filter: 0; fileterIntensity: 0.0; filterMask: 0; captureOrientation: 0; algolist: 0; multi-frame: 1; brp_mask:0; brp_del_th:null; brp_del_sen:null; motionR: 0; delta:null; module: video;hw-remosaic: false;touch: (-1.0, -1.0);sceneMode: 0;cct_value: 0;AI_Scene: (-1, -1);aec_lux: 253.0;aec_lux_index: 0;albedo: ;confidence: ;motionLevel: 0;weatherinfo: weather?null, icon:null, weatherInfo:100;temperature: 43;

ಶ್ರೀ ಶನೇಶ್ವರ ಸ್ವಾಮಿ ಕ್ಷೇತ್ರದಲ್ಲಿ ನಾಳೆಯಿಂದ ಕೋಟಿ ದತ್ತ ಜಪ ಯಜ್ಞ: ಮುರಳಿ ಮಂದಾರ್ತಿ

ಅರಸೀಕೆರೆ:ನಗರದ ಕಂತೇನಹಳ್ಳಿ ಬಡಾವಣೆಯಲ್ಲಿರುವ ಶ್ರೀ ಶನೈಶ್ವರ ಸ್ವಾಮಿ ಕ್ಷೇತ್ರದಲ್ಲಿ ಲೋಕ ಕಲ್ಯಾಣಾರ್ಥವಾಗಿ ಜು.10 ಗುರುವಾರದಿಂದ ಜು.13 ಭಾನುವಾರದವರೆಗೆ ಕೋಟಿ ದತ್ತ ಜಪ ಯಜ್ಞದ ಧಾರ್ಮಿಕ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ದೇವಸ್ಥಾನದ ಮುಖ್ಯ ಅರ್ಚಕರಾದ ಮುರಳಿ ಮಂದಾರ್ತಿ ತಿಳಿಸಿದರು.
ಶ್ರೀ ಕ್ಷೇತ್ರದಲ್ಲಿ ವರದಿಗಾರರೊಂದಿಗೆ ಮಾತನಾಡಿದ ಅವರು ಅಷಾಡ ಮಾಸವು ಶ್ರೀಗುರು ದತ್ತಾತ್ರೇಯ ಸ್ವಾಮಿಯವರಿಗೆ ಇಷ್ಟವಾದ ಮಾಸವಾಗಿದೆ. ಈ ಮಾಸದಲ್ಲಿ ಭಕ್ತರ ಇಷ್ಟಾರ್ಥಗಳನ್ನು ಈಡೇರಿಸುವ ಕಲ್ಪವೃಕ್ಷವಾಗಿ ಹರಸುತ್ತಾರೆ ಎಂಬು ಸನಾತನ ಧರ್ಮದ ಗ್ರಂಥಗಳಲ್ಲಿ ಉಲ್ಲೇಖವಾಗಿದೆ. ಗುರು ಪೂರ್ಣಿಮೆಯಾದ ಜು.10 ರಂದು ಈ ಯಜ್ಞ ಕಾರ್ಯವು ಪ್ರಾರಂಭವಾಗುತ್ತಿದೆ.
ಮೂರು ದಿನಗಳ ಕಾಲ ಶ್ರೀ ಕ್ಷೇತ್ರದಲ್ಲಿ ನಡೆಯುವ ಯಜ್ಞ ಪ್ರಜ್ವಯಿಸಲು ಬೃಹತ್ ಅಗ್ನಿ ಕುಂಡವನ್ನು ನಿರ್ಮಾಣ ಮಾಡಲಾಗಿದೆ. ತಾಲ್ಲೂಕಿನಲ್ಲಿ ನಡೆಯುತ್ತಿರುವ ಕೋಟಿ ಜಪ ಯಜ್ಞನವು ಪ್ರಥಮವಾಗಿದ್ದು. ಈ ಕಾರ್ಯದಿಂದ ಲೋಕವು ಸುಭೀಕ್ಷವಾಗಿರಲಿ ಮತ್ತು ಭಕ್ತಾಧಿಗಳ ಕಷ್ಟ ನಷ್ಟಗಳು ಅಂತ್ಯವಾಗಲಿ ಎಂದು ಪ್ರಾರ್ಥನೆ ಮಾಡಲಾಗುತ್ತದೆ.
ಈ ಮಹತ್ಕಾರ್ಯದಿಂದ ಎಲ್ಲರ ಆತ್ಮವು ಶುದ್ಧಿಯಾಗಲಿ, ಜೀವನದಲ್ಲಿ ಶಾಂತಿ, ನೆಮ್ಮದಿ, ದೈಹಿಕ ಮತ್ತು ಮಾನಸಿಕ ಶಕ್ತಿಯೊಂದಿಗೆ ವಿಜೃಂಬಿಸಲಿ ಎಂಬುದು ನಮ್ಮ ಕಾರ್ಯಕ್ರಮ ಉದ್ದೇಶ. ಈಗಾಗಲೇ ಭಕ್ತರು ಕೋಟಿ ಸಂಖ್ಯೆಯನ್ನು ಮೀರಿ ದತ್ತಾತ್ರೇಯ ಜಪವನ್ನು‌ ಮಾಡಿದ್ದಾರೆ.
