ಅರಸೀಕೆರೆ: ತಾಲೂಕಿನ ಕಲ್ಲನಾಯಕನಹಳ್ಳಿ ಗ್ರಾಮದ ಶ್ರೀ ತಿರುಮಲ ದೇವರು ದೇವಾಲಯದಲ್ಲಿ ಶ್ರೀವೈಷ್ಣವ ಗೋಷ್ಠಿ ಮತ್ತು ಕಲ್ಲನಾಯಕನಹಳ್ಳಿ ಗ್ರಾಮಸ್ಥರು ಸೇರಿ ಹಮ್ಮಿಕೊಂಡಿದ್ದ ಶ್ರೀದೇವಿ ಭೂದೇವಿ ಸಹಿತ ಶ್ರೀ ಲಕ್ಷ್ಮಿ ಕೇಶವ ತಿರುಮಲ ಸ್ವಾಮಿಯವರ ಕಲ್ಯಾಣೋತ್ಸವ ಅದ್ದೂರಿಯಾಗಿ ನಡೆಯಿತು.
ಈ ಕಲ್ಯಾಣೋತ್ಸವದಲ್ಲಿ ಆಗಮಿಕರಾದ ಹರೀಶ್ ಶರ್ಮ ಮತ್ತು ತಂಡದವರು ಪಾಲ್ಗೊಂಡು ವಿವಿಧ ಹೋಮ, ಹವನ ,ಪೂಜಾ ಕಾರ್ಯಕ್ರಮ ಗಳೊಂದಿಗೆ ಕಲ್ಯಾಣೋತ್ಸವ ಕಾರ್ಯಕ್ರಮ ನಡೆಸಿಕೊಟ್ಟರು. ಅರ್ಚಕರಾದ ಸಂಪತ್ ಕುಮಾರ್ ಉಪಸ್ಥಿತರಿದ್ದರು. ಕಲ್ಯಾಣೋತ್ಸವ ಕಾರ್ಯಕ್ರಮದಲ್ಲಿ ನೂರಾರು ಸಂಖ್ಯೆಯಲ್ಲಿ ಭಕ್ತಾದಿಗಳು ಭಾಗವಹಿಸಿ ದೇವರ ದರ್ಶನ ಪಡೆದು ಸ್ವಾಮಿಯ ಕೃಪೆಗೆ ಪಾತ್ರರಾದರು. ಭಕ್ತಾದಿಗಳಿಗೆ ತೀರ್ಥ ಪ್ರಸಾದ ವಿನಿಯೋಗ ವಿತರಿಸಲಾಯಿತು.