ಅರಸೀಕೆರೆ: ತೋಟಗಾರಿಕೆ ಇಲಾಖೆ ವತಿಯಿಂದ ತಾಲೂಕಿನಲ್ಲಿ ತೋಟಗಾರಿಕೆ ಬೆಳೆ ಬೆಳೆಯುವಂತಹ ರೈತ ಬಾಂಧವರಿಂದ 2025- 26ನೇ ಸಾಲಿನಲ್ಲಿ ಅನುಷ್ಠಾನ ಗೊಳಿಸಲಾಗುತ್ತಿರುವ ವಿವಿಧ ಯೋಜನೆಗಳ ಅಡಿ ಅರ್ಜಿಯನ್ನು ಆಹ್ವಾನಿಸಲಾಗಿದೆ. ಆಸಕ್ತ ರೈತರು ದಿನಾಂಕ 29.05.2025 ರಿಂದ ದಿನಾಂಕ 10.6. 2025 ರೊಳಗಾಗಿ ತೋಟಗಾರಿಕೆ ಕಚೇರಿಯಿಂದ ಅರ್ಜಿಯನ್ನು ಪಡೆದು ಸಲ್ಲಿಸಬಹು.
ಬಾಳೆ, ದಾಳಿಂಬೆ, ಪಪ್ಪಾಯ, ಡ್ರ್ಯಾಗನ್ ಫ್ರೂಟ್ ಹಾಗೂ ಇತರೆ ಬೆಳೆಗಳಿಗೆ ಸಹಾಯಧನ, ಕೃಷಿ ಹೊಂಡ ನಿರ್ಮಾಣ, ಪಾಲಿಮನೆ ನೆರಳು ಪರದೆ ಘಟಕಗಳಿಗೆ, ಪ್ಲಾಸ್ಟಿಕ್ ಹೊದಿಕೆಗಳಿಗೆ, ಪಕ್ಷಿ ನಿರೋಧಕ ಬಲೆ, ಸಮಗ್ರ ಕೀಟ, ಪೋಷಕಾಂಶಗಳ ನಿರ್ವಹಣೆ, ಸೆನ್ಸರ್ ಆಧಾರಿತ ಗೊಬ್ಬರಗಳನ್ನು ನೀಡುವುದು, ತರಕಾರಿ ಬೆಳೆಗಳಲ್ಲಿ ಆಧಾರಗಳ ಬಳಕೆ, ವರ್ಮಿ ಕಾಂಪೋಸ್ಟ್ ಘಟಕ ನಿರ್ಮಾಣ ಸಹಾಯಧನ, ಟ್ರ್ಯಾಕ್ಟರ್ 20 ಪಿಟಿಒ ಎಚ್ ಪಿ ಗಳಿಗಿಂತ ಕಡಿಮೆ, ಫಾರ್ಮ್ ಗೇಟ್ ಪ್ಯಾಕ್ ಹೌಸ್, ಫ್ರೂಟ್ ಬಂಚ್/ ಕವರ್ ಗಳಿಗೆ ಸಹಾಯಧನ, ತೆಂಗು ಶೇಖರಣ ಘಟಕಗಳಿಗೆ ಸಹಾಯಧನ, ತೋಟಗಾರಿಕೆಯಲ್ಲಿ ಯಂತ್ರ ಉಪಕರಣಗಳಿಗೆ ಸಹಾಯಧನ, ತೋಟಗಾರಿಕೆ ಬೆಳೆಗಳಿಗೆ ಹನಿ ನೀರಾವರಿ ಘಟಕ ಅಳವಡಿಸಿದ್ದ ರೈತರಿಗೆ ಸಹಾಯಧನ ನೀಡಲಾಗುವುದು.ಆಸಕ್ತ ರೈತರು ಹೆಚ್ಚಿನ ಮಾಹಿತಿಗಾಗಿ ತಾಲೂಕು ತೋಟಗಾರಿಕಾ ಕಚೇರಿಯನ್ನು ಸಂಪರ್ಕಿಸಬಹುದು ಎಂದು ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರಾದ ಸೀಮಾ ತಿಳಿಸಿದ್ದಾರೆ.
