ಅರಸೀಕೆರೆ: ನಗರದ ಹೊರವಲಯದಲ್ಲಿರುವ ಜಾಜೂರು ಗ್ರಾಮ ಬಳಿಯ ಶ್ರೀ ಸಂಕಟ ಮೋಚನ ಪಾರ್ಶ್ವ ಭೈರವ ಧಾಮಕ್ಕೆ ಇಂದು ಗೃಹ ಇಲಾಖೆ ನೂತನ ಪ್ರಧಾನ ಕಾರ್ಯದರ್ಶಿ ಶರತ್ ಚಂದ್ರ ಭೇಟಿ ನೀಡಿದರು.
ಶ್ರೀ ಕ್ಷೇತ್ರದಲ್ಲಿರುವ ಸಂಕಟಮೋಚನ ಪಾರ್ಶ್ವಭೈರವ ದಾಮ, ನಿರ್ಮಾಣ ಹಂತದಲ್ಲಿರುವ ಶ್ರೀ ಶಾಂತಿ ಗುರುದೇವ್, ಶ್ರೀ ಪದ್ಮಾವತಿ ದೇವಿ ಮತ್ತು ಗೋಶಾಲೆಗೆ ಭೇಟಿ ನೀಡಿದರು. ಈ ಸಂದರ್ಭದಲ್ಲಿ ಅಭಿವೃದ್ಧಿ ಸಮಿತಿ ಅಧ್ಯಕ್ಷರಾದ ಅಶೋಕ್ ಸುರಾನ, ಮಧುಮತಿ ಸುರಾನ, ಮುಖಂಡರಾದ ಮಾಂಗಿಲಾಲ್, ಉದ್ಯಮಿ ಚೇತನ್ ಮೆಹತಾ, ಚೇತನ್ ಜೈನ್, ಡಿ. ವೈ. ಎಸ್. ಪಿ. ಗೋಪಿ.ಗ್ರಾಮಾಂತರ ಪೊಲೀಸ್ ಇನ್ಸ್ಪೆಕ್ಟರ್ ಅರುಣ್ ಕುಮಾರ್, ನಾಗೇಂದ್ರ ,ಸಿದ್ದೇಶ್, ಋತ್ವಿಕ್, ಗೋಶಾಲೆ ಮೇಲ್ವಿಚಾರಕ ಮೋಹನ್ ಕುಮಾರ್ ಹಾಗೂ ಇನ್ನಿತರರು ಭಾಗವಹಿಸಿದ್ದರು.
