filter: 0; fileterIntensity: 0.0; filterMask: 0; captureOrientation: 0; algolist: 0; multi-frame: 1; brp_mask:0; brp_del_th:null; brp_del_sen:null; motionR: 0; delta:null; module: video;hw-remosaic: false;touch: (-1.0, -1.0);sceneMode: 0;cct_value: 0;AI_Scene: (-1, -1);aec_lux: 262.0;aec_lux_index: 0;albedo: ;confidence: ;motionLevel: 0;weatherinfo: weather?null, icon:null, weatherInfo:100;temperature: 47;

ಅರಸೀಕೆರೆ:ಹಾರನಹಳ್ಳಿ ಸುಕ್ಷೇತ್ರ ಶ್ರೀ ಕೋಡಿಮಠ ಮಹಾ ಸಂಸ್ಥಾನ ಪೀಠಾಧ್ಯಕ್ಷರಾದ ಶ್ರೀ ಶ್ರೀ ಡಾ:ಶಿವಾನಂದ ಶಿವಯೋಗಿ ರಾಜೇಂದ್ರ ಮಹಾಸ್ವಾಮಿಗಳ ಅಪ್ಪಣೆ ಮೇರೆಗೆ 94ನೇ ಶ್ರೀ ಗುರುಯೋಗಿ ಪ್ರಭುಕುಮಾರ ಪಟ್ಟಾಧ್ಯಕ್ಷರ ಪುಣ್ಯ ಸ್ಮರಣೋತ್ಸವ ಕಾರ್ಯಕ್ರಮ ಶ್ರೀ ಕ್ಷೇತ್ರ ಕೋಡಿಮಠದಲ್ಲಿ ಇಂದು ನಡೆಯಿತು.

