ಸರ್ಕಾರದ ಸೂಚನೆಯಂತೆ ಹುಡಾ ಅಧ್ಯಕ್ಷರ ನೇಮಕ
ಅರಸೀಕೆರೆ:ತಾಲೂಕು ಮತ್ತು ಜಿಲ್ಲಾ ಮಟ್ಟದ ಕಾಂಗ್ರೆಸ್ಸಿಗರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್, ಜಮೀರ್ ಅಹಮದ್ ಖಾನ್ ಅವರ ಕಚೇರಿಗೆ ಭೇಟಿ ನೀಡಿದಾಗ ಎಲ್ಲರೂ ನಮಗೆ ಕೆಲಸ ಮಾಡಿಕೊಟ್ಟಿದ್ದಾರೆ ಎಂದು ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿ ಜೆಟಿಎಸ್ ಗೌಸ್ ಖಾನ್ ಹೇಳಿದರು.
ಅವರು ಪತ್ರಕರ್ತರ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಕಳೆದ 30, 40 ವರ್ಷದಿಂದ ಯಾರೂ ಪಕ್ಷದಲ್ಲಿ ಪ್ರಾಮಾಣಿಕವಾಗಿ ದುಡಿದಿದ್ದಾರೆ ಅವರಿಗೆ ಹಾಸನ ಹುಡಾ ಅಧ್ಯಕ್ಷ ಸ್ಥಾನ ನೀಡಲಿ ಎಂದು ತಿಳಿಸಿದರು.
ಕಾಣದ ಕೈಗಳು ನಮ್ಮ ಸಮಾಜ ಹಾಗೂ ಕುರುಬ ಸಮಾಜದ ಮಧ್ಯೆ ವೈಶಮ್ಯ ಮೂಡಿಸಲು ಕುತಂತ್ರ ನಡೆಸಿವೆ ಇದಕ್ಕೆ ಯಾರು ಒಳಗಾಗಬಾರದು ಎಂದು ತಿಳಿಸಿದರು.
ಹಾಸನ ನಗರ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸ್ಥಾನವನ್ನು ಸೈಯದ್ ತಾಜಿಂ ಇವರಿಗೆ ನೀಡಲು ಜಿಲ್ಲೆಯ ಸಾವಿರಾರು ಜನ ಮುಸ್ಲಿಂ ಬಾಂಧವರು ಸೇರಿ ಮೆರವಣಿಗೆಯಲ್ಲಿ ಜಿಲ್ಲಾಧಿಕಾರಿಗಳ ಕಚೇರಿಗೆ ಮನವಿ ಸಲ್ಲಿಸಿದ್ದರು.
ಈ ಕುರಿತು ಮಾತನಾಡಿದ ಅವರು ಹಾಸನ ಹುಡಾ ಅಧ್ಯಕ್ಷ ಸ್ಥಾನಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಇವರ ತೀರ್ಮಾನದಂತೆ ಕುರುಬ ಸಮಾಜದ ಪಟೇಲ್ ಶಿವಪ್ಪನವರನ್ನು ಸೂಚಿಸಲಾಗಿದೆ ಅದರಂತೆ ಎಲ್ಲರೂ ರಾಜ್ಯ ನಾಯಕರ ತೀರ್ಮಾನಕ್ಕೆ ಸಹಕರಿಸಬೇಕು ಎಂದರು.
ಶಾಸಕ ಕೆ ಎಂ ಶಿವಲಿಂಗೇಗೌಡ ಎಲ್ಲಾ ಸಮಾಜದವರ ಅಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ. ಎಸ್ ಸಿ, ಎಸ್ ಟಿ,ಒಬಿಸಿ, ಅಲ್ಪಸಂಖ್ಯಾತರು, ಒಕ್ಕಲಿಗರು, ಲಿಂಗಾಯತರು, ಇನ್ನಿತರ ಸಮುದಾಯದ ಜನರನ್ನು ಗುರುತಿಸಿ ನಿಗಮ ಮಂಡಳಿಗಳಲ್ಲಿ ಸ್ಥಾನಮಾನಗಳನ್ನು ನೀಡಿದ್ದಾರೆ. ಮುಂದೆಯೂ ಕೂಡ ಎಲ್ಲರಿಗೂ ಅವಕಾಶಗಳನ್ನು ಕಲ್ಪಿಸುತ್ತಾರೆ ತಾಳ್ಮೆಯಿಂದ ಪಕ್ಷದ ಕೆಲಸ ನಿರ್ವಹಿಸೋಣ ಎಂದು ಹೇಳಿದರು.
ಈ ಸಂದರ್ಭದಲ್ಲಿ ತಾಲೂಕು ಯುವ ಕಾಂಗ್ರೆಸ್ ಅಧ್ಯಕ್ಷ ಸಮೀರ್, ಮಾಜಿ ನಗರಸಭಾ ಸದಸ್ಯ ಯೂನಸ್, ಕಾಂಗ್ರೆಸ್ ಮುಖಂಡ ಮೆಹಬೂಬ್ ಪಾಷ, ಇನ್ನಿತರರು ಉಪಸ್ಥಿತರಿದ್ದರು.