ಅರಸೀಕೆರೆ: ಹಾಸನ ಜಿಲ್ಲಾ ಕರ್ನಾಟಕ ಬಂಜಾರ ಜಾಗೃತಿ ದಳ ಹಾಗೂ ಅರಸೀಕೆರೆ ತಾಲೂಕು ಕರ್ನಾಟಕ ಬಂಜಾರ ಜಾಗೃತಿ ದಳ ಇವರ ವತಿಯಿಂದ ಅರಸೀಕೆರೆ ತಾಲೂಕು ಪೊಲೀಸ್ ಉಪ ವಿಭಾಗದ ನೂತನ ಡಿ ವೈ ಎಸ್ ಪಿ ಯಾಗಿ ಬಂದಿರುವ ಗೋಪಿನಾಯ್ಕ ಇವರಿಗೆ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಕರ್ನಾಟಕ ಬಂಜಾರ ಜಾಗೃತಿ ದಳ (ರಿ )ದ ಜಿಲ್ಲಾ ಅಧ್ಯಕ್ಷರಾದ ಓಂಕಾರ್ ನಾಯ್ಕ ಹಾಗೂ ತಾಲ್ಲೂಕು ಅಧ್ಯಕ್ಷರಾದ ಸಾಕಿ ಮಂಜುನಾಥ್, ಪ್ರದಾನ ಕಾರ್ಯದರ್ಶಿ ಮಾಳಾನಾಯ್ಕ, ಯುವ ಘಟಕದ ಅಧ್ಯಕ್ಷರಾದ ಪೃಥ್ವಿ ಮತ್ತು ರಮೇಶ್ ನಾಯ್ಕ ಉಪಸ್ಥಿತರಿದ್ದರು.