ಪರಿಸರದ ಉಳಿವಿಗೆ ಪ್ರತಿಯೊಬ್ಬರೂ ಗಿಡ ನೆಟ್ಟು ಸಂರಕ್ಷಣೆ ಮಾಡಬೇಕು
ಅರಸೀಕೆರೆ:ಜಾಜೂರು ಗ್ರಾಮ ಪಂಚಾಯಿತಿ, ಹಸಿರು ಭೂಮಿ ಪ್ರತಿಷ್ಠಾನ ಅರಸೀಕೆರೆ ತಾಲ್ಲೂಕು ಘಟಕ,ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಹಾಲು ಉತ್ಪಾದಕರ ಸಹಕಾರ ಸಂಘ ಕಲ್ಲನಾಯಕನಹಳ್ಳಿ ಹಾಗೂ ಗ್ರಾಮಸ್ಥರು ಜಂಟಿಯಾಗಿ ವಿಶ್ವ ಪರಿಸರ ದಿನಾಚರಣೆಯನ್ನು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ವಿವಿಧ ಹಣ್ಣಿನ ಗಿಡಗಳು ಹಾಗೂ ಇತರೆ ಗಿಡಗಳನ್ನು ನೆಡುವುದರ ಮೂಲಕ ಆಚರಿಸಿದರು. ಪತ್ರಕರ್ತ ಕೆ ಎಸ್ ಶ್ರೀಹರಿಪ್ರಸಾದ್ ಮಾತನಾಡಿ ಪ್ರತಿಯೊಬ್ಬರು ಪರಿಸರದ ಉಳಿವಿಗೆ ಗಿಡ ನೆಟ್ಟು ಘೋಷಣೆ ಮಾಡುವುದು ಇಂದಿನ ದಿನಗಳಲ್ಲಿ ಅತ್ಯವಶ್ಯಕವಾಗಿದೆ ಎಂದು ಹೇಳಿದರು.
ಈ ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿ ಸದಸ್ಯಕಾಡುಸಿದ್ದಪ್ಪ, ಹಸಿರು ಭೂಮಿ ಪ್ರತಿಷ್ಠಾನದ ಗೌರವಾಧ್ಯಕ್ಷರಾದ ರಾಮಕೃಷ್ಣ ಎನ್ ವಿ, ಪತ್ರಕರ್ತ ಆರ್ ಅಶೋಕ್ ಹಾಗೂ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಎಸ್ ಸಿದ್ದಪ್ಪ, ಕಾರ್ಯದರ್ಶಿ ತಿಮ್ಮೇಗೌಡ, ಜಾಜೂರು ಗ್ರಾಮ ಪಂಚಾಯಿತಿ ವೃತ್ತದ ಸಿ ಆರ್ ಪಿ ವನಿತ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ಉಷಾ ಎಂ, ಸಹ ಶಿಕ್ಷಕಿ ಪವಿತ್ರ, ಮಂಜುನಾಥ್, ಗ್ರಾಮಸ್ಥರು, ಶಾಲಾ ಮಕ್ಕಳು, ಶಾಲಾ ಸಿಬ್ಬಂದಿ ಉಪಸ್ಥಿತರಿದ್ದರು. ಪರಿಸರ ಸಂರಕ್ಷಣೆಯಲ್ಲಿ ತೊಡಗಿರುವ ಆರನೇ ತರಗತಿ ವಿದ್ಯಾರ್ಥಿ ಸಿದ್ದಾರ್ಥ, ಐದನೇ ತರಗತಿ ವಿದ್ಯಾರ್ಥಿ ಚಿರಂತನ್ ಡಿ ಎಂ ಇವರಿಗೆ ಸನ್ಮಾನಿಸಲಾಯಿತು.