ಶ್ರೀ ಕ್ಷೇತ್ರ ಕೋಡಿಮಠ ಮಹಾಸಂಸ್ಥಾನವು ಒಂದು ಸಹಸ್ರ ಸಂವತ್ಸರ ಗಳ ಇತಿಹಾಸ ಹೊಂದಿದ ಪುಣ್ಯಕ್ಷೇತ್ರವಾಗಿದೆ.
ಸುಕ್ಷೇತ್ರ ಶ್ರೀ ಕೋಡಿಮಠವು1930 ಮತ್ತು ಅದಕ್ಕಿಂತ ಮೊದಲು ಯಾವ ಪೀಠಾಧಿಕಾರಿಗಳು ಇಲ್ಲದ ಕಾಲದಲ್ಲಿ ಕಂಚುಗಲ್ಲು ಬಿದರೆ ದೊಡ್ಡ ಮಠದ ಪೀಠಾಧಿಕಾರಿಗಳಾದ ಪೂಜ್ಯ ಶ್ರೀ ಪ್ರಭುಕುಮಾರ ಪಟ್ಟಾಧ್ಯಕ್ಷರು ಹಾರನಹಳ್ಳಿ ಶ್ರೀ ಕೋಡಿಮಠದಲ್ಲಿ ಐದು ಆರು ವರುಷಗಳು ವಾಸ್ತವ್ಯ ನಿಂತು ಶ್ರೀಮಠದ ಸಮಸ್ತ ಭಕ್ತಾದಿಗಳನ್ನೆಲ್ಲ ಸಂಘಟನೆ ಮಾಡಿ ಶ್ರೀ ಉರಿಲಿಂಗದೇವರು ಎಂಬುವರನ್ನು ಶ್ರೀ ಕೋಡಿಮಠದ ಪಟ್ಟಾಧಿಕಾರಿಗಳನ್ನಾಗಿ ಮಾಡಿದ ಕೀರ್ತಿ ಇವರಿಗೆ ಸಲ್ಲುತ್ತದೆ. ಅಲ್ಲದೆ ಪೂಜ್ಯ ಶ್ರೀ ಉರಿಲಿಂಗಸ್ವಾಮಿಗಳು ಅಕಾಲಿಕ ಲಿಂಗೈಕ್ಯರಾಗಿದ್ದರಿಂದ ಪುನಃ ಶ್ರೀ ಕೋಡಿಮಠವು ಪೀಠಾಧಿಕಾರಿಗಳಿಲ್ಲದೆ ಬರಿದಾದಾಗ ತಮ್ಮ ಪೂಜಾ ಸೇವೆಯಲ್ಲಿದ್ದ ಶ್ರೀನೀಲ ಲೋಚನ ಪೂಜ್ಯರನ್ನು 1933 ರಲ್ಲಿ ಶ್ರೀ ಕೋಡಿಮಠಕ್ಕೆ ಪೀಠಾಧಿಕಾರಿಗಳಾಗಿ ನಿಯೋಜಿಸಿದ ಪುಣ್ಯ ಮಹಾ ಕಾರ್ಯವು ಪೂಜ್ಯ ಪ್ರಭು ಕುಮಾರ ಪಟ್ಟಾಧ್ಯಕ್ಷರಿಗೆ ಸಲ್ಲುತ್ತದೆ ಎಂದು ಹುಬ್ಬಳ್ಳಿ ಮೂರು ಸಾವಿರ ಮಠದ ಪರಮಪೂಜ್ಯರಾದ ಶ್ರೀಮಾನ್ ಮಹಾರಾಜ ನಿರಂಜನ ಜಗದ್ಗುರು ಶ್ರೀ ಶ್ರೀ ಡಾ. ಗುರುಸಿದ್ಧ ರಾಜ ಯೋಗೇಂದ್ರ ಮಹಾಸ್ವಾಮಿಗಳು ತಿಳಿಸಿದರು.
ಅವರು ಕಾರ್ಯಕ್ರಮದಲ್ಲಿ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿ ಪ್ರಭುಕುಮಾರ ಪಟ್ಟಾಧ್ಯಕ್ಷರು ಮಹಾ ಯೋಗಿಯಾಗಿ ಶಿವಯೋಗ ಮಂದಿರವನ್ನು ತನ್ನ ಮಠವನ್ನಾಗಿ ಮಾಡಿಕೊಂಡು ವಟು ವೃಂದಕ್ಕೆ ತನ್ನ ಯೋಗದ ತೇಜಸ್ ಅನ್ನು ತುಂಬಿದರು. ಸುಖಾಸನ ದಿಂದ ಸಿದ್ದಾಸನದ ವರೆಗೆ 84 ಆಸನಗಳನ್ನು ಅಭ್ಯಾಸ ಮಾಡಿದ್ದರು.
ಪ್ರಭುಕುಮಾರ ಸ್ವಾಮಿಗಳು ಉತ್ತರ ಭಾರತದಲ್ಲಿ ಸಾಧು-ಸಂತರ ಯೋಗಾ ಪ್ರದರ್ಶನದಲ್ಲಿ ಭಾಗವಹಿಸಿ ಯೋಗ ಪ್ರದರ್ಶನ ಮಾಡಿ ಹತ್ತು ಸಾವಿರ ಯೋಗಿಗಳಲ್ಲಿ ಮೊದಲಿಗರಾಗಿ “ಯೋಗಿ ರಾಜ ಪ್ರಭುಕುಮಾರ್ ಸ್ವಾಮಿಗಳು” ಎಂದು ಬಿರುದು ಪಡೆದುಕೊಳ್ಳುತ್ತಾರೆ ಎಂದು ತಿಳಿಸಿದರು.
ಪ್ರಭುಕುಮಾರ ಪಟ್ಟಾಧ್ಯಕ್ಷರ 94ನೇ ವರ್ಷದ ಪುಣ್ಯ ಸಂಸ್ಮರಣೆ ಕಾರ್ಯಕ್ರಮದಲ್ಲಿ ಜಡೆ ಸಂಸ್ಥಾನ ಮಠದ ಮಹಾಂತ ಸ್ವಾಮೀಜಿಯವರು ಯೋಗಾಸನ ಪ್ರದರ್ಶಿಸಿದ್ದು ವೇದಿಕೆಯ ಮೇಲಿದ್ದ ಮಠಾಧೀಶರು ಹಾಗೂ ನೆರೆದಿದ್ದ ಭಕ್ತರನ್ನು ಸೂಜಿಗಲ್ಲಿನಂತೆ ಸೆಳೆದು ಮೆಚ್ಚುಗೆ ಗಳಿಸಿತು.
ಈ ಕಾರ್ಯಕ್ರಮದಲ್ಲಿ ಕರ್ನಾಟಕ ಸರ್ಕಾರದ ಸಚಿವಾಲಯದ ಅಧೀನ ಕಾರ್ಯದರ್ಶಿ ನರಸಿಂಹಮೂರ್ತಿ ಹಾಗೂ ಕ್ರೀಡಾ ಮತ್ತು ಯುವ ಸಬಲೀಕರಣ ಇಲಾಖೆಯ ಸಹಾಯಕ ನಿರ್ದೇಶಕರಾದ ಕೆ.ಶಶಿಕಲಾ ಇವರಿಗೆ ಶ್ರೀಮಠದ ವತಿಯಿಂದ ಸನ್ಮಾನ ಮಾಡಲಾಯಿತು. ಈ ಕಾರ್ಯಕ್ರಮದಲ್ಲಿ ವಿವಿಧ ಮಠಗಳ ಹರಗುರು ಚರಮೂರ್ತಿಗಳು ಭಾಗವಹಿಸಿದ್ದರು.
ಮಾಜಿ ಶಾಸಕರಾದ ಕೆ ಪಿ ಪ್ರಭುಕುಮಾರ್ ಹಾಗೂ ಜಿ ಎಸ್ ಪರಮೇಶ್ವರಪ್ಪ, ಇನ್ನಿತರ ಗಣ್ಯರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಭಾಗವಹಿಸಿದ್ದ ಭಕ್ತಾದಿಗಳಿಗೆ ಅನ್ನದಾಸೋಹ ವ್ಯವಸ್ಥೆ ಮಾಡಲಾಗಿತ್ತು.

Leave a Reply

Your email address will not be published. Required fields are marked *

error: Content is protected !!