filter: 0; fileterIntensity: 0.0; filterMask: 0; captureOrientation: 0; algolist: 0; multi-frame: 1; brp_mask:0; brp_del_th:null; brp_del_sen:null; motionR: 0; delta:null; module: video;hw-remosaic: false;touch: (-1.0, -1.0);sceneMode: 0;cct_value: 0;AI_Scene: (-1, -1);aec_lux: 59.0;aec_lux_index: 0;albedo: ;confidence: ;motionLevel: 0;weatherinfo: weather?null, icon:null, weatherInfo:100;temperature: 34;

ಕೆ ಎಸ್ ಆರ್ ಟಿ ಸಿ ನೌಕರರ ಮುಷ್ಕರ ತಾಲೂಕಿನಲ್ಲಿ ಸಂಪೂರ್ಣ ಯಶಸ್ವಿ

ಅರಸೀಕೆರೆ:ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ನೌಕರರು ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ನಡೆಸುತ್ತಿರುವ ಮುಷ್ಕರದಿಂದಾಗಿ ಸಾರ್ವಜನಿಕರಿಗೆ ತೊಂದರೆ ಆಗಬಾರದು ಎಂಬ ದೃಷ್ಟಿಯಿಂದ ಜಿಲ್ಲಾಧಿಕಾರಿಗಳು ಹಾಗೂ ಆರ್‌ಟಿಓ ಅವರ ನಿರ್ದೇಶನದಂತೆ ಖಾಸಗಿ ವಾಹನಗಳಲ್ಲಿ ಪ್ರಯಾಣಿಕರು ಸಂಚಾರ ಮಾಡುತ್ತಿದ್ದಾರೆ.
ನಗರದ ಬಸ್ ಡಿಪೋ ಮೂಲಕ ವಿವಿಧ ಪ್ರದೇಶಗಳಿಗೆ ಸಂಚರಿಸುತ್ತಿದ್ದ 112 ಬಸ್ಸುಗಳನ್ನು ಡಿಪೋದಲ್ಲೇ ನಿಲ್ಲಿಸಲಾಗಿದ್ದು, 322 ಚಾಲಕರು, ನಿರ್ವಾಹಕರು ಸೇವೆಗೆ ಗೈರು ಹಾಜರಾಗಿ ಮುಷ್ಕರಕ್ಕೆ ತಮ್ಮ ಬೆಂಬಲ ಸೂಚಿಸಿದ್ದಾರೆ.
ಅರಸೀಕೆರೆ ಬಸ್ ನಿಲ್ದಾಣದಲ್ಲಿ ಖಾಸಗಿ ವಾಹನಗಳನ್ನು ಹೊರತುಪಡಿಸಿ ಯಾವುದೇ ಕೆಎಸ್ಆರ್ ಟಿ ಸಿ ಬಸ್ಸುಗಳು ಒಳಗಡೆ ಪ್ರವೇಶ ಮಾಡಿದಂತೆ ಖಾಸಗಿ ವಾಹನದ ಮಾಲೀಕರು ತಡೆಯುತ್ತಿದ್ದು, ನಗರದ ಬಸ್ ನಿಲ್ದಾಣದಿಂದ ಬಾಣಾವರ, ಗಂಡಸಿ, ಕಣಕಟ್ಟೆ, ಜಾವಗಲ್, ಇನ್ನಿತರ ಮಾರ್ಗಗಳಿಗೆ ಎಲ್ಲಾ ಪ್ರಯಾಣಿಕರು ಖಾಸಗಿ ವಾಹನಗಳಲ್ಲಿ ಸಂಚಾರ ಮಾಡುತ್ತಿದ್ದಾರೆ.
ಕೆ ಎಸ್ ಆರ್ ಟಿ ಸಿ ನೌಕರರ ಮುಷ್ಕರ ಸಂಪೂರ್ಣ ಯಶಸ್ವಿ.

Leave a Reply

Your email address will not be published. Required fields are marked *

error: Content is protected !!