ಅರಸೀಕೆರೆ: ಬಾಣಾವರ ಯೋಜನೆ ಕಚೇರಿ ವ್ಯಾಪ್ತಿಯ ಬೆಂಡೆಕೆರೆ ವಲಯದ ಚಿಕ್ಕಮ್ಮನಹಳ್ಳಿ ಗ್ರಾಮದ ಶ್ರೀ ಆಂಜನೇಯ ಸ್ವಾಮಿ ದೇವಾಲಯಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳ ದಿಂದ ಪೂಜ್ಯರು ಮಂಜೂರು ಮಾಡಿರುವ ಒಂದು ಲಕ್ಷ ರೂ ಅನುದಾನ ಮೊತ್ತದ ಡಿ.ಡಿ ಯನ್ನು ಯೋಜನಾಧಿಕಾರಿಗಳಾದ ಸೋಮನಾಥ್ ಅವರು ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನದ ಸೇವಾ ಸಮಿತಿಗೆ ಗ್ರಾಮಸ್ಥರ ಸಮ್ಮುಖದಲ್ಲಿ ವಿತರಣೆ ಮಾಡಿದರು. ಈ ಸಂದರ್ಭದಲ್ಲಿ ದೇವಸ್ಥಾನದ ಸಮಿತಿಯ ಅಧ್ಯಕ್ಷ ಕುಮಾರಸ್ವಾಮಿ, ಉಪಾಧ್ಯಕ್ಷ ಪಾಲಕ್ಷ ಮೂರ್ತಿ, ಕಾರ್ಯದರ್ಶಿ ಚನ್ನಬಸಪ್ಪ, ಖಜಾಂಚಿ ಕಲ್ಲೇಶ್ ಮತ್ತು ಸಮಿತಿಯ ಸರ್ವ ಸದಸ್ಯರು, ಒಕ್ಕೂಟದ ಅಧ್ಯಕ್ಷರಾದ ಲಲಿತಮ್ಮ, ವಲಯದ ಮೇಲ್ವಿಚಾರಕರು ,ಸೇವಾ ಪ್ರತಿನಿಧಿಗಳು, ಊರಿನ ಗಣ್ಯರು ಸದಸ್ಯರು ಉಪಸ್ಥಿತರಿದ್ದರು.