ಅದ್ದೂರಿ ಶ್ರೀ ಕೃಷ್ಣ ಜನ್ಮಾಷ್ಟಮಿ ಕಾರ್ಯಕ್ರಮ
ಅರಸೀಕೆರೆ: ಶ್ರೀ ಕನ್ನಿಕಾ ಪರಮೇಶ್ವರಿ ದೇವಸ್ಥಾನದಲ್ಲಿ ಅದ್ದೂರಿ ಶ್ರೀಕೃಷ್ಣ ಜನ್ಮಾಷ್ಟಮಿ ಕಾರ್ಯಕ್ರಮ ನಡೆಯಿತು.
ಶ್ರೀ ಕೃಷ್ಣ ಜನ್ಮಾಷ್ಟಮಿ ದಿನದಂದು ಶ್ರೀ ಕನ್ನಿಕಾ ಪರಮೇಶ್ವರಿ ದೇವರಿಗೆ ಅಭಿಷೇಕ, ಕುಂಕುಮಾರ್ಚನೆ ಹಾಗೂ ಶ್ರೀಕೃಷ್ಣನ ವಿಶೇಷ ಅಲಂಕಾರ ಮಾಡಲಾಗಿತ್ತು. ಸರತಿ ಸಾಲಿನಲ್ಲಿ ನಿಂತು ಭಕ್ತರು ದೇವರ ಪೂಜೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ವಾಸವಿ ಮಹಿಳಾ ಸಮಾಜ ವತಿಯಿಂದ 165 ವಿವಿಧ ಖಾದ್ಯಗಳ ಸಿಹಿ ತಿಂಡಿ ತಿನಿಸುಗಳು ಹಣ್ಣು ಹಂಪಲುಗಳನ್ನು ಶ್ರೀಕೃಷ್ಣನಿಗೆ ನೈವೇದ್ಯ ಅರ್ಪಿಸಲಾಯಿತು. ವಾಸವಿ ಮಹಿಳಾ ಮಂಡಳಿ ವತಿಯಿಂದ ಅಲಂಕಾರಿಕ ಮಡಕೆಗಳ ಸ್ಪರ್ಧೆ ಏರ್ಪಡಿಸಿ ಬಹುಮಾನ ವಿತರಿಸಲಾಯಿತು. ಶ್ರೀಕೃಷ್ಣ ಜನ್ಮಾಷ್ಟಮಿ ದಿನ ಶ್ರೀ ಕೃಷ್ಣನ ನೆನೆದು ಗೋವಿಂದನ ನಾಮಸ್ಪರಣೆ ಮಾಡುತ್ತಾ ಭಜನೆ, ಮಂತ್ರಘೋಷ ಗಳೊಂದಿಗೆ ಆಗಮಿಕರಾದ ಸುಪ್ರೀತ್ ಮತ್ತು ತಂಡ ಇವರಿಂದ ವಿಶೇಷ ಪೂಜಾ ಕೈಂಕರ್ಯಗಳು ನಡೆದವು.
ಈ ಸಂದರ್ಭದಲ್ಲಿ ಕೆ ಪಿ ಎಸ್ ವಿಶ್ವನಾಥ್ ದಂಪತಿಗಳು, ನಾಗೇಂದ್ರ, ಗಿರೀಶ್, ವೆಂಕಟೇಶ್, ಸುನಿಲ್, ಶ್ರೀಧರ್ಮೂರ್ತಿ, ಪ್ರಸನ್ನಕುಮಾರ ,ನಾರಾಯಣ ಇತರರು ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ ಸಮಾಜದ ಮುಖಂಡರುಗಳು ಹಾಗೂ ವಾಸವಿ ಮಹಿಳಾ ಸಂಘದ ಅಧ್ಯಕ್ಷೆ ಸುಷ್ಮಾ ವೆಂಕಟೇಶ್, ಉಪಾಧ್ಯಕ್ಷೆ ಸಂಧ್ಯಾ ವಿಶ್ವನಾಥ್, ಕಾರ್ಯದರ್ಶಿ ಜ್ಯೋತಿ ಮಂಜುನಾಥ್, ಖಜಾಂಚಿ ಸುನೀತಾ ಸುನೀಲ್, ಸಹ ಕಾರ್ಯದರ್ಶಿ ಚಂದ್ರೀಕಾ, ಇತರರು ಹಾಜರಿದ್ದರು. ಕಾರ್ಯಕ್ರಮದಲ್ಲಿ ನೂರಾರು ಭಕ್ತಾದಿಗಳು ಭಾಗವಹಿಸಿ ದೇವರ ದರ್ಶನ ಪಡೆದು ಪುನೀತರಾದರು.
ಬಂದಂತ ಭಕ್ತಾದಿಗಳಿಗೆ ಪ್ರಸಾದ ವಿತರಣೆ ಏರ್ಪಡಿಸಲಾಗಿತ್ತು.