ಅಪಘಾತ ತಡೆಗೆ ಸಂಚಾರಿ ಕನ್ನಡಿ ಅಳವಡಿಕೆ
ಅರಸೀಕೆರೆ: ನಗರದ ವಾರ್ಡ್ ಸಂಖ್ಯೆ 31ರ ನಗರಸಭೆ ಸದಸ್ಯರಾದ ಸುಜಾತ ರಮೇಶ್ ಮತ್ತು ಸ್ನೇಹಿತರ ಬಳಗದ ವತಿಯಿಂದ 2020ರಲ್ಲಿ ಹಾಸನ ಜಿಲ್ಲೆಯಲ್ಲಿ ಮೊಟ್ಟಮೊದಲ ಬಾರಿಗೆ ವಾರ್ಡಿನ ಎಲ್ಲಾ ಕಿರಿದಾದ ರಸ್ತೆ ತಿರುವುಗಳಲ್ಲಿ ಅಪಘಾತಗಳನ್ನು ತಪ್ಪಿಸುವುದಕ್ಕೆ ಸಂಚಾರಿ ಕನ್ನಡಿಯನ್ನು ಹಾಕಿಸಿ ಒಂದು ಮಹತ್ವ ಪೂರ್ಣ ಯೋಜನೆಯನ್ನು ಜಾರಿಗೆ ತರುವ ಮೂಲಕ ಉತ್ತಮ ಕೆಲಸವನ್ನು ಮಾಡಿದರು.
ಈ ಸ್ನೇಹಿತರ ಬಳಗದ ಪ್ರಮುಖರಾದ ಆದರ್ಶ ಲ್ಯಾಬ್ ನ ಜಗನ್ನಾಥ್ ರೈ ಜೊತೆ ಚರ್ಚೆ ಮಾಡಿ ಮುಂದಿನ ದಿನಗಳಲ್ಲಿ ಯಾವುದೇ ಅಪಘಾತಗಳು ನಡೆಯದಂತೆ ಜೀವವನ್ನು ಕಾಪಾಡಿದ ಪುಣ್ಯದ ಕೆಲಸ ಇನ್ನೊಂದಿಲ್ಲ ಎಂದು ತೀರ್ಮಾನಿಸುವ ಮುಖಾಂತರ ಅವರು ತಮ್ಮ ಶ್ರಮ ಮತ್ತು ಹಣದ ಖರ್ಚಿನ ಬಗ್ಗೆ ಯೋಚಿಸದೆ ಅಪಘಾತವನ್ನು ತಪ್ಪಿಸಿದ ತೃಪ್ತಿ ಸಾರ್ಥಕತೆ ನೆಮ್ಮದಿ ಈ ಬಳಗಕ್ಕೆ ಇದೆ. ಬಹಳಷ್ಟು ಜನ ಬುದ್ಧಿವಂತ ಮತ್ತು ಜವಾಬ್ದಾರಿಯುತ ಸಾರ್ವಜನಿಕರು, ಈ ಸಂಚಾರಿ ಕನ್ನಡಿಯ ಬಗ್ಗೆ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ. ಒಳ್ಳೆಯ ಜನರ ಒಳ್ಳೆಯ ಮಾತು ಈ ಬಳಗಕ್ಕೆ ಉತ್ತೇಜನ ನೀಡಿದೆ. ಈ ದಿನ ಹಳೆಯ ಕನ್ನಡಿಯನ್ನು ತೆಗೆದು ಹೊಸ ಕನ್ನಡಿಗಳನ್ನು ಅಳವಡಿಸುವ ಮೂಲಕ ಸಾರ್ವಜನಿಕರಿಗೆ ಅನುಕೂಲವಾಗುವಂತ ಅರ್ಥಪೂರ್ಣವಾದಂತಹ ಕಾರ್ಯಗಳನ್ನು ಈ ಬಳಗ ಮಾಡಿದೆ. ಈ ಬಳಗ ಸಾರ್ವಜನಿಕರಿಂದ ಮೆಚ್ಚುಗೆಯನ್ನು ಪಡೆದಿದೆ. ಇಂತಹ ಅರ್ಥಪೂರ್ಣ ಕಾರ್ಯಗಳನ್ನು ಮಾಡಲು ಎಲ್ಲಾ ರೀತಿಯ ಸಹಕಾರ ನೀಡಿದ ಎಲ್ಲಾ ಸ್ನೇಹಿತರಿಗೆ ಧನ್ಯವಾದಗಳು ತಿಳಿಸಿದೆ.