ಅರಸೀಕೆರೆ:
ಕೇಂದ್ರ ಸರ್ಕಾರದ ಮಹತ್ವಕಾಂಕ್ಷಿ ಯೋಜನೆ ಅಮೃತ ಮಿತ್ರ 2.0 ಯೋಜನೆಯಡಿ ಜಾರಿಗೆ ತಂದಿರುವ ಅರಸೀಕೆರೆ ನಗರಸಭಾ ವ್ಯಾಪ್ತಿಯಲ್ಲಿನ ಮಹಿಳೆಯರಿಗಾಗಿ ಮರಗಳು ಎಂಬ ವಿಶೇಷ ಕಾರ್ಯಕ್ರಮ ವನ್ನು ಇಂದು ವಿಶ್ವ ಪರಿಸರ ದಿನ ದಿನಾಚರಣೆ ಪ್ರಯುಕ್ತ ಅರಸೀಕೆರೆಯ ಜೇನುಕಲ್ ನಗರದ ನೀರು ಶುದ್ಧೀಕರಣ ಘಟಕದ ಆವರಣದಲ್ಲಿ ನಗರಸಭೆ ಅಧ್ಯಕ್ಷರಾದ ಎಂ ಸಮೀವುಲ್ಲಾ ಸಸಿಗಳನ್ನು ನೆಡುವ ಮೂಲಕ ಪರಿಸರ ದಿನಾಚರಣೆ ಆಚರಿಸಲಾಯಿತು.
ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಎಂ ಸಮೀವುಲ್ಲಾ ರವರು ಸ್ವಸಹಾಯ ಗುಂಪುಗಳ ಮಹಿಳಾ ಸದಸ್ಯರು ನಗರ ಸಭೆಯ ಸಹಯೋಗದೊಂದಿಗೆ ಕೈಜೋಡಿಸಿ ಉತ್ತಮ ರೀತಿಯಲ್ಲಿ ಸಸಿಗಳನ್ನು ಪೋಷಣೆ ಮಾಡಿ ಉತ್ತಮ ಪರಿಸರ ನಿರ್ಮಾಣ ಮಾಡುವಲ್ಲಿ ಸಹಕಾರಿಯಾಗಬೇಕೆಂದರು. ಸಮಾರಂಭದಲ್ಲಿ ಪೌರಾಯುಕ್ತರಾದ ಎಚ್ ಟಿ ಕೃಷ್ಣಮೂರ್ತಿ, ಸಹಾಯಕ ಕಾರ್ಯಪಾಲಕ ಅಭಿಯಂತರ, ಪರಿಸರ ಮತ್ತು ಕಂದಾಯ ಸಹಾಯಕ ಅಭಿಯಂತರರು ಹಾಗೂ ಸಮುದಾಯ ಸಂಘಟನಾಧಿಕಾರಿಗಳಾದ ರಾಜಶೇಖರ್ ಉಪಸ್ಥಿತರಿದ್ದರು.