ಶ್ರೀ ಗುರುರಾಯರ ಆರಾಧನಾ ಮಹೋತ್ಸವ ವಿಜೃಂಭಣೆಯೊಂದಿಗೆ ಸಂಪನ್ನ
ಅರಸೀಕೆರೆ :ಶ್ರೀ ರಾಘವೇಂದ್ರ ಮಠದಲ್ಲಿ ಕಳೆದ 9 ರಿಂದ ಮೂರು ದಿನಗಳ ಕಾಲ ವಿಜೃಂಭಣೆಯಲ್ಲಿ ನಡೆದ ಶ್ರೀ ಗುರು ರಾಘವೇಂದ್ರ ಸಾರ್ವಭೌಮರ ಆರಾಧನಾ ಮಹೋತ್ಸವ ವಿಶೇಷ ಪೂಜೆ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಮಂಗಳವಾರ ಸಂಪನ್ನಗೊಂಡಿತು.
ಮೂರು ದಿನಗಳು ಶ್ರೀ ಮಠಕ್ಕೆ ಭಕ್ತರ ಸಾಗರ ಹರಿದು ಬಂದಿತ್ತು, ಪೂರ್ವಾರಾಧನೆ, ಮಧ್ಯಾಹ್ನರಾಧನೆ, ಉತ್ತರಾರಾಧನೆ ಕಾರ್ಯಕ್ರಮಗಳಲ್ಲಿ ನಿತ್ಯವೂ ಕ್ಷೀರಾಭಿಷೇಕ, ತುಳಸಿ ಅರ್ಚನೆ ರಾಯರ ಪಾದಪೂಜೆ, ಕನಕಾಭಿಷೇಕ, ಅಲಂಕಾರ, ಮಹಾ ಮಂಗಳಾರತಿ ಮತ್ತು ಅನ್ನ ಸಂತರ್ಪಣೆಗಳು ನಡೆದವು, ಸಂಜೆ ಸಾಂಸ್ಕೃತಿಕ ಕಾರ್ಯಕ್ರಮಗಳು ಆಯೋಜಿಸಲಾಗಿತ್ತು, ಹರೇ ಶ್ರೀನಿವಾಸ ಭಜನಾ ಮಂಡಳಿ ಭಜನಾ ಕಾರ್ಯಕ್ರಮ ಗೀತಾ ರಮೇಶ್ ಮತ್ತು ಶಿಷ್ಯರಿಂದ ಸಂಗೀತ ಕಾರ್ಯಕ್ರಮಗಳು, ಅರಸೀಕೆರೆ ಸೀತಾ ಮಹಿಳಾ ಸಂಘದಿಂದ ದಾಸರವಾಣಿ ಸಮರ್ಪಣೆ, ಸಾಂಸ್ಕೃತಿಕ ಕಾರ್ಯಕ್ರಮಗಳು ಯಶಸ್ವಿಯಾಗಿ ನಡೆದವು. ನಿತ್ಯವೂ ಸಾವಿರಾರು ಭಕ್ತರು ಶ್ರೀ ಅವರ ದರ್ಶನ ಪಡೆದು ಮಹಾಪ್ರಸಾದ ಸ್ವೀಕಾರದೊಂದಿಗೆ ಕೃತಾರ್ಥರಾದರು.
ಶ್ರೀ ಅವರ ಉತ್ಸವವು ನಗರದ ಪ್ರಮುಖ ಬೀದಿಗಳಲ್ಲಿ ವಿಜೃಂಭಣೆಯಿಂದ ಜರಗಿತು ಶ್ರೀ ಗುರುರಾಯರ ಆರಾಧನಾ ಮಹೋತ್ಸವಕ್ಕೆ ಸಹಕರಿಸಿದ ಎಲ್ಲ ಭಕ್ತ ಸಮೂಹಕ್ಕೂ ರಾಘವೇಂದ್ರ ಮಠದ ಸೇವಾ ಸಮಿತಿ ಕೃತಜ್ಞತೆ ಹೇಳಿದೆ.