ಅರಸೀಕೆರೆ:ಬೆಂಡೇಕೆರೆ ಗ್ರಾಮ ಪಂಚಾಯತಿ ವತಿಯಿಂದ ಚಿಕ್ಕೂರು ಗ್ರಾಮದಲ್ಲಿ ನಿರ್ಮಿಸಲಾಗಿದ್ದ ಸಂಜೀವಿನಿ ನೂತನ ಕಟ್ಟಡ ಉದ್ಘಾಟನೆಯನ್ನು ಕರ್ನಾಟಕ ರಾಜ್ಯ ಗೃಹ ಮಂಡಳಿ ಅಧ್ಯಕ್ಷರು ಹಾಗೂ ಅರಸೀಕೆರೆ ವಿಧಾನಸಭಾ ಕ್ಷೇತ್ರದ ಶಾಸಕರಾದ ಕೆ ಎಂ ಶಿವಲಿಂಗೇಗೌಡ
ನೆರವೇರಿಸಿದರು.
ಈ ಸಂಧರ್ಭದಲ್ಲಿ ಗ್ರಾಮ ಪಂಚಾಯತಿ ಅಧ್ಯಕ್ಷರಾದ ವಸಂತಕುಮಾರಿ ಗುರುಮೂರ್ತಿ, ಉಪಾಧ್ಯಕ್ಷರಾದ ಮೂರ್ತಿಭೋವಿ, ಸದಸ್ಯರುಗಳಾದ ಗಂಗಾಧರ್, ಎಲ್ ಎಸ್ ಚಂದ್ರೇಗೌಡ, ಭಾವನಾ ಗುರುಮೂರ್ತಿ, ಪ್ರೇಮಬಾಯಿ ಮಂಜನಾಯ್ಕ್, ಕುಬೇರಪ್ಪ, ನಟರಾಜ್, ಜಗದೀಶ್, ಸಿದ್ದಮಲ್ಲಮ್ಮ, ಲಲಿತಮ್ಮ ಜಗದೀಶ್, ಹಾಗೂ ಚಿಕ್ಕೂರು ಗ್ರಾಮದ ಮುಖಂಡರುಗಳು, ಗ್ರಾಮಸ್ಥರು ಹಾಜರಿದ್ದರು.