ಈ ಮೂರು ದಿನಗಳ ಕಾಲ ವಿವಿಧ ಆಚಾರ್ಯರು, ಪುರೋಹಿತರು ಯಜ್ಞ ಯಾಗಾದಿಗಳನ್ನು ನಡೆಸಿಕೊಡಲಿದ್ದಾರೆ. ಸ್ಥಳಿಯ ಗ್ರಾಮಸ್ಥರು, ಭಕ್ತರ ವೃಂದ ಈ ಕಾರ್ಯಕ್ರಮ ಆಯೋಜಿಸಿದ್ದು, ಇವರೆಲ್ಲರ ಪ್ರಯತ್ನದಿಂದ ಒಂದೊಳ್ಳೆ ಧಾರ್ಮಿಕ ಕಾರ್ಯಕ್ರಮ ಆಯೋಜಿಸಲಾಗಿದೆ. ಎಲ್ಲ ಭಕ್ತರು ಆಗಮಿಸಿ ಈ ಮಹತ್ಕಾರ್ಯದ ಯಜ್ಞನದಲ್ಲಿ ಭಾಗಿಯಾಗಬೇಕು.
ಅನ್ನ ಬ್ರಹ್ಮಂ ಶ್ರೀ ಮುರಳಿ ಪ್ರತಿಷ್ಠಾನದಿಂದ ಶ್ರೀ ಕ್ಷೇತ್ರದಲ್ಲಿ ಪ್ರತಿ ದಿನ ಅನ್ನ ದಾಸೋಹ ಆಯೋಜಿಸಲಾಗಿದ್ದು, ಪ್ರತಿ ಅಮವಾಸ್ಯೆಯಂದು ಶ್ರೀ ಶನೈಶ್ವರ ಸ್ವಾಮಿಗೆ ವಿಶೇಷ ಅಲಂಕಾರಗಳು ಮತ್ತು ಲೋಕ ಕಲ್ಯಾಣಾರ್ಥವಾಗಿ ವಿಶೇಷ ಪೂಜಾ ಕೈಂಕರ್ಯಗಳೊಂದಿಗೆ ಹೋಮಹವನಾದಿಗಳು ನೆರವೇರಲಿದೆ.ಈ ಎಲ್ಲ ಕಾರ್ಯಕ್ರಮಗಳಿಗೆ ಭಕ್ತಾಧಿಗಳು ಆಗಮಿಸಿ ಎಲ್ಲ ರೀತಿಯ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.
ದೇವಾಲಯ ಆಡಳಿತಾಧಿಕಾರಿ ಈಶ್ವರ್ ಮಾತನಾಡಿ ಜು.12 ರಂದು 10 ಗಂಟೆಗೆ ನಗರದ ಪ್ರವಾಸಿ ಮಂದಿರದಿಂದ ಕಂತೇನಹಳ್ಳಿ ದೇವಾಲಯ ವರೆಗೆ ಗುರುಗಳ ಮೆರವಣಿಗೆ ಆಯೋಜಿಸಲಾಗಿದೆ. ಇದೇ 11 ಗಂಟೆಗೆ ಸಭಾ ಕಾರ್ಯಕ್ರಮ ಆಯೋಜಿಸಲಾಗಿದ್ದು, ಸಭಾ ಕಾರ್ಯಕ್ರಮದಲ್ಲಿ ಹೊಸದುರ್ಗ ತಾಲ್ಲೂಕಿನ ಶ್ರೀ ಜಗದ್ಗುರು ಕುಂಚಿಟಿಗ ಮಹಾಸಂಸ್ಥಾನ ಮಠದ ಶ್ರೀ ಕಾಯಕ ಯೋಗಿ ಜಗದ್ಗುರು ಶ್ರೀ ಶಾಂತವೀರ ಸ್ವಾಮಿಜಿ ದೀವ್ಯ ಸಾನಿದ್ಯ ವಹಿಸಲಿದ್ದಾರೆ.
ಶ್ರೀ ಮಾರುತಿ ಸಚ್ಚಿದಾನಂದ ಆಶ್ರಮದ ಸದ್ಗುರು ಶ್ರೀ ಪರಂಪರ ಅವಧೂತ ಸತೀಶ ಶರ್ಮಜಿ ಮಹಾರಾಜ, ಹುಬ್ಬಳ್ಳಿ ಶ್ರೀ ಭಗವತ್ಪಾದ ಆಶ್ರಮದ ಸದ್ಗುರು ಶ್ರೀ ರಮೇಶ ಅವಧೂತ, ನಗರಸಭೆ ಅಧ್ಯಕ್ಷರಾದ ಎಂ.ಸಮೀವುಲ್ಲ, ಉಪಾಧ್ಯಕ್ಷ ಮನೋಹರ್ ಸೇರಿದಂತೆ ವಿವಿಧ ಕ್ಷೇತ್ರಗಳ ಗಣ್ಯರು ಭಾಗವಹಿಸಲಿದ್ದಾರೆ ಎಂದರು.
ಈ ಸಂದರ್ಭದಲ್ಲಿ ನಗರಸಭೆ ಸದಸ್ಯ ಯುವರಾಜ್ ,ಬೆಂಗಳೂರು ಉದ್ಯಮಿಗಳಾದ ಮೋಹನ್ , ರಾಧಕೃಷ್ಣ , ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!