ತಾಲೂಕಿನಲ್ಲಿ ದೇವಾಲಯಗಳ ಬೀಗ ಒಡೆದು ಸರಣಿ ಕಳ್ಳತನ
ಅರಸೀಕೆರೆ: ದೇವಾಲಯಗಳ ಸರಣಿ ಕಳ್ಳತನ ತಾಲೂಕಿನಲ್ಲಿ ಮುಂದುವರೆದದ್ದು, ಗುರುವಾರ ರಾತ್ರಿ ಕಣಕಟ್ಟೆ ಹೋಬಳಿ ಬೊಮ್ಮಸಮುದ್ರ ಗ್ರಾಮದ ಹೊರವಲಯದಲ್ಲಿರುವ ಬೊಮ್ಮಲಿಂಗೇಶ್ವರ ಸ್ವಾಮಿ ದೇವಾಲಯದ ಬೀಗ ಒಡೆದು ಕಳ್ಳರು ಕನ್ನ ಹಾಕಿರುವ ಘಟನೆ ನಡೆದಿದೆ.
ಗ್ರಾಮದ ಹೊರವಲಯದ ಕೆರೆ ಏರಿ ಮೇಲೆ ಇರುವ ಬೊಮ್ಮಲಿಂಗೇಶ್ವರ ಸ್ವಾಮಿ ದೇವಾಲಯವಿದ್ದು ಎಂದಿನಂತೆ ಸಂಜೆ ಅರ್ಚಕರು ಪೂಜೆ ಮುಗಿಸಿಕೊಂಡು ಮನೆಗೆ ಹೋಗಿದ್ದರು. ಆದರೆ ಮುಂಜಾನೆ ಪೂಜೆಗೆ ಬಂದಾಗ ದೇವಾಲಯದ ಬೀಗ ಒಡೆದು ಒಳಗೆ ನುಗ್ಗಿದ ಖದೀಮ ಕ್ಕಳ್ಳರು ಆವರಣದಲ್ಲಿ ಇದ್ದ ಹುಂಡಿ ಬೀಗ ಒಡೆದು ಅದರಲ್ಲಿದ್ದ ಹಣ ದೋಚಿ ನಂತರ ಗರ್ಭಗುಡಿಯಲ್ಲಿದ್ದ ಬೊಮ್ಮಲಿಂಗೇಶ್ವರ ಸ್ವಾಮಿಗೆ ಧರಿಸಿದ್ದ ಲಕ್ಷಾಂತರ ರೂಪಾಯಿ ಬೆಲೆಬಾಳುವ ಬೆಳ್ಳಿ ಆಭರಣಗಳನ್ನು ದೋಚಿದ ಕಳ್ಳರು ನಮ್ಮ ಕೈಚಳಕ ತೋರಿ ಪರಾರಿಯಾಗಿದ್ದಾರೆ.
ಈ ಸಂಬಂಧ ಬಾಣಾವರ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ ಎಂದು ದೇವಾಲಯ ಅಭಿವೃದ್ಧಿ ಸಮಿತಿ ತಿಳಿಸಿದೆ.
