ಇನ್ನರ್ ವೀಲ್ ಕ್ಲಬ್ ನ ನೂತನ ಪದಾಧಿಕಾರಿಗಳ ಪದಗ್ರಹಣ

ಅರಸೀಕೆರೆ: ಇಲ್ಲಿನ ಇನ್ನರ್ ವಿಲ್ ಕ್ಲಬ್ ಅಧ್ಯಕ್ಷರು ಪದಾಧಿಕಾರಿಗಳು ಸದಸ್ಯರುಗಳು ಬಹಳ ಕ್ರಿಯಾಶೀಲರಾಗಿ ಒಳ್ಳೆಯ ಕಾರ್ಯಕ್ರಮಗಳನ್ನು ಮಾಡುತ್ತಿದ್ದೀರಿ ಎಂದು ಶಿವಮೊಗ್ಗ ದಕ್ಷಿಣ ಇನ್ನರ್ ವೀಲ್ ಕ್ಲಬ್ ಪಿ ಡಿ ಸಿ ಸುಧಾ ಪ್ರಕಾಶ್ ಮೆಚ್ಚುಗೆ ವ್ಯಕ್ತಪಡಿಸಿದರು.
ಅವರು ನಗರದ ಎಸ್ ಹೆಚ್ ಕನ್ವೆನ್ಷನ್ ಹಾಲಿನಲ್ಲಿ ನಡೆದ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದ ಅವರು ಇಲ್ಲಿನ ಕ್ಲಬ್ ನಿಂದ ಕಳೆದ ಸಾಲಿನಲ್ಲಿ ಹಲವು ಕಾರ್ಯಕ್ರಮಗಳನ್ನು ಮಾಡಿದ್ದೀರಿ ನಾನು ಕೆಲವು ಬಾರಿ ಬಂದಿದ್ದೇನೆ. ನಿಕಟಪೂರ್ವ ಅಧ್ಯಕ್ಷರೇ ನೀವು ನೂತನ ಅಧ್ಯಕ್ಷೆ ರಂಜಿತ ಹಾಗೂ ಪದಾಧಿಕಾರಿಗಳಿಗೆ ಸಹಕಾರವನ್ನು ನೀಡಿ ಇನ್ನೂ ಹೆಚ್ಚಿನ ಕಾರ್ಯಕ್ರಮಗಳು ಆಗುವಂತೆ ಮುಂದಾಗಬೇಕೆಂದು ಎಲ್ಲರಿಗೂ ಕರೆ ನೀಡಿದರು.
ನಾನು ಇಲ್ಲಿ ಹೇಳುವುದು ಏನು ಇಲ್ಲ ನನಗನಿಸುತ್ತದೆ ನಾನೇ ಇಲ್ಲಿಂದ ಏನನ್ನಾದರೂ ಕೊಂಡಯ್ಯ ಬೇಕೆನೋ ಎಂದು ಅವರು ಮೆಚ್ಚುಗೆಯನ್ನು ಎಲ್ಲರೊಂದಿಗೆ ಹಂಚಿಕೊಂಡರು.
ನೂತನ ಸದಸ್ಯರುಗಳನ್ನು ಕ್ಲಬ್ ಗೆ ಸ್ವಾಗತಿಸಿದ ಅವರು ಸದಸ್ಯರು ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಅಭಿನಂದಿಸಿದರು.
ನೂತನ ಅಧ್ಯಕ್ಷರಾಗಿ ಪದಗ್ರಹಣ ಸ್ವೀಕರಿಸಿದ ರಂಜಿತ ಎಲ್ಲರ ಸಹಕಾರದೊಂದಿಗೆ ಕೆಲಸ ಮಾಡೋಣ ಉತ್ತಮ ಕಾರ್ಯಕ್ರಮಗಳನ್ನು ಮಾಡೋಕೆ ಚಿಂತನೆ ಹೊಂದಿದ್ದೇನೆ ಇದಕ್ಕೆ ಎಲ್ಲರ ಸಹಕಾರ ಅಗತ್ಯ ಎಂದರು.
ನಿಕಟಪೂರ್ವ ಅಧ್ಯಕ್ಷೆ ರೇಖಾ ತಮ್ಮ ಅವಧಿಯಲ್ಲಿ ಸಹಕಾರ ನೀಡಿದ ಎಲ್ಲರಿಗೂ ಕೃತಜ್ಞತೆ ಹೇಳಿದರು.
ನೂತನ ಅಧ್ಯಕ್ಷರಾಗಿ ರಂಜಿತ, ಕಾರ್ಯದರ್ಶಿ ರೇಷ್ಮಾ ರೈ, ಖಜಾಂಚಿ ಲಕ್ಷ್ಮಿ, ಐ ಎಸ್ ಓ ಶ್ವೇತ ಮೋಹನ್, ಎಡಿಟರ್ ಶ್ವೇತ ಅನಿಲ್ ಪದಗ್ರಹಣ ಸ್ವೀಕರಿಸಿದರು. ನೂತನ ಸದಸ್ಯರುಗಳಾಗಿ ಮಮತಾ, ವೇದ ,ಜಮುನಾ, ಗೀತಾ ಇನ್ನರ್ ವೀಲ್ ಕ್ಲಬ್ ಬಳಗಕ್ಕೆ ಸೇರ್ಪಡೆಯಾದರು. ಅವರನ್ನು ರಂಜಿತ ಹಾಗೂ ಸುಧಾ ಪ್ರಸಾದ್ ಸ್ವಾಗತಿಸಿದರು.

Leave a Reply

Your email address will not be published. Required fields are marked *

error: Content is protected !!