ತವೆ.ವಿವಿದೆಡೆಯಿಂದ ಬಂದು ಇಲ್ಲಿ ಪಾಲ್ಗೊಂಡಿರುವುದು ಮತ್ತು ನಿಮ್ಮ ಆರ್ಥಿಕ ಲಾಭಾಂಶದಲ್ಲಿ ಸಾಮಾಜಿಕ ಕಾರ್ಯಗಳಿಗೆ ಬಳಕೆ ಮಾಡುವಂತಹ ನಿಮ್ಮ ಹೃದಯ ಶ್ರೀಮಂತಿಕೆ ಶ್ಲಾಘನೀಯ , ಉದ್ಯೋಗ ಮಾಡಲು ಇಂದು ಶ್ರೀ ಕ್ಷೇತ್ರ ಧರ್ಮಸ್ಥಳವು ಸೇರಿದಂತೆ ಅನೇಕ ಸಂಸ್ಥೆಗಳು ಆರ್ಥಿಕ ನೆರವು ನೀಡಲು ಮುಂದೆ ಬರುತ್ತಿರುವುದನ್ನು ಅವರು ಸ್ಮರಿಸಿದರು.
ಅರಸೀಕೆರೆ ಇನ್ನರ್ ವೀಲ್ ಕ್ಲಬ್ ಐ .ಎಸ್. ಒ. ಶ್ವೇತಾಮೋಹನ್ ಮಾತನಾಡಿ ಈ ಮೇಳದ ಸಂಘಟನೆಗಾಗಿ ಎಲ್ಲರೂ ಸಹಕರಿಸಿದ್ದಾರೆ. ಆದಷ್ಟು ವ್ಯವಸ್ಥಿತವಾಗಿ ರೂಪಿಸಿದ್ದೇವೆ. ಈ ಮೇಳದಲ್ಲಿ ಸ್ಟಾಲ್ ಹಾಕಲು ಆಗಮಿಸಿರುವ ನಮ್ಮ ಎಲ್ಲಾ ಸಹೋದರಿಯರನ್ನು ಅಭಿನಂದಿಸುತ್ತೇನೆ ಎಂದರು.
ಸಂಘಟನಾ ಕಾರ್ಯದರ್ಶಿ ರೇಷ್ಮಾ, ಖಜಾಂಚಿ ಲಕ್ಷ್ಮಿ ಪ್ರಶಾಂತ್, ಎಡಿಟರ್ ಶ್ವೇತಾ ಅನಿಲ್, ಹೇಮಾ ನಾಗರಾಜ್ ಉಪಸ್ಥಿತರಿದ್ದರು.